ಕುವೆಟ್ಟು: ಜೀರ್ಣೋದ್ಧಾರಗೊಂಡ ಮದ್ದಡ್ಕತಾಯಿ ಶ್ರೀ ರಕ್ತೇಶ್ವರಿ ಮತ್ತು ಪಿಲಿಚಾಮುಂಡಿ ದೈವಸ್ಥಾದಲ್ಲಿ ದೈವಗಳ ಪ್ರತಿಷ್ಠಾ ಕಾರ್ಯಕ್ರಮ ಹಾಗೂ ನೇಮೋತ್ಸವ ಮಾ 12 ರoದು ತoತ್ರಿಗಳಾದ ಬಾಲಕ್ರಷ್ಣ ಪಾoಗಣ್ಣಾಯ ರವರ ನೇತೃತ್ವದಲ್ಲಿ ಅಸ್ರಣ್ಣರು ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಎಂ ರಘುರಾಮ್ ಭಟ್ ಮಠ ಹಾಗೂ ಅಸ್ರಣ್ಣರು ಶ್ರೀನಿವಾಸ ಅಮ್ಮುಣ್ಣಾಯರವರ ಉಪಸ್ಥಿತಿಯಲ್ಲಿ ಜರಗಿತು.
ಬೆಳಿಗ್ಗೆ ಲಕ್ಷ್ಮಿನರಸಿಂಹ ಮಠದಿಂದ ಭಂಡಾರದ ಮೆರವಣಿಗೆ ಬಂದು ವೈದಿಕ ವಿಧಾನಗಳೊಂದಿಗೆ ಪ್ರತಿಷ್ಠೆ ಹಾಗೂ ಸಾನಿಧ್ಯ ಕಲಶ ಮಹೋತ್ಸವ ಕಾರ್ಯಕ್ರಮ ಜರಗಿತು.

ದೈವಸ್ಥಾನದ ಆಡಳಿತ ಮುಕ್ತೈಸರರು ಮೋಹನ್ ಕೆರ್ಮ್ಮುಣ್ಣಾಯ ಮೈರಾರು, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷೆ ಸುಜಿತಾ ವಿ ಬಂಗೇರ, ದೈವಸ್ಥಾನಕ್ಕೆ ಹೆಚ್ಚುವರಿ ಜಾಗ ದಾನವಾಗಿ ನೀಡಿದ ಮುಗೆರೋಡಿ ಕನ್ಸ್ಟ್ರಕ್ಷನ್ ಇದರ ಮಾಲಕರಾದ ಸುಧಾಕರ ಶೆಟ್ಟಿ ಮಂಗಳೂರು, ರಮೇಶ್ ಬಂಗೇರ, ಪ್ರಭಾಕರ ಬಂಗೇರ, ಶಾರದ ಕೃಷ್ಣ ಕೇದೆ ಹೊಸಮನೆ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಕೆ ವಿಜಯ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಸುದೀಪ್ ಶೆಟ್ಟಿ, ಕೋಶಾಧಿಕಾರಿ ರಾಜ್ ಪ್ರಕಾಶ್ ಶೆಟ್ಟಿ, ದೈವಸ್ಥಾನದ ಸೇವಾ ಟ್ರಸ್ಟ್ ನ ಕೋಶಾಧಿಕಾರಿ ಪ್ರಭಾಕರ ಶೆಟ್ಟಿ ಉಪ್ಪಡ್ಕ ಹಾಗೂ ಅರ್ಚಕ ವ್ರoದ ಹಾಗೂ ಸಮಿತಿಯ ಪದಾಧಿಕಾರಿಗಳು ದೇವಸ್ಥಾನದ ಸೇವಾ ಟ್ರಸ್ಟಿನ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು












