33.4 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

‘ ಟೆಕ್ನೋತ್ಸವ- 2026’ ರಾಜ್ಯಮಟ್ಟದ ಐಟಿ ಉತ್ಸವ : ಉಜಿರೆಯ ಎಸ್.ಡಿ.ಎಂ ಕಾಲೇಜಿಗೆ ರನ್ನರ್ ಆಫ್ ಚಾಂಪಿಯನ್

ಉಜಿರೆ: ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಕಾಲೇಜಿನ ಬಿಸಿಎ ವಿಭಾಗವು ಆಯೋಜಿಸಿದ ಟೆಕ್ನೋತ್ಸವ – 2026′ ರಾಜ್ಯ ಮಟ್ಟದ ಐಟಿ ಉತ್ಸವದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ 20 ವಿದ್ಯಾರ್ಥಿಗಳ ತಂಡವು 7 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ಉತ್ಸವದಲ್ಲಿ ರಾಜ್ಯ ಮಟ್ಟದ ಒವರ್ ಆಲ್ ರನ್ನರ್ ಆಫ್ ಚಾಂಪಿಯನ್ಸ್ ಗಳಾಗಿ ಹೊರ ಹೊಮ್ಮಿದ್ದಾರೆ.

ರಾಜ್ಯ ಮಟ್ಟದ ಟೆಕ್ನೋತ್ಸವ – 2026 ಐಟಿ ಉತ್ಸವದಲ್ಲಿ ಒಟ್ಟು 10 ಕ್ಕೂ ಹೆಚ್ಚು ವಿವಿಧ ಕಾಲೇಜಿನ ತಂಡಗಳು ಭಾಗವಹಿಸಿದ್ದವು. ಉಜಿರೆಯ ಎಸ್.ಡಿ.ಎಂ ತಂಡವನ್ನು ಕಾಲೇಜಿನ ಬಿಸಿಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಅಕ್ಷತಾ ಜೈನ್ ನೇತೃತ್ವವನ್ನು ವಹಿಸಿದ್ದರು.

ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ರಾಜ್ಯ ಮಟ್ಟದ ಒವರ್ ಆಲ್ ರನ್ನರ್ ಆಫ್ ಚಾಂಪಿಯನ್ಸ್ ಪ್ರಶಸ್ತಿಯ ಜೊತೆಗೆ 800 ಮೊತ್ತದ ನಗದು ಬಹುಮಾನವನ್ನು ನೀಡಿ ಅಭಿನಂದಿಸಿದರು. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ ಸಂಸ್ಥೆಯ ಆಡಳಿತ ಮಂಡಳಿ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್, ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪೂರನ್ ವರ್ಮ, ಎಸ್.ಡಿ.ಎಂ (ಸ್ವಾಯತ್ತ) ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ, ವಿದ್ಯಾರ್ಥಿ ಸಮೂಹ ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ.

ಪ್ರಶಸ್ತಿಗಳ ವಿವರ : ವೆಬ್ ಡಿಸೈನಿಂಗ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ತಂಡವು ಪ್ರಥಮ ಬಹುಮಾನ ಪಡೆದು ತಂಡದಲ್ಲಿ ಕಾಲೇಜಿನ ಬಿಸಿಎ ವಿದ್ಯಾರ್ಥಿಗಳಾದ ಸವೀನ್ ಮತ್ತು ಸಾತ್ವಿಕ್ ಎಮ್.ಎಸ್. ಭಾಗವಹಿಸಿದ್ದರು. ಕೋಡಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದು ತಂಡದಲ್ಲಿ ಬಿಸಿಎ ವಿದ್ಯಾರ್ಥಿಗಳಾದ ಮೋನಲ್ ಮತ್ತು ಸಿದ್ದಾರ್ಥ್ ಭಾಗವಹಿಸಿದ್ದರು. ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದು ತಂಡದಲ್ಲಿ ಬಿಸಿಎ ವಿದ್ಯಾರ್ಥಿಗಳಾದ ಅಂಕಿತಾ,ಸಾಕ್ಷ, ವರ್ಷಿಣಿ, ಧನ್ಯಶ್ರೀ, ಸೃಜನಾ , ವಿನಾಯಕ, ಒಂಕಾರ್, ಕಾವ್ಯ ಮತ್ತು ಶ್ರೀಲಕ್ಷ್ಮಿ ಭಾಗವಹಿಸಿದ್ದರು.

Related posts

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಸಿಸಿ ಕೆಮರಾ ಅಳವಡಿಸುವಿಕೆ ಮತ್ತು ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭ

Suddi Udaya

ನಾರಾವಿ ಗೂಡಂಗಡಿ ವ್ಯಾಪಾರಿ ಶಿವಯ್ಯ ಪೂಜಾರಿ ನಿಧನ

Suddi Udaya

ಉಜಿರೆ ರತ್ನಮಾನಸ ಜೀವನ ಶಿಕ್ಷಣ ವಿದ್ಯಾರ್ಥಿ ನಿಲಯದಲ್ಲಿ ರೆಸಿಡೆನ್ಸಿಯಲ್ ಕಾಲೇಜಿನ ಸಹಭಾಗಿತ್ವದೊಂದಿಗೆ ಗಾಂಧೀಜಿ ಜಯಂತಿ ಆಚರಣೆ

Suddi Udaya

ರಕ್ತೇಶ್ವರಿ ಪದವು ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಾಗವೇಣಿ ಕೆ.ಎಸ್. ರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಚಿಬಿದ್ರೆ : ಪೆರಿಯಡ್ಕ ಸಮೀಪದ ಮಾಕಳದಲ್ಲಿ ಕಾಡಾನೆ ದಾಳಿ: ಅಪಾರ ಬೆಳೆ ಹಾನಿ

Suddi Udaya

ಖಾಸಗಿ ವಿದ್ಯುತ್ ಉತ್ಪಾದನಾ ಕಂಪೆನಿಯ ವಯರ್ ನಲ್ಲಿ‌ ರಾತ್ರಿ ಕಾಣಿಸಿಕೊಂಡ ಬೆಂಕಿ: ತಪ್ಪಿದ ಭಾರೀ ಅನಾಹುತ

Suddi Udaya
error: Content is protected !!