22.9 C
ಪುತ್ತೂರು, ಬೆಳ್ತಂಗಡಿ
March 7, 2026
ಸಮಸ್ಯೆ

ಕೊಕ್ಕಡ ಬೆಳೆ ವಿಮೆ ಸಮಸ್ಯೆ – ಟಾಟಾ ಎಐಜಿ ಉತ್ತರ

ಕೊಕ್ಕಡ: ರೈತರಿಗೆ 2024-25 ಸಾಲಿನ ಬೆಳೆ ವಿಮೆ ಲಭಿಸಿಲ್ಲ ಎಂದು ಆರೋಪಿಸಿ, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮೂಲಕ ಟಾಟಾ ಎಐಜಿ ಇನ್ಸೂರೆನ್ಸ್ ಕಂಪನಿಗೆ ಮನವಿ ಪತ್ರ ಕಳುಹಿಸಲಾಗಿತ್ತು.

ಸಿ ಸಿ ಬ್ಯಾಂಕ್‌ ಅಧ್ಯಕ್ಷರು, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಿಂದ ಬೆಳೆ ವಿಮೆ ಕಂಪನಿಗೆ ಡಿಸಿ ಕಛೇರಿ ಮುಂದೆ ಸಾವಿರಾರು ಜನ ಸೇರಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಕಂಪನಿಯು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಅವರಿಗೆ ಉತ್ತರ ನೀಡಿದೆ. ಕಂಪನಿಯು ನೀಡಿದ ಉತ್ತರದಲ್ಲಿ, ಬೆಳೆ ನಷ್ಟದ ಮೌಲ್ಯಮಾಪನವನ್ನು ಆಧುನಿಕ ತಂತ್ರಜ್ಞಾನಗಳ ಆಧಾರದ ಮೇಲೆ ಮಾಡಲಾಗುತ್ತಿದೆ ಎಂದು ತಿಳಿಸಿದೆ. ಆಟೋಮೇಟೆಡ್ ವೆದರ್ ಸ್ಟೇಷನ್ (AWS) ಮೂಲಕ ಸಂಗ್ರಹವಾಗುವ ಹವಾಮಾನ ಮಾಹಿತಿಯನ್ನೂ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮಾನಿಟರಿಂಗ್ ಕೇಂದ್ರ (KSNDMC) ನೀಡುವ ಅಂಕಿಅಂಶಗಳನ್ನೂ ಆಧಾರವಾಗಿಟ್ಟುಕೊಂಡು ಬೆಳೆ ನಷ್ಟವನ್ನು ಪರಿಶೀಲಿಸಲಾಗುತ್ತದೆ. ಆದರೆ ಅಂಕಿ ಅಂಶಗಳು ಇನ್ನು ಬಂದಿಲ್ಲ ಎಂದು ಕಂಪನಿ ತಿಳಿಸಿದೆ. ಈ ಮಾಹಿತಿಗಳ ಆಧಾರದ ಮೇಲೆ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ನಡೆಯುತ್ತಿದ್ದು, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಕೊಕ್ಕಡ ಗ್ರಾಮದ ರೈತರಿಗೆ ಬೆಳೆ ವಿಮೆ ಸಿಗದಿರುವ ಬಗ್ಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಟಾಟಾ ಎಐಜಿ ಇನ್ಸೂರೆನ್ಸ್ ಕಂಪನಿಯಿಂದ ಈ ಸ್ಪಷ್ಟನೆ ನೀಡಲಾಗಿದೆ.

Related posts

ಬೆಳ್ತಂಗಡಿ: ಗಾಳಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಕೆಪಿಸಿಸಿ ಪ್ರ. ಕಾರ್ಯದರ್ಶಿ ರಕ್ಷಿತ್ ಶಿವರಾಂ ಭೇಟಿ

Suddi Udaya

ವೇಣೂರು ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ವೇಣೂರು ಅರಣ್ಯ ಇಲಾಖೆಯಿಂದ ಬೋನು ಅಳವಡಿಕೆ

Suddi Udaya

ಕಕ್ಕಿಂಜೆ: ಮನ್ನಡ್ಕಪಾದೆಯಲ್ಲಿ ಗುಡ್ಡಕ್ಕೆ ಬೆಂಕಿ

Suddi Udaya

ಕಾಡಾನೆ ದಾಳಿ ಪ್ರಕರಣ: ಮೃತರ ಕುಟುಂಬಕ್ಕೆ ಗರಿಷ್ಠ ಮೊತ್ತ ಪರಿಹಾರ ನೀಡಲು ಉದ್ಯಮಿ ಗಣೇಶ್ ಕಲಾಯಿ ಒತ್ತಾಯ

Suddi Udaya

ಬೆಳ್ತಂಗಡಿ-ಹೆಬೆಬೈಲ್ ರಸ್ತೆಯಲ್ಲಿ ಅಪಾಯದ ಸ್ಥಿತಿಯಲ್ಲಿ ತಡೆಗೋಡೆ ಹಾಗೂ ವಿದ್ಯುತ್ ಕಂಬ

Suddi Udaya

ಉರುವಾಲು: ಮನೆಗೆ ಸಿಡಿಲು ಬಡಿದು ಅಪಾರ ಹಾನಿ: ಅದೃಷ್ಟವಶಾತ್ ಅಪಾಯದಿಂದ ಪಾರಾದ ಮನೆಯವರು

Suddi Udaya
error: Content is protected !!