28.1 C
ಪುತ್ತೂರು, ಬೆಳ್ತಂಗಡಿ
September 10, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಮಾ.14-19: ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದಲ್ಲಿ ವರ್ಷಾವಧಿ ಜಾತ್ರೋತ್ಸವ

ವೇಣೂರು: ಇತಿಹಾಸ ಪ್ರಸಿದ್ಧ ಪೆರಿಂಜೆಯ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ಮೂಲಸ್ಥಾನದಲ್ಲಿ ಮಾ.14ರಿಂದ 19ರ ಪರ್ಯಂತ ವರ್ಷಾವಧಿ ಜಾತ್ರೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಜರಗಲಿದೆ ಎಂದು ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದ ಅನುವಂಶೀಯ ಆಡಳಿತದಾರ ಎ. ಜೀವಂಧರ ಕುಮಾರ್ ಅವರು ತಿಳಿಸಿರುತ್ತಾರೆ.

ತುಳುನಾಡಿನ ಆಚಾರ-ವಿಚಾರ ಅತ್ಯಂತ ಶ್ರೀಮಂತವಾದುದು. ಶ್ರೀ ಕ್ಷೇತ್ರ ಪಡ್ಯಾರಬೆಟ್ಟದಲ್ಲಿ ನಡೆಯುವ ವರ್ಷಾವಧಿ ಜಾತ್ರೆಗೆ ನಾಡಿನ ವಿವಿಧ ಕಡೆಗಳಿಂದ ಭಕ್ತರು ಬಂದು ದೈವದ ಗಂಧಪ್ರಸಾದ ಸ್ವೀಕರಿಸುತ್ತಾರೆ.ಈಗಾಗಲೇ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ದತೆಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.

ಮಾ.14ರಂದು ಮಧ್ಯಾಹ್ನ ಪೆರಿಂಜೆ ಶ್ರೀ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ದೇವರಿಗೆ ಪಂಚಾಮೃತಾಭಿಷೇಕ, ಶ್ರೀ ಅಮ್ಮನವರಿಗೆ ವರಹ ಪೂಜೆ, ರಾತ್ರಿ ಪಡ್ಡ್ಯೋಡಿಗುತ್ತಿನಲ್ಲಿ ಉಪಹಾರ, ಪಡ್ಡ್ಯೋಡಿಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಇಳಿಯುವುದು, ಪಡ್ಯಾರಬೆಟ್ಟಕ್ಕೆ ಆಗಮನ, ಧ್ವಜಾರೋಹಣ, ಬಲಿ, ಚೆಂಡು ಜರುಗುವುದು.

ಮಾ.15ರಂದು ಭೂತಬಲಿ ಉತ್ಸವ ಜರುಗುವುದು. ಮಾ.16ರಂದು ಅಂಬೋಡಿ, ಬಲಿ, ಉತ್ಸವ ಹೂವಿನ ಪೂಜೆ, ರಥಾರೋಹಣ ಜರುಗುವುದು. ಮಾ.17ರಂದು ವರ್ಷಾವಧಿ ಜಾತ್ರೋತ್ಸವ, ಮಧ್ಯಾಹ್ನ ರಥದಲ್ಲಿ ಮಹಾಪೂಜೆ, ರಥೋತ್ಸವ, ಹೂವಿನ ಪೂಜೆ ಮಧ್ಯಾಹ್ನದಿಂದ ಸಂಜೆ ತನಕ ಮಹಾ ಅನ್ನಸಂತರ್ಪಣೆ, ರಾತ್ರಿ ಕೊಡಮಣಿತ್ತಾಯ ದೈವದ ನೇಮೋತ್ಸವ ವಿಜೃಂಭಣೆಯಿAದ ಜರುಗುವುದು.

ಮಾ.18ರಂದು ಧ್ವಜ ಅವರೋಹಣ, ಸಂಪ್ರೋಕ್ಷಣೆ ಪಡ್ಯೋಡಿಗುತ್ತಿಗೆ ಭಂಡಾರ ಹಿಂದಿರುಗುವುದು. ಮಾ ೧೯ರಂದು ರಾತ್ರಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಕ್ಷಿಣ ಭಾರತದ ಹೆಸರಾಂತ ಕಲಾವಿದ ಗಾನಪ್ರವೀಣ ಬಳ್ಳಪ್ಪದವು ಯೋಗೀಶ ಶರ್ಮ ಮತ್ತು ಬಳಗದವರಿಂದ ನಾದ ತರಂಗಭಕ್ತಿ ಸಂಗೀತ ಕಾರ್ಯಕ್ರಮ, ಹೂವಿನ ಪೂಜೆ, ಕೊಡಮಣಿತ್ತಾಯ ದೈವದ ಕುರುಸಂಬಿಲ ನೇಮ, ತುಲಾಭಾರ ಸೇವೆ, ಪ್ರತಿ ಸಂಕ್ರಮಣ ಮತ್ತು ಜಾತ್ರಾ ಸಮಯದ ೫ ದಿನಗಳು ಅನ್ನಸಂತರ್ಪಣೆ ಸೇವೆ ನಡೆಯಲಿರುವುದು.

