22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಪ್ರಮುಖ ಸುದ್ದಿ

ನಿರೀಕ್ಷೆಗೆ ನಿರಾಸೆ ತಂದ ಸತ್ವಹೀನ ಬಜೆಟ್ : ಹರೀಶ್ ಪೂಂಜ

ಬೆಳ್ತಂಗಡಿ: ಮಾ.06ರಂದು ಬಜೆಟ್ ಭಾಷಣದ ಆರಂಭದ ಮುನ್ನುಡಿಯಲ್ಲೇ ಕೇಂದ್ರ ಸರಕಾರವನ್ನು ಟೀಕಿಸಿ ಒಕ್ಕೂಟ ವ್ಯವಸ್ಥೆಯನ್ನು ಪ್ರಶ್ನೆ ಮಾಡಿದ ಕರ್ನಾಟಕ ಕಾಂಗ್ರೆಸ್ ಸರಕಾರದ ಮುಂಗಡ ಪತ್ರ ನಿರೀಕ್ಷೆಗೆ ನಿರಾಸೆ ತಂದ ಸತ್ವಹೀನ ಬಜೆಟ್ ಆಗಿದೆಯೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಪ್ರತಿಕ್ರಿಯಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಜಿ ಎಸ್ ಟಿ ಉತ್ತಮ ಮಟ್ಟದಲ್ಲಿ ಸಂಗ್ರಹವಾಗಿದ್ದು ಸಹಜವಾಗಿ ಶಾಸನಬದ್ದವಾಗಿ ರಾಜ್ಯದ ಪಾಲಿಗೆ ಹೆಚ್ಚಿನ ಸಂಪನ್ಮೂಲ ಲಭ್ಯವಾಗಿದ್ದು ಅಸಮರ್ಪಕ ಆಡಳಿತ ನೀತಿಯಿಂದ ರಾಜಸ್ವ ಕೊರತೆಯುಂಟಾಗಿ ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಿರುವ ಹೇರಳ ಸಾಲದಿಂದ ವಿತ್ತೀಯ ಕೊರತೆ ಸಾಲ ಹಾಗೂ ಸಾಲದ ಬಡ್ಡಿ ಮರುಪಾವತಿ ಸೇರಿದಂತೆ ಶ್ರೀ ಸಾಮಾನ್ಯನಿಗೆ ಹೊರೆಯಾಗಲಿದೆ.

ಕೃಷಿ ತೋಟಗಾರಿಕೆ ಸಹಕಾರ ಪಶುಸಂಗೋಪನೆ ಆರೋಗ್ಯ ವಲಯ ಒಳಗೊಂಡಂತೆ ಕರಾವಳಿ ಜನತೆಗೆ ಸಂಪೂರ್ಣ ನಿರಾಸೆ ತಂದ ಮುಂಗಡ ಪತ್ರ ಇದಾಗಿದೆಯೆಂದು ಶಾಸಕ ಹರೀಶ್ ಪೂಂಜ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Related posts

ತೋಟತ್ತಾಡಿ: ಅರಂತಬೈಲು ಶ್ರೀ ಉಳ್ಳಾಲ್ತಿ ಭಜನಾ ಮಂದಿರದಲ್ಲಿ ನವರಾತ್ರಿ ಭಜನಾ ಕಾರ್ಯಕ್ರಮ ಉದ್ಘಾಟನೆ

Suddi Udaya

ಗಿನ್ನಿಸ್ ವಿಶ್ವ ದಾಖಲೆ ಮಾಡಿದ ಶೌರ್ಯ ಎಸ್ ವಿ ರವರಿಗೆ ಮತ್ತೊಂದು ಪ್ರಶಸ್ತಿಯ ಗರಿ

Suddi Udaya

ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿಂದ ಧನಸಹಾಯ ವಿತರಣೆ

Suddi Udaya

ಕಾಂಗ್ರೆಸ್ ನಾಯಕರು ಆಯೋಜಿಸಿದ್ದ ಗಣೇಶೋತ್ಸವಕ್ಕೆ ಶಾಸಕ ಹರೀಶ್ ಪೂಂಜ ಮುಖ್ಯ ಅತಿಥಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಬ್ಯಾನರ್

Suddi Udaya

ಬೆಳ್ತಂಗಡಿ ಎಸ್‌ಸಿಡಿಸಿಸಿ ಬ್ಯಾಂಕ್ ಬೆಳ್ತಂಗಡಿ ಶಾಖಾ ಕಟ್ಟಡದಲ್ಲಿ ಹೊಸ ಎಟಿಎಂ ಹಾಗೂ ಲಿಫ್ಟ್ ಉದ್ಘಾಟನೆ

Suddi Udaya

ಕೊಕ್ಕಡ ಸೌತಡ್ಕ ದೇವಸ್ಥಾನದ ಬಳಿಯ ಕೆಲ ಅಂಗಡಿಗಳ ತೆರವಿಗೆ ಕಂದಾಯ ಇಲಾಖೆ ನೋಟೀಸು: 10 ದಿನಗಳ ಗಡುವು

Suddi Udaya
error: Content is protected !!