September 6, 2026
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆನಕ  ಹೆಲ್ತ್ ಸೆಂಟರ್ ನ ಔಷಧಾಲಯ ಸ್ಥಳಾಂತರಗೊಂಡು ಉದ್ಘಾಟನೆ

ಉಜಿರೆ: NABH ಪುರಸ್ಕೃತ ಉಜಿರೆಯ ಬೆನಕ  ಹೆಲ್ತ್ ಸೆಂಟರ್ ನಲ್ಲಿ  ಎ.19ರಂದು  ಆದಿತ್ಯವಾರ ಆಸ್ಪತ್ರೆಯ ಔಷಧಾಲಯವನ್ನು  ನೂತನವಾಗಿ ಸಜ್ಜುಗೊಂಡ ಮತ್ತು ವಿಶಾಲ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ಸ್ಥಳಾಂತರಗೊಂಡ ಔಷಧಾಲಯ (ಫಾರ್ಮಸಿ)ಯನ್ನು ಹಿರಿಯ ಸೀತಾರಾಮ ಭಟ್ ಕೆ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಗೋಪಾಲಕೃಷ್ಣ. ಕೆ ಮಾತನಾಡಿ ನಮ್ಮ ಆಸ್ಪತ್ರೆಯ ಔಷಧಾಲಯವನ್ನು ವಿನೂತನವಾಗಿ ನಿರ್ಮಿಸಿದ ಮತ್ತು ವಿಶಾಲ ಸ್ಥಳಕ್ಕೆ ಸ್ಥಳಾಂತರಿಸಿ ದಿನದ 24 ಗಂಟೆಗಳ ಕಾಲ  (24×7) ಈ ಭಾಗದ ಸಾರ್ವಜನಿಕರಿಗೆ ಸೇವೆ ಸಲ್ಲಿಸಬೇಕೆಂಬ ನನ್ನ ಕನಸು ಈ ದಿನ ನನಸಾಗಿದೆ ಎಂದರೆ ಅತಿಶಯೋಕ್ತಿಯಲ್ಲ ಯಾಕೆಂದರೆ ಔಷಧಾಲಯವು  ಯಾವುದೇ ಆಸ್ಪತ್ರೆಯ ಜೀವನಾಡಿಯಾಗಿರುತ್ತದೆ. ರೋಗಿಗಳಿಗೆ ಕ್ಲಿಷ್ಟ ಸಮಯದಲ್ಲಿ ಔಷಧಿಗಳನ್ನು ವಿತರಿಸಲು ಈಗಿನ ವ್ಯವಸ್ಥೆ ತುಂಬ ಅನುಕೂಲವಾಗಿದೆ ಎಂದು ತಿಳಿಸಿದರು.

ಉದ್ಘಾಟಕರಾದ ಸೀತಾರಾಮ ಭಟ್ ಕೆ ಇವರು ಆಸ್ಪತ್ರೆಯ ಏಳಿಗೆಯಲ್ಲಿ ಇದೊಂದು ಮಹತ್ವದ ಹೆಜ್ಜೆ ಮತ್ತು ಇದರಿಂದ ಎಲ್ಲರಿಗೂ ಅನುಕೂಲವಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಡಾ.ಭಾರತಿ ಜಿ.ಕೆ, ಡಾ. ಆದಿತ್ಯ ರಾವ್, ಡಾ. ಅಂಕಿತ ಜಿ ಭಟ್, ಡಾ. ನವ್ಯ ಭಟ್,   ಡಾ. ಶ್ರೀಹರ್ಷ ತುಲುಪುಲೆ, ಡಾ. ದೀಕ್ಷಿತ್ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ವೇಣೂರು ಭಾರತಿ ಶಿಶುಮಂದಿರದಲ್ಲಿ ಭಗವದ್ಗೀತೆಯ ಕಲಿಕಾ ತರಗತಿ ಉದ್ಘಾಟನೆ

Suddi Udaya

ದಾರುನ್ನೂರ್ ಮಸೀದಿ ನಿರ್ಮಿಸಿದ ಶೈಖ್ ಅಬ್ದುಲ್ ರವರ ಪುತ್ರ ಖಾಲಿದ್ ಅಲ್ ಝುಬೈರ್ ರಿಗೆ ಸನ್ಮಾನ

Suddi Udaya

ಸುಲ್ಕೇರಿಮೊಗ್ರು ಸ. ಹಿ. ಪ್ರಾ. ಶಾಲಾ ಶೌಚಾಲಯ ಕುಸಿತ

Suddi Udaya

ಬೆಳ್ತಂಗಡಿ: ವಲಯ ಮಟ್ಟದ ಅಂತರಾಷ್ಟ್ರೀಯ ಮಹಿಳಾ ಸಮಾವೇಶ

Suddi Udaya

ಉಜಿರೆ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಪೂಲ್ ಕ್ಯಾಂಪಸ್ ಡ್ರೈವ್

Suddi Udaya

ಪುತ್ತೂರಿನಲ್ಲಿ ನಡೆದ ಕಾಮರ್ಸ್ ಆಂಡ್ ಡಿಸೈನ್ ಫೆಸ್ಟ್: ಬೆಳ್ತಂಗಡಿ ಶ್ರೀ ಗುರುದೇವ ಪದವಿ ಕಾಲೇಜಿಗೆ ಪ್ರಶಸ್ತಿ

Suddi Udaya
error: Content is protected !!