37.4 C
ಪುತ್ತೂರು, ಬೆಳ್ತಂಗಡಿ
March 10, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿ

ಅಕ್ರಮವಾಗಿ ದಾಸ್ತಾನು ಮಾಡಿದ್ದ ಡಿಸೇಲ್ ಪತ್ತೆ: ಬೆಳ್ತಂಗಡಿ ಡಿವೈಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ

ಬೆಳ್ತಂಗಡಿ : ಯಾವುದೇ ಅನುಮತಿ ‌ಪಡೆಯದೆ ಅಕ್ರಮವಾಗಿ ಡಿಸೇಲ್ ದಾಸ್ತಾನು ಮಾಡಿದ್ದ ಅಡ್ಡೆಯ ಮೇಲೆ ಖಚಿತ ಮಾಹಿತಿ ಮೇರೆಗೆ ಮಾ.9 ರಂದು ಮದ್ಯ ರಾತ್ರಿ 1 ಗಂಟೆಗೆ ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ.ಸಿ.ಕೆ ನೇತೃತ್ವದಲ್ಲಿ ಪೊಲೀಸರ ತಂಡ ದಾಳಿ ಮಾಡಿ ವಶಪಡಿಸಿಕೊಳ್ಳಲಾಗಿದೆ.

ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿಸಿ ಸಿ.ಕೆ ಮತ್ತು ಸಿಬ್ಬಂದಿ ಪ್ರವೀಣ್ ಮುರುಗೋಳಿ ಚಾಲಕ ಪ್ರವೀಣ್ ಮಾ.9 ರಂದು ಮದ್ಯ ರಾತ್ರಿ ರೌಡ್ಸ್ ನಲ್ಲಿರುವಾಗ ಮಾಹಿತಿದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುದೆಲ್ತಿಯಾರ್ ಎಂಬಲ್ಲಿನ ಬನಶಂಕರಿ ನಿಲಯದ ದಿ.ಮುತ್ತಪ್ಪ ಗೌಡರ ಮಗ ಜಗದೀಶ್(35) ಎಂಬುವವರ ಮನೆಯ ಹಿಂಭಾಗದ ಶೆಡ್ ಮೇಲೆ 1 ಗಂಟೆ ಸುಮಾರಿಗೆ ದಾಳಿ ನಡೆಸಿದಾಗ ಅಕ್ರಮವಾಗಿ 20 ಬ್ಯಾರಲ್ ನಲ್ಲಿ 200 ಲೀಟರ್ ನಂತೆ ಒಟ್ಟು 4,000 ಲೀಟರ್, 5 ಬ್ಯಾರಲ್ ಕ್ಯಾನ್ ನಲ್ಲಿ 35 ಲೀಟರ್ ನಂತೆ ಒಟ್ಟು 175 ಲೀಟರ್ ಸೇರಿ ಒಟ್ಟು ಶೇಖರಿಸಿಟ್ಟಿದ್ದ 4,175 ಲೀಟರ್ ಡೀಸೆಲ್ ಹಾಗೂ 5 ಖಾಲಿ ಕ್ಯಾನ್ ಗಳನ್ನು ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ 3 ಲಕ್ಷದ 50 ಸಾವಿರ ರೂಪಾಯಿ ಅಗಿರುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಜಗದೀಶ್ ಮತ್ತು ಹರೀಶ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಮಾ.10 ರಂದು ಡಿವೈಎಸ್ಪಿ ರೋಹಿನಿ.ಸಿ.ಕೆ ನೀಡಿದ ದೂರಿನ ಮೇರೆಗೆ ಕಲಂ 287 BNS, 3,7 ಇಸಿ ಅಕ್ಟ್, ಪೆಟ್ರೋಲಿಯಂ 23 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ಶ್ರೀ ರೋಹಿನಿ.ಸಿ.ಕೆ ನೇತೃತ್ವದಲ್ಲಿ,ಉಪ್ಪಿನಂಗಡಿ ಫ್ರೋಪೆಷನರಿ ಐಪಿಎಸ್ ಶ್ರೀ ಅನ್ಯನ ಶ್ರೀವಾಸ್ಸವ್, ಉಪ್ಪಿನಂಗಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಾಗರಾಜ್, ಸಬ್ ಇನ್ಸ್‌ಪೆಕ್ಟರ್ ಸುತೇಶ್ ಕುಮಾರ್, ಡಿವೈಎಸ್ಪಿ ಕಚೇರಿಯ ಸಿಬ್ಬಂದಿ ಪ್ರವೀಣ್ ಮುರುಗೋಳಿ, ಲಾರೆನ್ಸ್.ಪಿ.ಆರ್, ಮನೋಹರ,ಚಾಲಕ ಪ್ರವೀಣ್, ಎಫ್ಎಸ್ಎಲ್ ವಿಭಾಗದ ಸೊಕೊ ತಂಡದ ಕಾವ್ಯಶ್ರೀ ಹಾಗೂ ಬೆಳ್ತಂಗಡಿ ಆಹಾರ ಇಲಾಖೆಯ ಆಹಾರ ನಿರೀಕ್ಷಕ ವಿಶ್ವ.ಕೆ, ಆಹಾರ ಶಿರಸ್ತೇದಾರ ಸಂತೋಷ್.ಜಿ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ನಾವರ: ಮನೆಯೊಳಗೆ ಅವಿತುಕೊಂಡಿದ್ದ ಕಾಳಿಂಗ ಸರ್ಪ, ಭಯಭೀತರಾದ ಕುಟುಂಬ: ಸ್ನೇಕ್ ಅಶೋಕ್ ಲಾಯಿಲರವರಿಂದ ಯಶಸ್ವಿ ಕಾರ್ಯಾಚರಣೆ

Suddi Udaya

ಮದ್ದಡ್ಕದಲ್ಲಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರಿಬ್ಬರಿಗೆ ದ್ವಿಚಕ್ರ ವಾಹನ ಡಿಕ್ಕಿ :ಗಂಭೀರ ಗಾಯ

Suddi Udaya

ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಸತಿ ಪದವಿ ಪೂರ್ವ ಕಾಲೇಜು ರಾಷ್ಟ್ರ ಮಟ್ಟದ ಜೆ.ಇ.ಇ. ಮೇನ್ಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ

Suddi Udaya

ಬೆಳ್ತಂಗಡಿ ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಕಲ್ಲೇರಿಯಲ್ಲಿ ಸಂಘದ ಎರಡನೇ ಶಾಖೆ ಲೋಕಾರ್ಪಣೆ

Suddi Udaya

ರೆಖ್ಯ : ಆಕಸ್ಮಿಕವಾಗಿ ರಸ್ತೆ ಕಾಂಕ್ರಿಟ್ ಚರಂಡಿಯ ಒಳಗೆ ಬಿದ್ದು ಚಾಲಕ ಮೃತ್ಯು

Suddi Udaya

ಬೆಳ್ತಂಗಡಿ: ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸ.ಸಂಘದ-ಆಡಳಿತ ಮಂಡಳಿಗೆ ವಿಶೇಷ ಆಹ್ವಾನಿತ ಸದಸ್ಯರಾಗಿ ಹರೀಶ್ ರಾವ್ ಕಾಯಡ ಆಯ್ಕೆ

Suddi Udaya
error: Content is protected !!