September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಡಿ.2 : ಕಾಪಿನಡ್ಕದಲ್ಲಿ 65 ಕೆಜಿ ವಿಭಾಗದ ಪುರುಷರ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ: ಸ.ಕಿ.ಪ್ರಾ.ಶಾಲೆ ಮತ್ತು ಗೆಳೆಯರ ಬಳಗ ಕಾಪಿನಡ್ಕ ಇದರ 25 ನೇ ವರ್ಷದ ರಜತ ಮಹೋತ್ಸವ ಸಂಭ್ರಮ

ಬಳಂಜ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಗೆಳೆಯರ ಬಳಗ ಕಾಪಿನಡ್ಕ ಇದರ 25 ನೇ ವರ್ಷದ ರಜತ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬೆಳ್ತಂಗಡಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಇದರ ಸಹಯೋಗದಲ್ಲಿ 65 ಕೆಜಿ ವಿಭಾಗದ ಹೊನಲು ಬೆಳಕಿನ ಪುರುಷರ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಕಾಪಿನಡ್ಕ ಶಾಲಾ ಮೈದಾನದಲ್ಲಿ ಡಿ.2 ರಂದು ನಡೆಯಲಿದೆ.

ಬೆಳಿಗ್ಗೆ ಧ್ವಜಾರೋಹಣ ಸಭಾ ಕಾರ್ಯಕ್ರಮ ಹಾಗೂ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.

ಸಂಜೆ ಸಭಾ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಶಾಸಕರಾದ ಕೆ‌. ಹರೀಶ್ ಕುಮಾರ್,ಪ್ರತಾಪ್ ಸಿಂಹ ನಾಯಕ್, ಉಭಯ ಜಿಲ್ಲಾ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲಿಯಾನ್ ಕಾಪಿನಡ್ಕ,ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ.

ನಂತರ ನಡೆಯುವ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ರೂ.800 ಪ್ರವೇಶ ಶುಲ್ಕವಿದ್ದು ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಬಂದವರಿಗೆ ರೂ.15000,ದ್ವೀತಿಯ 10000,ತೃತೀಯ 5000,ಚತುರ್ಥ 5000 ಮತ್ತು ಗೆಳೆಯರ ಬಳಗ ಶಾಶ್ವತ ಫಲಕ ಸಿಗಲಿದೆ. ಹಾಗೂ ವೈಯಕ್ತಿಕ ಬಹುಮಾನ ದೊರೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.


ಮನೋರಂಜನಾ ಕಾರ್ಯಕ್ರಮ: ರಜತ ಮಹೋತ್ಸವದ ಅಂಗವಾಗಿ ಸಂಜೆ ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ರಾತ್ರಿ ಗಂಟೆ 9 ರಿಂದ ಕಲಾಶ್ರೀ ಕುಡ್ಲ ಬಲೇ ತೆಲಿಪಲೆ ಖ್ಯಾತಿಯ ಕಲಾವಿದರಿಂದ ಕುಸಲ್ದ ಕುರ್ಲರಿ ಟೆಸ್ಟ್ ಆಫ್ ಚರ್ಮುರಿ ಹಾಸ್ಯ ಪ್ರದರ್ಶನಗೊಳ್ಳಲಿದೆ.

Related posts

ಬೆಳಾಲು ಪ್ರೌಢಶಾಲೆಯಲ್ಲಿ ಮಾಸ್ತಿ ಸಂಸ್ಮರಣ ಕಾರ್ಯಕ್ರಮ

Suddi Udaya

ಸರ್ವೋದಯ ಪಕ್ಷದಿಂದ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು :ಆದಿತ್ಯ ನಾರಾಯಣ್

Suddi Udaya

ಅಯೋಧ್ಯೆಯಲ್ಲಿ ಶ್ರೀ ರಾಮನ ಮಂದಿರದ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆಯ ಪ್ರಯುಕ್ತ ಬೆಳ್ತಂಗಡಿಯ ರಾಮ ಕ್ಷತ್ರಿಯ ಸಂಘದಿಂದ ರಾಮೋತ್ಸವ

Suddi Udaya

ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟ: ಬದನಾಜೆ ಸ.ಉ. ಪ್ರಾ.ಶಾಲಾ ವಿದ್ಯಾರ್ಥಿಗಳ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಭಾರತೀಯ ಸೇನೆಯ ಪರಾಕ್ರಮ, ಶೌರ್ಯ, ನಿಖರತೆ ಶ್ಲಾಘನೀಯ: ರಕ್ಷಿತ್ ಶಿವರಾಂ

Suddi Udaya

ಉಜಿರೆ: ಪ್ರಾಧ್ಯಾಪಕ ಮಹಮ್ಮದ್ ಇಕ್ಬಾಲ್ ರವರಿಗೆ ಡಾಕ್ಟರೇಟ್

Suddi Udaya
error: Content is protected !!