March 12, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಾಧಕರು

ಅಂಡಿಂಜೆ ಸಂಜೀವಿನಿ ಒಕ್ಕೂಟದ ಸದಸ್ಯೆ ಮಲ್ಲಿಕಾ ಎಸ್.ರಿಗೆ ಯಶಸ್ವಿ ಮಹಿಳಾ ಉದ್ಯಮಿ-2026ಪ್ರಶಸ್ತಿ

ಬೆಳ್ತಂಗಡಿ: ಅಂಡಿಂಜೆ ಸಂಜೀವಿನಿ ಒಕ್ಕೂಟದ ಸದಸ್ಯೆ ಮಲ್ಲಿಕಾ ಎಸ್.ರಿಗೆ ಯಶಸ್ವಿ ಮಹಿಳಾ ಉದ್ಯಮಿ-2026 ಪ್ರಶಸ್ತಿ ನಿಸರ್ಗ ಸಂಜೀವಿನಿ ಮಾದರಿ ಗ್ರಾ.ಪಂ. ಮಟ್ಟದ ಒಕ್ಕೂಟ ಇದರ ಪದಾಧಿಕಾರಿ ಮಲ್ಲಿಕಾ ಎಸ್ ಇವರು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಯಶಸ್ವಿ ಮಹಿಳಾ ಉದ್ಯಮಿ-2026 ಪ್ರಶಸ್ತಿಯನ್ನು ಪಡೆದಿರುತ್ತಾರೆ.

ಇವರು ಅಂಡಿಂಜೆ ಸಂಜೀವಿನಿ ಒಕ್ಕೂಟದ ಸದಸ್ಯೆ ಮಲ್ಲಿಕಾ ಎಸ್.ರಿಗೆ ಯಶಸ್ವಿ ಮಹಿಳಾ ಉದ್ಯಮಿ-೨೦೨೬ ಪ್ರಶಸ್ತಿ ಗ್ರಾಮದ ಅಂಬಲಪಲ್ಕೆ ನಿವಾಸಿ ಸುಂದರ ರವರ ಧರ್ಮಪತ್ನಿ. ಮಲ್ಲಿಕಾ ಎಸ್. ಇವರು ಮನೆಯಲ್ಲಿಯೇ ಸ್ವಂತ ಉದ್ದಿಮೆಯನ್ನು ಮಾಡಿ ಮಾದರಿ ಮಹಿಳೆ ಎನಿಸಿಕೊಂಡಿದ್ದಾರೆ. ಬಡತನದಲ್ಲಿ ಜೀವನ ನಡೆಸುತ್ತಿದ್ದ ಮಲ್ಲಿಕಾ ಎಸ್. ಸಂಜೀವಿನಿ ಒಕ್ಕೂಟದ ಸಹಕಾರದೊಂದಿಗೆ ದೀಪದ ಬತ್ತಿ ಉದ್ಯಮವನ್ನು ಪ್ರಾರಂಭಿಸಿ ತನ್ನೊಂದಿಗೆ ಗ್ರಾಮದ ಇತರ ಮಹಿಳೆಯರಿಗೂ ಉದ್ಯೋಗವನ್ನು ಕಲ್ಪಿಸಿ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಯೋಜನೆ ಪಿಎಂಎಫ್‌ಎಂಇ ಯೋಜನೆಯೊಂದಿಗೆ ಬ್ಯಾಂಕಿನಿಂದ ಸಾಲವನ್ನು ಪಡೆದು ಅಕ್ಕಿರೊಟ್ಟಿ ಉದ್ಯಮವನ್ನು ಪ್ರಾರಂಭಿಸಿದರು. ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಮನೆಯ ಖರ್ಚನ್ನು ಸರಿದೂಗಿಸಿಕೊಂಡು ತನ್ನ ವ್ಯಾಪಾರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಬಂದಿದ್ದಾರೆ ತನ್ನೊಂದಿಗೆ ಹಲವಾರು ಮಹಿಳೆಯರಿಗೆ ಕೆಲಸವನ್ನು ನೀಡಿ ಅವರನ್ನು ಸಬಲೇಯರನ್ನಾಗಿ ಮಾಡಿದ್ದಾರೆ.

ಸಿಂಧೂರ ಸಂಜೀವಿನಿ ಸಂಘದ ಸದಸ್ಯೆ, ಅಂಡಿಂಜೆ ಸಂಜೀವಿನಿ ಒಕ್ಕೂಟದ ಪದಾಧಿಕಾರಿಯಾಗಿರುವ ಇವರಿಗೆ ಕೃಷಿ ವಿಜ್ಞಾನ ಸಂಸ್ಥೆ ಬೆಂಗಳೂರು ಇವರು 2026 ಮಹಿಳಾ ಯಶಸ್ವಿ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಿದೆ.

Related posts

ಕಾಳುಮೆಣಸು ಬೆಳೆಯುವ ರೈತರಿಗೆ ಸುವರ್ಣಾವಕಾಶ: ಕರಾವಳಿ ಆಗ್ರೋ ಸೆಂಟರ್ & ಪ್ಲಾಂಟೇಶನ್ ನಲ್ಲಿ ಉತ್ತಮ ತಳಿಯ ಹೈಬ್ರಿಡ್ ಕಾಳುಮೆಣಸು ಸಸಿಗಳು ಲಭ್ಯ

Suddi Udaya

ಉಜಿರೆ: ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ “ಮಹಿಳಾ ಯಕ್ಷಸಂಭ್ರಮ” ಉದ್ಘಾಟನೆ

Suddi Udaya

ಧರ್ಮಸ್ಥಳ ಪಾದಯಾತ್ರಿಗಳ ಸೇವೆಗಾಗಿ ಉಚಿತ ವೈದ್ಯಕೀಯ ಶಿಬಿರಗಳ ಉದ್ಘಾಟನೆ

Suddi Udaya

ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಕು. ಸೌಜನ್ಯ ಅತ್ಯಾಚಾರ‌ ಹಾಗೂ ಕೊಲೆ ಪ್ರಕರಣದ ಮರು ತನಿಖೆಗೆ ತಾಲೂಕು ಒಕ್ಕಲಿಗ ಗೌಡರ ಸಂಘ ಉಜಿರೆ ಆಗ್ರಹ

Suddi Udaya

ಕಕ್ಕಿಂಜೆ “ಅರ್ಶ್ ಎಜ್ಯುಕೇಶನ್ ಅಕಾಡೆಮಿ”ಯ ಪ್ರವೇಶಾತಿ ಆರಂಭ

Suddi Udaya

ಎಲ್ ಸಿ ಆರ್ ಇಂಡಿಯನ್ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ವೇತನದ ಕುರಿತು ಮಾಹಿತಿ ಕಾರ್ಯಕ್ರಮ:

Suddi Udaya
error: Content is protected !!