March 12, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕರ್ನಾಟಕ ರಾಜ್ಯ ಓಪನ್ ರೀಲೆ ಸ್ಪರ್ಧೆಯಲ್ಲಿ ಸರ್ವಜಿತ್ ಪೂಜಾರಿ ಮರೋಡಿಯವರಿಗೆ ಚಿನ್ನದ ಪದಕ

ಬೆಳ್ತಂಗಡಿ: ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಮಾ. 7ರಂದು ನಡೆದ ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್ ಆಯೋಜನೆಯ ಕರ್ನಾಟಕ ರಾಜ್ಯ 1st ಓಪನ್ ರೀಲೆ ಸ್ಪರ್ಧೆಯಲ್ಲಿ ಸರ್ವಜಿತ್ ಪೂಜಾರಿ ಇವರು ಚಿನ್ನದ ಪದಕವನ್ನು ಪಡದು ಮಾ 28ರಂದು ಚಂಡಿಗಡ್ ನಲ್ಲಿ ನಡೆಯುವ 3rd national (open )ಓಪನ್ ರಿಲೇಗೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಪಲಾರಗೋಳಿ ಕಲ್ಲೊಟ್ಟು ಹಾರ್ದಿತ್ತಿಲ್ ಸ್ವರ್ಣ ಕೇದಗೆ ನಿವಾಸದ ಜಯಾನಂದ ಪೂಜಾರಿ ಮತ್ತು ಪವಿತ್ರ ದಂಪತಿ ಸುಪುತ್ರ ಸರ್ವಜಿತ್ ಪೂಜಾರಿ ಇವರು ಹೋಲಿ ಏಂಜಲ್ ಶಿರ್ತಾಡಿಯಲ್ಲಿ ತನ್ನ ಪ್ರಾಥಮಿಕ ಶಿಕ್ಷಣವನ್ನು ಪಡೆದು 7 ನೇ ತರಗತಿಯಲ್ಲಿ ರಾಜ್ಯಮಟ್ಟದಲ್ಲಿ ತುಮಕೂರು 100 ಮೀಟರ್ ಭಾಗವಹಿಸುತ್ತಾರೆ. ನಂತರ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪಡೆದಿರುತ್ತಾರೆ .

ತರಬೇತುದಾರರಾದ ಶಾಂತಾರಾಮ್ , ತಿಲಕ್ ಹಾಗೂ ಆನಂದ ನೇತೃತ್ವದಲ್ಲಿ ಅಭ್ಯಾಸ ನಡೆಸಿರುತ್ತಾರೆ. ತಾಲೂಕು,ಜಿಲ್ಲೆ,ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುತ್ತಾರೆ. ಪ್ರಸ್ತುತ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಪದವಿ ವ್ಯಾಸಂಗ ಪಡೆಯುತ್ತಿದ್ದು ರಾಜ್ಯಮಟ್ಟ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.

ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ 36 ನೇ ದಕ್ಷಿಣ ವಲಯದ ಕಿರಿಯ ಅಥ್ಲೆಟಿಕ್ ಚಾಂಪಿಯನ್ ಶಿಪ್ 2025 ರಲ್ಲಿ ನಡೆದ 4×100 ಮೀ ರಿಲೇ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಚಿನ್ನದ ಪದಕ ಗಳಿಸಿರುತ್ತಾರೆ ಹಾಗೂ ಒಡಿಸ್ಸಾ ರಾಜ್ಯದ ಭುವನೇಶ್ವರಿದಲ್ಲಿ ನಡೆದ 4×100 ಮೀ ರಿಲೇ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಹಾಗೂ ಆಲ್ ಇಂಡಿಯಾ ಯೂನಿವರ್ಸಿಟಿಗೆ ಆಯ್ಕೆಯಾಗಿರುತ್ತಾರೆ.

Related posts

ಅಳದಂಗಡಿ: ಗುಡ್ ಫ್ಯೂಚರ್ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

Suddi Udaya

ಉಜಿರೆ ಗ್ರಾ.ಪ. ವತಿಯಿಂದ ಸರಕಾರದ ಗೃಹಲಕ್ಷ್ಮಿ ಯೋಜನೆಗೆ ಚಾಲನೆ

Suddi Udaya

ಇಂಡಸ್ ಟವರ್ಸ್ ಕಾರ್ಮಿಕರ ಶಾಂತಿಯುತ ಪ್ರತಿಭಟನೆಗೆ ದ.ಕ. ಜಿಲ್ಲಾ ಬಿಎಂಎಸ್ ಘಟಕದಿಂದ ಬೆಂಬಲ

Suddi Udaya

ಸೋಣಂದೂರು: ಬೆನೆಡಿಕ್ಟ್ ಪಿಂಟೊ ನಿಧನ

Suddi Udaya

ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಬೆಹರಿನ್ ಇಂಡಿಯಾ ಇಂಟರ್ ನ್ಯಾಷನಲ್ ಅವಾರ್ಡ್ ಪ್ರದಾನ

Suddi Udaya

ಮಚ್ಚಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಮಹಾಸಭೆ

Suddi Udaya
error: Content is protected !!