33.1 C
ಪುತ್ತೂರು, ಬೆಳ್ತಂಗಡಿ
March 13, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ: ಸಂತ್ರಸ್ತ ಕುಟುಂಬವನ್ನು ಭೇಟಿಯಾದ ವಿಮ್ ನಿಯೋಗ

ಬೆಳ್ತಂಗಡಿ: ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಳು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಸಂತ್ರಸ್ತ ಬಾಲಕಿಯ ಮನೆಗೆ ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ಕ್ಷೇತ್ರ ಸಮಿತಿ ನಿಯೋಗ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ತಿಳಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ಕ್ಷೇತ್ರ ಅಧ್ಯಕ್ಷೆ ಶಮಾ ಆಲಿ ಉಜಿರೆ, ವೇಣೂರಿನಲ್ಲಿ ನಡೆದ ಈ ಅಮಾನವೀಯ ಕೃತ್ಯ ಅತ್ಯಂತ ಖಂಡನೀಯವಾಗಿದ್ದು, ಇಂತಹ ಘಟನೆಗಳು ಮುಂದೆ ಯಾವುದೇ ಮಗುವಿಗೂ ಮರುಕಳಿಸಬಾರದು ಎಂದು ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾದ ಉತ್ತರ ಪ್ರದೇಶ ಮೂಲದ ನರೇಶ್‌ನ್ನು ತಕ್ಷಣ ಬಂಧಿಸಿದ ವೇಣೂರು ಪೊಲೀಸರ ಕ್ರಮವನ್ನು ಅವರು ಶ್ಲಾಘಿಸಿದ ಅವರು, ಇಂತಹ ಘೋರ ಕೃತ್ಯ ಎಸಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ತೀವ್ರ ಶಿಕ್ಷೆ ವಿಧಿಸಬೇಕು, “ಇಂತಹ ದುಷ್ಟ ಶಕ್ತಿಗಳು ಮತ್ತೆ ಸಮಾಜದಲ್ಲಿ ತಲೆ ಎತ್ತದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ಕ್ಷೇತ್ರ ಸಮಿತಿ ನಿಯೋಗದಲ್ಲಿ ಕ್ಷೇತ್ರ ಕೋಶಾಧಿಕಾರಿ ಹಸೀನಾ ಬೆಳ್ತಂಗಡಿ, ಅಡ್ವೋಕೇಟ್ ಅಸ್ಮಾ ಬೆಳ್ತಂಗಡಿ, ಸಫ್ರಾ ಬೆಳ್ತಂಗಡಿ ಹಾಗೂ ರಫಾ ಸಂಜಯನಗರ ಉಪಸ್ಥಿತರಿದ್ದರು.

Related posts

ಧರ್ಮಸ್ಥಳ: ಸಿಡಿಲು ಬಡಿದು ವ್ಯಕ್ತಿ ಅಸ್ವಸ್ಥ

Suddi Udaya

ಗೀತೆ ಜತೆ ಸಾಹಿತ್ಯ ಸಾಂಗತ್ಯ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಉಪನ್ಯಾಸ ಮಾಲಿಕೆಯ ನಾಲ್ಕನೆಯ ಅಧ್ಯಾಯ

Suddi Udaya

ಕಲ್ಮಂಜ: ಮೃತ್ಯುಂಜಯ-ನೇತ್ರಾವತಿ ನದಿಯ ಸಂಗಮ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

Suddi Udaya

ಮಾ.31: ಲಾಯಿಲ ಪಿಲಿಪಂಜರ ಕ್ಷೇತ್ರದಲ್ಲಿ ದೈವಗಳ ಪ್ರತಿಷ್ಠಾ ಮಹೋತ್ಸವ ಹಾಗೂ ದೈವಗಳ ನೇಮೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಲಾಯಿಲ: ಸ್ವಾತಂತ್ರ ವೀರ ಭಗತ್ ಸಿಂಗ್ ಇವರ 116 ನೇ ಜನುಮ ದಿನಾಚರಣೆ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಅಭಿಷಕ್ತರಾದ ಬಿಷಪ್ ಜೇಮ್ಸ್ ಪಟ್ಟೇರಿಲ್ ರವರನ್ನು ಅಭಿನಂದಿಸಿದ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

Suddi Udaya
error: Content is protected !!