September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹಿಂದೂ ಕಮಿಟಿ ಹಾರ್ಝಿಲಿಯ ಇಸ್ರೇಲ್ ಸಂಘಟನೆಯಿಂದ ವೈದ್ಯಕೀಯ ನೆರವು ಹಸ್ತಾಂತರ-ಅಶಕ್ತ ಕುಟುಂಬಕ್ಕೆ ಆರ್ಥಿಕ ಸಹಕಾರ

ಬೆಳ್ತಂಗಡಿ: ಮರೋಡಿ ಗ್ರಾಮದ ಗಿರಿಜಾ ಅವರು ಅನಾರೋಗ್ಯದಿಂದ ಬಳಲುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆಗಾಗಿ ರೂ 20 ಸಾವಿರ ಹಾಗೂ ಮರೋಡಿ ನಂದಿಲ ಸುಂದರವರು ಒಂದು ಕೈ ಇಲ್ಲದೆ ಅತಿ ಕಡು ಬಡತನದಲ್ಲಿದ್ದು ಅವರ ಮನೆ ದುರಸ್ತಿಗಾಗಿ ರೂ 20 ಸಾವಿರ ನೆರವನ್ನು ಹಿಂದೂ ಕಮಿಟಿ ಹಾರ್ಝಿಲಿಯ ಇಸ್ರೇಲ್ ಸಂಘಟನೆ ಆರ್ಥಿಕ ನೆರವನ್ನು ನೀಡಿ ಸಹಕರಿಸಿದೆ.

ಈ ನೆರವನ್ನು ಮರೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರತ್ನಾಕರ್ ಬುಣ್ಣನ್, ಬಾಲಕೃಷ್ಣ ಬಂಗೇರ, ಪದ್ಮಶ್ರೀ ಜೈನ್ ಹಸ್ತಾಂತರಿಸಿದರು. ಮಾಜಿ ಸದಸ್ಯರು ಉಮೇಶ್ ಸಾಲಿಯಾನ್ ಜೊತೆಯಲ್ಲಿದ್ದರು

ಮರೋಡಿ ಹಾಗೂ ನಾರಾವಿ ಪರಿಸರದ ಅನೇಕ ಮಂದಿ ಕಳೆದ ಹಲವು ವರ್ಷಗಳಿಂದ ಇಸ್ರೇಲ್ ನಲ್ಲಿ ಉದ್ಯೋಗದಲ್ಲಿದ್ದು ಅವರು ಊರಿನ ಮೇಲಿನ ಪ್ರೀತಿಯಿಂದ ಇಸ್ರೇಲ್ ನಲ್ಲಿ ಹಿಂದೂ ಕಮಿಟಿ ಹಾರ್ಝಿಲಿಯ ಇಸ್ರೇಲ್ ಸಂಘಟನೆ ಕಟ್ಟಿಕೊಂಡು
ಊರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ,ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬಕ್ಕೆ ವೈದ್ಯಕೀಯ ನೆರವು,ಅಶಕ್ತ ಕುಡುಂಬಗಳಿಗೆ ಆರ್ಥಿಕ ನೆರವು ಜೊತೆಗೆ ವಿವಿಧ ರೀತಿಯಲ್ಲಿ ಊರಿಗೆ ಸಹಕಾರ ನೀಡುತ್ತಿದ್ದಾರೆ.

Related posts

ಉಜಿರೆ ಶ್ರೀ ಧ.ಮಂ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ರೆಡ್ ಕ್ರಾಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಮಕ್ಕಳ ಸುರಕ್ಷತೆ ಹಾಗೂ ಶಿಕ್ಷಕರ ಜವಾಬ್ದಾರಿಯ ಬಗ್ಗೆ ಮಾಹಿತಿ ಕಾರ್ಯಗಾರ

Suddi Udaya

ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಧಾರ್ಮಿಕ ಸಭೆ

Suddi Udaya

ಫೆ. 28- 29: ಶಿಬಾಜೆ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕೊಕ್ಕಡ: ಮಾಸ್ತಿಕಲ್ಲು ಮಜಲು ಶ್ರೀ ಪಿಲಿಚಾಮುಂಡಿ ಮತ್ತು ಸಹ ಪರಿವಾರ ದೈವಗಳ ನೇಮೋತ್ಸವ

Suddi Udaya

ಡಿ.28-ಜ.2: ಓಡಿಲ್ನಾಳ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವ

Suddi Udaya
error: Content is protected !!