ಪುಣ್ಯಪ್ರದ ಮಹೋತ್ಸವಕ್ಕೆ ಆದರದ ಸ್ವಾಗತ:
ಶ್ರೀ ಕ್ಷೇತ್ರದಲ್ಲಿ ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೆಯು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ರೀತಿ ರಿವಾಜು ಕಟ್ಟು ಕಟ್ಟಳೆಗಳ ಪ್ರಕಾರ ಮಾರೂರು ಖಂಡಿಗದ ವೇ.ಮೂ. ರಾಮದಾಸ ಅಸ್ರಣ್ಣರ ಪೌರೋಹಿತ್ಯದಲ್ಲಿ ವಿಧ್ಯುಕ್ತವಾಗಿ ನಡೆಯಲಿದೆ. ಈ ಪುಣ್ಯಪ್ರದ ಮಹೋತ್ಸವಕ್ಕೆ ಭಕ್ತರು ತಮ್ಮ ಇಷ್ಟ ಮಿತ್ರ ಬಂಧು ಭಾಂದವರೊಡನೆ ಚಿತ್ತೆöÊಸಿ ಈ ಸತ್ಕಾರ್ಯದಲ್ಲಿ ಭಾಗವಹಿಸಿ, ಪವಿತ್ರ ಕ್ಷೇತ್ರದ ಪರಮ ಪಾವನ ಸಿರಿಮುಡಿ ಗಂಧ-ಪ್ರಸಾದ ಸ್ವೀಕರಿಸಿ ಶ್ರೀ ದೈವದ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಅಪೇಕ್ಷಿಸುತ್ತೇನೆ. ಎ. ಜೀವಂಧರ ಕುಮಾರ್ ಪಡ್ಯೋಡಿಗುತ್ತು, ಅನುವಂಶೀಯ ಆಡಳಿತದಾರರು, ಶ್ರೀ ಕ್ಷೇತ್ರ ಪಡ್ಯಾರಬೆಟ್ಟ

Related posts

ಮಿತ್ತಬಾಗಿಲು ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ: ಸ೦ಘದ ಸದಸ್ಯರಿಗೆ 20% ಡಿವಿಡೆಂಟ್ ಘೋಷಣೆ.

Suddi Udaya

ಉರುವಾಲು: ಜೀರ್ಣೋದ್ಧಾರಗೊಳ್ಳುತ್ತಿರುವ ಕಾರಿಂಜ ಶ್ರೀ ವನಶಾಸ್ತರ ದೇವಸ್ಥಾನಕ್ಕೆ ಮೆಸ್ಕಾಂ ಇಲಾಖೆಯ ಅಧ್ಯಕ್ಷ ಹರೀಶ್ ಕುಮಾರ್ ಭೇಟಿ

Suddi Udaya

ಸೋಣಂದೂರು: ಪೊಮ್ಮಾಜೆ ಜನರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾದ ಏರ್‌ಟೆಲ್ ಹಾಗೂ ಬಿಎಸ್‌ಎನ್‌ಎಲ್ ಟವರ್

Suddi Udaya

ಬಂಟರ ಯಾನೆ ನಾಡವರ ಸಂಘ ಮಡಂತ್ಯಾರು ವಲಯದ ಗರ್ಡಾಡಿ, ಪಡಂಗಡಿ ಗ್ರಾಮಗಳ ಗ್ರಾಮ ಸಮಿತಿ ರಚನೆ

Suddi Udaya

ಎಸ್‌ಡಿಟಿಯು ಆಟೋ ಯೂನಿಯನ್ ಬಾಜಾರ್ ಘಟಕ ಅಸ್ಥಿತ್ವಕ್ಕೆ

Suddi Udaya

ಅಕ್ಷಯ ಕಾಲೇಜಿನಲ್ಲಿ ‘ಪ್ರಿಸಮ್-2K26’ ಇಂಟರ್‌ಕ್ಲಾಸ್ ಫೆಸ್ಟ್

Suddi Udaya
error: Content is protected !!