38.3 C
ಪುತ್ತೂರು, ಬೆಳ್ತಂಗಡಿ
March 13, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಿಕ್ಷಣ ಸಂಸ್ಥೆ

ಎಸ್.ಡಿ.ಎಂ ಸ್ವಾಯತ್ತ ಕಾಲೇಜು : ಬಿವೋಕ್ ವಿದ್ಯಾರ್ಥಿಗಳಿಂದ ಶೈಕ್ಷಣಿಕ ಭೇಟಿ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಬಿವೋಕ್ ರಿಟೇಲ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ಮೆಂಟ್‌ನ ವಿಭಾಗದ ವತಿಯಿಂದ ಸ್ಟಾರ್ಟಪ್ಸ್ ಇಂನ್ ಸೈಟ್ಸ್ ಎಕ್ಸ್ಪ್ಲೋರಿಂಗ್ ಇನ್ನೋವೇಶನ್ ಆಂಡ್ ಇನ್ ಕ್ಯೂಬಿಷನ್ ಕಾರ್ಯಕ್ರಮದಡಿಯಲ್ಲಿ ಮಂಗಳೂರಿನ ಸಹ್ಯಾದ್ರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್‌ಗೆ ಪ್ರಾಯೋಗಿಕ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳ ತಂಡ ಶೈಕ್ಷಣಿಕ ಭೇಟಿ ನೀಡಿದರು.

ಪ್ರಾಧ್ಯಾಪಕರೊಂದಿಗೆ ತೆರಳಿದ ತಂಡವು ಸಂಸ್ಥೆಯ ಇಂಕ್ಯೂಬೇಶನ್ ಸೆಂಟರ್‌ಗೆ ಭೇಟಿ ನೀಡಿ ಸ್ಟಾರ್ಟ್‌ಅಪ್ ಪರಿಸರ, ನವೀನತಾ ಪ್ರಕ್ರಿಯೆಗಳು ಮತ್ತು ವಿದ್ಯಾರ್ಥಿಗಳ ನೇತೃತ್ವದ ಉದ್ಯಮಶೀಲತಾ ಪ್ರಯತ್ನಗಳ ಬಗ್ಗೆ ಪ್ರಾಯೋಗಿಕ ಅರಿವು ಮತ್ತು ಅನುಭವವನ್ನು ಪಡೆದರು. ಇಂಕ್ಯೂಬೇಶನ್ ಮಾರ್ಗದರ್ಶಕರೊಂದಿಗೆ ಸಂವಾದ ನಡೆಸಿ, ನಡೆಯುತ್ತಿರುವ ಸ್ಟಾರ್ಟ್‌ಅಪ್ ಯೋಜನೆಗಳನ್ನು ಅವಲೋಕಿಸಿದರು.

ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಉದ್ಯಮೋನ್ಮುಖ ಅಧ್ಯಯನದ ಮೌಲ್ಯಯುತ ಅನುಭವವನ್ನು ನೀಡಿದ್ದು, ನವೀನತೆ ಮತ್ತು ಇಂಕ್ಯೂಬೇಶನ್ ಕ್ರಮಗಳ ಬಗ್ಗೆ ಪ್ರಾಯೋಗಿಕ ಅರಿವು ಮತ್ತಷ್ಟು ಬಲಪಡಿಸಿತು ಎಂದು ವಿದ್ಯಾರ್ಥಿಗಳು ಅನಿಸಿಕೆಯನ್ನು ಹಂಚಿಕೊಂಡರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಾಯೋಗಿಕ ಅಧ್ಯಯನ ಭೇಟಿಯನ್ನು ಬಿವೋಕ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರವೀಣ್ ಸಂಯೋಜಿಸಿದರು. ಭೇಟಿ ವೇಳೆ ಕಾಲೇಜಿನ ಇತರೆ ಉಪನ್ಯಾಸಕರು ಭಾಗಿಯಾಗಿದ್ದರು.

Related posts

ಫುಟ್ಬಾಲ್ ಪಂದ್ಯಾಟ: ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ತೋಟತ್ತಾಡಿ : ಚಿಬಿದ್ರೆ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ಪೂರ್ವಸಿದ್ಧತಾ ಸಭೆ

Suddi Udaya

ವೇಣೂರು ನೂತನ ಒಕ್ಕೂಟದ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರ

Suddi Udaya

ಉಜಿರೆ: ಅಜಿತ್ ನಗರ ನಿವಾಸಿ ಶಂಕರನಾರಾಯಣ ಭಟ್ ನಿಧನ

Suddi Udaya

ಬೆಳ್ತಂಗಡಿ: ಉತ್ತರ ಕನ್ನಡದಲ್ಲಿ ನಡೆಯುವ ಗಂಗಾಷ್ಟಮಿ ಉತ್ಸವಕ್ಕೆ ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಗೆ ಆಹ್ವಾನ

Suddi Udaya

ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಹಿಂದೂ ಸಂಘಟನೆಗಳಿಂದ ಇಂದು(ಮೇ 2) ದ.ಕ ಜಿಲ್ಲೆ ಬಂದ್ ಗೆ ಕರೆ

Suddi Udaya
error: Content is protected !!