37.3 C
ಪುತ್ತೂರು, ಬೆಳ್ತಂಗಡಿ
March 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಮಾ 11: ಶ್ರೀ ಜನಾರ್ದನ ದೇವರ ಬ್ರಹ್ಮಕಲಶೋತ್ಸವ ದಿನ ಉಜಿರೆಯಲ್ಲಿ ನಡೆಯಲಿದೆ ಐತಿಹಾಸಿಕ ಶೋಭಾಯಾತ್ರೆ “ಧರ್ಮಯಾನ”

ಬೆಳ್ತಂಗಡಿ: ಮಾರ್ಚ್ 11 ಉಜಿರೆ ಶ್ರೀ ಜನಾರ್ದನ ದೇವರ ಬ್ರಹ್ಮಕಲಶೋತ್ಸವ ದಿನ ಸಾವಿರಾರು ಕಲಾವಿದರು,25 ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಂದ ಸಂಜೆ ಗಂಟೆ 4.00ರಿಂದ ಉಜಿರೆ ಡಿ.ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಿಂದ ಧರ್ಮಯಾನ ಐತಿಹಾಸಿಕ ಶೋಭಾಯಾತ್ರೆ ನಡೆಯಲಿದೆ ಎಂದು ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕರು, ಗೋಪುರ ನಿರ್ಮಾಣ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಮೋಹನ್ ಕುಮಾರ್ ಅವರು ತಿಳಿಸಿದ್ದಾರೆ.

ಈ ಐತಿಹಾಸಿಕ ಶೋಭಾಯಾತ್ರೆ ಭಕ್ತ ಸಮೂಹವೆಲ್ಲ ಜೊತೆ ಸೇರಿ ಸಂಘಟಿಸುವ ಭಕ್ತಿಯ ಅಪೂರ್ವ ಯಾತ್ರೆ.ಧರ್ಮದ ನೆಲೆವೀಡು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧರ್ಮದ ಸಾಕ್ಷಾತ್ ಪ್ರತಿನಿಧಿಗಳಾದ ಧರ್ಮದೇವತೆಗಳು ಉಜಿರೆಯ ಶ್ರೀ ಜನಾರ್ದನನ ಬ್ರಹ್ಮಕಲಶಕ್ಕೆ ಆಗಮಿಸುವ ದಿವ್ಯತೆಯ ಭವ್ಯಯಾತ್ರೆ.

ಧರ್ಮದೇವತೆಗಳ ಪ್ರತಿನಿಧಿಯಾಗಿ ಧರ್ಮಾಧಿಕಾರಿಯಾಗಿ ಉಜಿರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಿ.ವೀರೇಂದ್ರ ಹೆಗ್ಗಡೆಯವರು ಆಗಮಿಸುವ ಧರ್ಮಯಾತ್ರೆ.ಇದು ನಮ್ಮ ಮಣ್ಣಿನ ಸಂಪ್ರದಾಯ ಪರಂಪರೆಯ ಪುಣ್ಯಯಾತ್ರೆ. ಇದು ‘ಧರ್ಮಯಾನ’ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮದೇವತೆಗಳಾದಿಯಾಗಿ ಉಜಿರೆ ಜನಾರ್ದನನ ಪೂರ್ಣಾನುಗ್ರಹ ಭಕ್ತರೆಲ್ಲರಿಗೆ ದೊರಕಲೆಂಬ ಭಕ್ತಿಯಿಂದ ಸಂಘಟಿಸುವ ಯಾತ್ರೆ, ಉಜಿರೆಯ ಭಕ್ತರ ಪಾಲಿಗೆ ಅವಿಸ್ಮರಣೀಯ ಅಧ್ಯಾತ್ಮಯಾತ್ರೆ.

