26.1 C
ಪುತ್ತೂರು, ಬೆಳ್ತಂಗಡಿ
September 11, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಿಕ್ಷಣ ಸಂಸ್ಥೆ

ಉಜಿರೆ: ರತ್ನಮಾನಸದಲ್ಲಿ ಮಾತಾ -ಪಿತೃ ಪೂಜನ ಹಾಗೂ ಆಶೀರ್ವಾದ ಕಾರ್ಯಕ್ರಮ

ಉಜಿರೆ : ರತ್ನಮಾನಸ ವಿದ್ಯಾರ್ಥಿ ನಿಲಯದಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ಮಾತಾ -ಪಿತೃ ಪೂಜನ ಹಾಗೂ ಆಶೀರ್ವಾದ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಂಪನ್ಮೂಲ ವ್ಯಕ್ತಿ ಉಜಿರೆ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಮಹಾವೀರ ಜೈನ್ ದೀಪವನ್ನು ಬೆಳಗಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಶಿಕ್ಷಣ ಹೊಟ್ಟೆಗೆ ಅನ್ನವನ್ನು ನೀಡಿದರೆ ಸಂಸ್ಕಾರ ಬದುಕಿಗೆ ಅರ್ಥವನ್ನು ನೀಡುತ್ತದೆ. .ಒಬ್ಬ ವಿದ್ಯಾರ್ಥಿ ಎತ್ತರಕ್ಕೆ ಬೆಳೆಯ ಬೇಕಾದರೆ ಬಣ್ಣ ,ಜಾತಿ ,ಸೌಂದರ್ಯ, ಹಣ ದಿಂದ ಸಾಧ್ಯವಿಲ್ಲ ಸಂಸ್ಕಾರದಿಂದ ಮಾತ್ರ ಸಾಧ್ಯ. ಶಿಕ್ಷಣ ಮತ್ತು ಸಂಸ್ಕಾರ ಎರಡು ರೆಕ್ಕೆ ಇದ್ದಂತೆ. ಇವೆರಡು ಇದ್ದರೆ ಜಗತ್ತಿನ ಯಾವ ದೇಶಕ್ಕೆ ಹೊಗಿ ಬದುಕಲು ಸಾಧ್ಯ . ಆಸಕ್ತಿ ಮತ್ತು ಏಕಾಗ್ರತೆ ಇದ್ದರೆ ಮಾತ್ರ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ. ವಿದ್ಯಾರ್ಥಿ ಸಮಯದಲ್ಲಿ ವಿದ್ಯಾರ್ಥಿಗಳು ಯಾವ ದುಷ್ಚಟಗಳಿಗೆ ಬಲಿಯಾಗದೆ ಏಕಾಗ್ರತೆಯೊಂದಿಗೆ ಗುರಿಸಾಧಿಸಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ರತ್ನಮಾನಸ ವಿದ್ಯಾರ್ಥಿ ನಿಲಯದ ಪಾಲಕ ಯತೀಶ್ ಕೆ ಬಳಂಜ ಮಾತನಾಡಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿ ಕೊಳ್ಳಬೇಕು. ನಮ್ಮ ತನವನ್ನು ಉಳಿಸಿಕೊಳ್ಳಬೇಕು. ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿಇತ್ತೀಚೆಗೆ ಡಾಕ್ಟರೇಟ್ ಪದವಿಯನ್ನು ಪಡೆದ ಮಹಾವೀರ ಜೈನ್ ರವರನ್ನು ರತ್ನಮಾನಸ ವಿದ್ಯಾರ್ಥಿ ನಿಲಯದ ವತಿಯಿಂದ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳಿಗೆ ಪಾದ ಪೂಜೆಯನ್ನು ಮಾಡಿ ಆಶೀರ್ವಾದವನ್ನು ಪಡೆದರು. ಪೊಷಕರು ಮತ್ತು ವಿದ್ಯಾರ್ಥಿ ಪರಸ್ಪರ ಎದುರು ಕುಳಿತುಕೊಂಡು ಸಿಹಿಯನ್ನು ತಿನ್ನಿಸಿದರು. ವಿದ್ಯಾರ್ಥಿಗಳಾದ ನಿಶಿತ್ ಮತ್ತು ರಾಕೇಶ್ ಆರ್ ಹಾಗೂ ಪೊಷಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ನಿಲಯದ ಅಧ್ಯಾಪಕ ರವಿಚಂದ್ರ ಸ್ವಾಗತಿಸಿ, ವಿದ್ಯಾರ್ಥಿ ಕೌಶಿಕ್ ಮತ್ತು ರಾಕೇಶ್ ಡಿ ಆರ್ ಪ್ರಾರ್ಥಿಸಿ, ಅಧ್ಯಾಪಕರಾದ ದೀಪಕ್ ವಂದಿಸಿದರು. ಉದಯ ರಾಜ್ ಕಾರ್ಯಕ್ರಮ ನಿರೂಪಿಸಿದರು.

Related posts

ಕಳಿಯ ಗ್ರಾಮ ಪಂಚಾಯತ್ ನ ದ್ವಿತೀಯ ಸುತ್ತಿನ ಗ್ರಾಮ ಸಭೆ

Suddi Udaya

ಶಿವಮೊಗ್ಗದಲ್ಲಿ ನಡೆದ ಭಗವದ್ಗೀತಾ ಕಂಠಪಾಠ ಸ್ಪರ್ಧೆ: ಕು. ಅದ್ವಿತಿ ರಾವ್ ದ್ವಿತೀಯ ಸ್ಥಾನ

Suddi Udaya

ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರೌಢಶಾಲಾ ವಿಭಾಗ ಹಾಗೂ ಪದವಿಪೂರ್ವ ಕಾಲೇಜು ಜಂಟಿಯಾಗಿ ಗಣರಾಜ್ಯೋತ್ಸವ ಆಚರಣೆ

Suddi Udaya

ಶಿಶಿಲ : ಮುಚ್ಚಿರಡ್ಕ ಜಯಂತ್ ನಾಯ್ಕ್ ರವರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಬೆನಕ  ಹೆಲ್ತ್ ಸೆಂಟರ್ ನ ಔಷಧಾಲಯ ಸ್ಥಳಾಂತರಗೊಂಡು ಉದ್ಘಾಟನೆ

Suddi Udaya

ತಣ್ಣೀರುಪಂತ: ದೀಪಾವಳಿ ಪ್ರಯುಕ್ತ ದೀಪ ಸಂಜೀವಿನಿ, ಹಳ್ಳಿ ಸಂತೆ

Suddi Udaya
error: Content is protected !!