September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಿಕ್ಷಣ ಸಂಸ್ಥೆ

ಉಜಿರೆ: ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಸೈಂಧವ ವಧೆ ತಾಳಮದ್ದಳೆ

ಉಜಿರೆ: ಎಸ್.ಡಿ.ಎಂ ಕಾಲೇಜಿನಲ್ಲಿ ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರ ಪ್ರಸ್ತುತ ಪಡಿಸಿದ ತಿಂಗಳ ತಿರುಳು – 25ನೇ ಕಾರ್ಯಕ್ರಮ “ಸೈಂಧವ ವಧೆ” ಕನ್ನಡ ಯಕ್ಷಗಾನ ತಾಳಮದ್ದಳೆ ಮಾ.12ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಶ್ವನಾಥ ಪಿ., ವಿಶ್ರಾಂತ ಪ್ರಬಂಧಕರು ಮತ್ತು ಯಕ್ಷಗಾನ ಸಂಘಟಕರು, ಚಿಂತಕರಾದ ಶೇಖರ ಟಿ, ಎಸ್.ಡಿ.ಎಂ. ಕಾಲೇಜಿನ ಕುಲ ಸಚಿವರು ಶ್ರೀಧರ ಭಟ್, ಹಿರಿಯ ಲೆಕ್ಕ ಪತ್ರ ನಿರ್ವಾಕ ದಿವಾಕರ ಪಟವರ್ಧನ್, ಸಾಂಸ್ಕೃತಿಕ ಸಮಿತಿ ಮುಖ್ಯಸ್ಥ ಡಾ. ನಾಗಣ್ಣ ಡಿ.ಎ, ಯಕ್ಷಗುರು ಅರುಣ್ ಕುಮಾರ್ ಧರ್ಮಸ್ಥಳ ಉಪಸ್ಥಿತರಿದ್ದರು.

ಭಾಗವತರಾಗಿ ದೇವಿಪ್ರಸಾದ್ ಆಚಾರ್ಯ, ಚೆಂಡೆಯಲ್ಲಿ ಶ್ರೇಯಸ್ ಪಾಳಂದೆ, ಮದ್ದಳೆಯಲ್ಲಿ ಪುರಂದರ ನಾರಿಯ ಭಾಗವಹಿಸಿದರು. ಶ್ರೀಕೃಷ್ಣ ಪಾತ್ರಧಾರಿಯಾಗಿ ತೇಜಸ್, ಅಮೋಘ ಶಂಕರ (ಅರ್ಜುನ), ಅನನ್ಯ ಶೆಟ್ಟಿ (ಸುಭದ್ರೆ), ನಿರಂಜನ್ (ಕೌರವ) ವಿಭಿನ್ (ಸೈಂಧವ), ಸಂಜನ(ಧರ್ಮರಾಯ) ಮಿಥುನ್ ರಾಜ್(ದ್ರೋಣಾಚಾರ್ಯ), ಪ್ರೀತಲ್(ಶ್ರುತಾಯುಧ), ಸಹನಾ(ಭೂರಿಶ್ರವ), ಸುಮಂತ್(ಸಾತ್ಯಕಿ), ರವಿತೇಜು(ದುಶ್ಯಾಸನ), ಮನಸ್ವಿ(ಭೀಮಸೇನ), ಹರ್ಷಿಣಿ ದೂತನಾಗಿ ಪಾತ್ರ ನಿರ್ವಹಿಸಿದ್ದಾರೆ.

ಎಸ್.ಡಿ.ಎಂ ಯಕ್ಷಗಾನ ಕಲಾಕೇಂದ್ರದ 25ನೇ ಕಾರ್ಯಕ್ರಮದ ಸಂಭ್ರಮದ ಸಂದರ್ಭದಲ್ಲಿ ಯಕ್ಷಗಾನ ತಂಡದ ನಾಯಕನಾದ ಅಮೋಘ ಶಂಕರರವರನ್ನು ಸನ್ಮಾನಿಸಲಾಯಿತು.

ಸಿಂಚನ, ಮನಸ್ವಿ, ಯಶ್ಮಿತಾ, ವರ್ಷಿಣಿ, ಅನನ್ಯ ಶೆಟ್ಟಿ ಪ್ರಾರ್ಥಿಸಿದರು. ಸಾಕ್ಷ ನಿರೂಪಿಸಿ, ಸಹನ ಸ್ವಾಗತಿಸಿದರು. ಯಶ್ಮಿತಾ ವಂದಿಸಿದರು.

Related posts

ಬೆಳ್ತಂಗಡಿ: ವಿದ್ಯಾರ್ಥಿ ನಿಲಯಗಳ ಅಭಿವೃದ್ಧಿಗೆ ಅನುದಾನವನ್ನು ಮಂಜೂರುಗೊಳಿಸಲು ಶಾಸಕ ಹರೀಶ್ ಪೂಂಜರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

Suddi Udaya

ಅಳದಂಗಡಿ ಗ್ರಾ.ಪಂಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ ಕೆ. ಭೇಟಿ: ಪಂಚಾಯತ್ ವ್ಯಾಪ್ತಿಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳ ಪರಿಶೀಲನೆ

Suddi Udaya

ಬೆಳ್ತಂಗಡಿಗೆ ಆಗಮಿಸಿದ ಎಸ್.ಐ.ಟಿ ಒಂದು ತಂಡ :ಬೆಳ್ತಂಗಡಿಯ ಎಸ್.ಐ.ಟಿ ಕಚೇರಿ ಪರಿಶೀಲನೆ

Suddi Udaya

ಕಳಿಯ ಗ್ರಾ.ಪಂ. ನಿಂದ ಯಶಸ್ವಿ ಮಾದರಿ ಜನ ಸ್ನೇಹಿ ಆಧಾರ್ ಕ್ಯಾಂಪ್ & ಅಂಚೆ ಜನ ಸಂಪರ್ಕ ಅಭಿಯಾನ

Suddi Udaya

ಬಂದಾರಿನಲ್ಲಿ ಮತ್ತೆ ತೋಟಕ್ಕೆ ನುಗ್ಗಿದ್ದ ಕಾಡಾನೆ: ಕೃಷಿ ಹಾನಿ

Suddi Udaya

ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲ ಮೂಲ್ಕಿ ಇದರ ಬೆಳ್ಳಿಹಬ್ಬ ಸಂಭ್ರಮ

Suddi Udaya
error: Content is protected !!