ಉಜಿರೆ ಶ್ರೀ ಜನಾರ್ದನ ಸನ್ನಿಧಿಗೂ ಕುಡುಮಪುರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ಪ್ರಾಚೀನ ಕಾಲದಿಂದಲೂ ಅವಿನಾಭಾವ ಸಂಬಂಧವಿದೆ. ಉಜಿರೆಯಲ್ಲಿ ಪ್ರತಿವರ್ಷ ಮಕರ ಸಂಕ್ರಾಂತಿಯಂದು ಕೊಡಿ ಏರಿ, ಒಂದು ವಾರಗಳ ಕಾಲ ಜಾತ್ರೆ ನಡೆಯುತ್ತದೆ. ಈ ಸಂದರ್ಭ ಧರ್ಮದೇವತೆಗಳು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಜಾತ್ರಾಮಹೋತ್ಸವಕ್ಕೆ ಆಗಮಿಸುವ ಪ್ರತೀತಿ ಇದೆ. ಹಾಗಾಗಿ ಮಕರ ಸಂಕ್ರಾಂತಿಯ ಪರ್ವಕಾಲದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಅಣ್ಣಪ್ಪ ಬೆಟ್ಟದಲ್ಲಿ ನಡೆಯುವ ನೇಮ ಎರಡು ದಿನ ಮುಂಚಿತವಾಗಿ – ನಡೆಯುತ್ತದೆ. ಈ ಸಂಪ್ರದಾಯ ಈಗಲೂ ಮುಂದುವರೆದಿದೆ.

ಧರ್ಮದೇವತೆಗಳ ಪ್ರತಿನಿಧಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಉಜಿರೆ ಕ್ಷೇತ್ರಕ್ಕೆ ಆಗಮಿಸುವ ಈ ಸುಸಂದರ್ಭದಲ್ಲಿ ಧರ್ಮದೇವತೆಗಳೇ ಅವರೊಂದಿಗೆ ಬರುತ್ತಾರೆಂಬ ನಂಬಿಕೆ ಇದೆ. ಈ “ಧರ್ಮ”ಯಾನಕ್ಕೆ ತಮ್ಮನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಸ್ವಾಗತಿಸುತ್ತಿದ್ದೇವೆ.

ಈ ಧರ್ಮಯಾನ ಶೋಭಾಯಾತ್ರೆಯು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್. ಎಸ್. ಇವರ ಮಾರ್ಗದರ್ಶನ, ವಿಜಯಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ ಇವರ ನೇತೃತ್ವ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಇವರ ಸಹಕಾರದೊಂದಿಗೆ ನಡೆಯಲಿದೆ. ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕರು ಮತ್ತು ಪದಾಧಿಕಾರಿಗಳು, ಕಾರ್ಯಕರ್ತರು, ತಾಲೂಕಿನ ಸಮಸ್ತ ಭಗವದ್ಭಕ್ತರು, ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Related posts

ಮುಂಡಾಜೆ ರಬ್ಬರ್ ಸ್ಮೋಕ್ ಹೌಸ್ ಬೆಂಕಿಗಾಹುತಿ :ರೂ .2ಲಕ್ಷಕ್ಕೂ ಅಧಿಕ ನಷ್ಟ

Suddi Udaya

ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ ಬಂಗಾಡಿ ಸಹಕಾರಿ ವ್ಯವಸಾಯ ಸಂಘಕ್ಕೆ ಜಿಲ್ಲಾ ಮಟ್ಟದ ಪ್ರಶಸ್ತಿ ಪ್ರದಾನ

Suddi Udaya

ಗುಂಡೂರಿ: ಮಂಜಪ್ಪ ದೇವಾಡಿಗರಿಗೆ ನುಡಿನಮನ ಕಾರ್ಯಕ್ರಮ

Suddi Udaya

ಭಾರಿ ಮಳೆಗೆ ರಸ್ತೆಯ ಬದಿ ಕುಸಿತ: ಕಳೆಂಜ ಗ್ರಾಮಸ್ಥರಿಂದ ತಡೆಗೋಡೆ ನಿರ್ಮಾಣ

Suddi Udaya

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಗ್ರಾಮೀಣ ಜೀವನೋಪಾಯ ಮತ್ತು ಸುಸ್ಥಿರತೆ: ಜಾಗತಿಕ ದೃಷ್ಟಿಕೋನ’ ಕುರಿತ ಎರಡು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ

Suddi Udaya

ಕಾಪಿನಡ್ಕ: ರಾಜ್ಯ ಹೆದ್ದಾರಿಯ ಪಕ್ಕದ ಗುಡ್ಡಕ್ಕೆ ಬೆಂಕಿ: ಅಗ್ನಿಶಾಮಕ ಹಾಗೂ ಊರವರಿಂದ ಬೆಂಕಿ ನಂದಿಸುವ ಕಾರ್ಯ

Suddi Udaya
error: Content is protected !!