38.3 C
ಪುತ್ತೂರು, ಬೆಳ್ತಂಗಡಿ
March 13, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜು

ನಾರಾವಿ ಸರಕಾರಿ ಪ್ರೌಢಶಾಲೆಯಲ್ಲಿ ಉಚಿತ ಟ್ಯೂಷನ್ ತರಬೇತಿ ಸಮಾರೋಪ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕೆರೆ, ನಾರಾವಿ ವಲಯದ ನಾರಾವಿ ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಉಚಿತ 3 ತಿಂಗಳ ಟ್ಯೂಷನ್ ತರಬೇತಿಯ ಸಮಾರೋಪ ಕಾರ್ಯಕ್ರಮ ನಡೆಯಿತು.

ಶಾಲಾಭಿವೃದ್ಧಿ ಸಮಿತಿ ಗೌರವ ಸದಸ್ಯ ಉದಯ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ಬಂಗೇರ ವಹಿಸಿದ್ದರು.

ಈ ಸಂದರ್ಭದಲ್ಲಿ ನಾರಾವಿ ವಲಯದ ವಲಯಾಧ್ಯಕ್ಷರಾದ ಶೇಖರ್ ಹೆಗ್ಡೆ, ನಾರಾವಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಸುಶೀಲ, ಶಾಲಾ ನಾಯಕ ಪ್ರತೀಕ್ ಉಪಸ್ಥಿತರಿದ್ದರು.

ಟ್ಯೂಷನ್ ಕ್ಲಾಸ್ ತರಬೇತಿಯಲ್ಲಿ ಉತ್ತಮ ಅಂಕ ಗಳಿಸಿದ ಇಬ್ಬರು ವಿದ್ಯಾರ್ಥಿಗಳನ್ನು ಗುರುತಿಸಲಾಯಿತು. ಎಸ್‌ಎಸ್‌ಎಲ್‌ಸಿ ಎಲ್ಲಾ ವಿದ್ಯಾರ್ಥಿಗಳಿಗೆ ಪೆನ್ ನೀಡಿ ಮುಂದಿನ ಪಬ್ಲಿಕ್ ಪರೀಕ್ಷೆಗೆ ಶುಭ ಹಾರೈಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅನಾರೋಗ್ಯ ಪೀಡಿತರಾದ ನಾರಾವಿ ಕಾರ್ಯಕ್ಷೇತ್ರದ ಸದಸ್ಯೆ ಲಲಿತ ಹೆಗ್ಡೆಯವರಿಗೆ ಶ್ರೀ ಕ್ಷೇತ್ರದಿಂದ ಡಾ|| ಹೆಗ್ಗಡೆಯವರು ಮಂಜೂರು ಮಾಡಿದ 25000 ಸಹಾಯಧನ ಕ್ರಿಟಿಕಲ್ ಫಂಡ್ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಸಹ ಶಿಕ್ಷಕರು, ಸೇವಪ್ರತಿನಿಧಿಗಳಾದ ರೇಷ್ಮಾ, ಹರಿಣಾಕ್ಷಿ ಉಪಸ್ಥಿತರಿದ್ದರು.

ಗುರುವಾಯನಕೆರೆ ತಾಲೂಕು ಸಮನ್ವಯಾಧಿಕಾರಿ ಸುಗುಣ ಸ್ವಾಗತಿಸಿದರು. ನಾರಾವಿ ವಲಯದ ಮೇಲ್ವಿಚಾರಕಿ ವಿಶಾಲ ಕೆ ಕಾರ್ಯಕ್ರಮ ನಿರೂಪಿಸಿದರು. ಆಶಾಲತಾ ವಂದಿಸಿದರು

Related posts

ಕಣಿಯೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಯತೀಶ್ ಶೆಟ್ಟಿ ಪಣೆಕ್ಕರ ಆಯ್ಕೆ

Suddi Udaya

ನಾವೂರು : ನಿರ್ಮಾಣವಾಗದ ರಸ್ತೆ, ಸಾರ್ವಜನಿಕರ ಆಕ್ರೋಶ, ಗ್ರಾಮಸ್ಥರೇ ಸೇರಿ ಪರ್ಯಾಯ ರಸ್ತೆ ನಿರ್ಮಾಣ

Suddi Udaya

ರೆಂಕೆದಗುತ್ತು ನಿವಾಸಿ ಜನಾರ್ಧನ ನಿಧನ

Suddi Udaya

ಅಳದಂಗಡಿಯಲ್ಲಿ ನೊಚ್ಚ ಹಾರ್ಡ್‌ವೇರ್ ಮತ್ತು ಸ್ಯಾನಿಟರಿ ಶುಭಾರಂಭ

Suddi Udaya

ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಎಸ್ ಎಸ್ ಎಲ್ ಸಿ ಯ ಅಗ್ರಸಾಧಕಿ ರಾಜ್ಯಕ್ಕೆ 2ನೇ‍ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿನಿ ಕು.ಪ್ರಾ‍‍‍ಥ೯ನಾ ‍ಎಚ್.ಕೆ ಗೆ ಸನ್ಮಾನ

Suddi Udaya

ಮಡಂತ್ಯಾರು: ಚಾಲಕನ ನಿಯಂತ್ರಣ ತಪ್ಪಿ ಲಾರಿ ವಿದ್ಯುತ್ ಕಂಬಕ್ಕೆ ಡಿಕ್ಕಿ

Suddi Udaya
error: Content is protected !!