ಗುರುವಾಯನಕೆರೆ: ಇತಿಹಾಸ ಪ್ರಸಿದ್ಧ ಗುರುವಾಯನಕೆರೆ ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರ ರತ್ನಗಿರಿಯಲ್ಲಿ ಮಾ.7ರಂದು “ದೈವರಾಜ ಗುಳಿಗ” ನೇಮೋತ್ಸವವು ಜರುಗಲಿದೆ.
ರತ್ನಗಿರಿ ಸನ್ಯಾಸಿ ಗುಳಿಗ ಸನ್ನಿಧಿಯಲ್ಲಿ ಬೆಳಿಗ್ಗೆ 10 ರಿಂದ ಕಳಶ ತಂಬಿಲ ಪರ್ವ, ಮಧ್ಯಾಹ್ನ 1 ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 6 ರಿಂದ ದೈವರಾಜ ಗುಳಿಗ ನೇಮೋತ್ಸವವು ಜರುಗಲಿದ್ದು ಈ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ತನು-ಮನ-ಧನಗಳಿಂದ ಸಹಕರಿಸಿ, ದೈವದ ಸಿರಿಮುಡಿ ಗಂಧ-ಪ್ರಸಾದವನ್ನು ಸ್ವೀಕರಿಸಿ ದೈವದ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











