September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ದೈವ ಕ್ಷೇತ್ರ ಬಡೆಕ್ಕಾವು ಗುತ್ತುವಿನಲ್ಲಿ ಅಪ್ಪೆ ಕಲ್ಲುರ್ಟಿ ದೈವದ ದೊಂದಿ ಕೋಲ: ಜೋಡು ಜೀಟಿಗೆ ನಾಟಕ ಪ್ರದರ್ಶನ

ಬೆಳ್ತಂಗಡಿ: ಗ್ರಾಮದೈವ ಶ್ರೀ ಕೊಡಮಣಿತ್ತಾಯ ಮತ್ತು ಗುತ್ತು ಭಾಮ ದೈವ, ಶ್ರೀ ಜುಮಾದಿ ಹಾಗೂ ಸಹ
ಪರಿವಾರ ದೈವಗಳ ದೈವಸ್ಥಾನ ಬಡೆಕ್ಕಾವುಗುತ್ತು ದೈವ ಕ್ಷೇತ್ರದಲ್ಲಿ ಅಪ್ಪೆ ಕಲ್ಲುರ್ಟಿ ದೈವದ ದೊಂದಿ ಕೋಲ ಮಾ.14 ರಂದು ನಡೆಯಿತು. ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ಅಪ್ಪೆ ಕಲ್ಲುರ್ಟಿ ದೈವದ ಮೊರೆ ಹೋದ ಭಕ್ತರ ಸಂಕಷ್ಟಗಳು ಹಾಗೂ ಅಭೀಷ್ಟೆಗಳು ನೆರವೇರಿದ ನಿದರ್ಶನಗಳು ಈ ಕ್ಷೇತ್ರದಲ್ಲಿದೆ. ಹಾಗಾಗಿ ಭಕ್ತರು ಹರಕೆ ರೂಪದಲ್ಲಿ ಅಪ್ಪೆ ಕಲ್ಲುರ್ಟಿ ದೈವಕ್ಕೆ ಮಲ್ಲಿಗೆ, ಸೀರೆಗಳನ್ನು ಸಲ್ಲಿಸಿದರು.

ದೈವನ್ನೇ ದೇವರು ಎಂದ ನಂಬುವ ತುಳುನಾಡಿನ ಮಂದಿ ಕಲ್ಲುರ್ಟಿ ದೈವದ ದೊಂದಿ ಕೋಲ ನೋಡಲು ಸಾವಿರಾರೂ ಮಂದಿ ಭಕ್ತರು ಸೇರಿದ್ದರು. ಬೆಳಿಗ್ಗೆ ಗ್ರಾಮ ದೈವ ಶ್ರೀ ಕೊಡಮಣಿತ್ತಾಯ ದೈವದ ಸಾಂಪ್ರದಾಯಿಕ ದೈವದ ಕಂಬಳ ಮೂಹೂರ್ತ ನಡೆಸಲಾಯಿತು.

ರಾತ್ರಿ ಕಲ್ಕುಡ-ಕಲ್ಲುರ್ಟಿ ದೈವದ ಚಾರಿತ್ರೆಯನ್ನು ಬಿಂಬಿಸುವ ಜೋಡು ಜೀಟಿಗೆ ಸತ್ಯೋದ ಸಾದಿಗ್ ಧರ್ಮೋದ ಬೊಲ್ಪು ತುಳು ಜನಪದ ನಾಟಕ ಪ್ರದರ್ಶನಗೊಂಡಿತು. ಸಾವಿರಕ್ಕೂ ಮಿಕ್ಕಿ ಜನಸಾಗರ ಸೇರಿತ್ತು.

ಬಡೆಕ್ಕಾವು ಗುತ್ತು ಮನೆತನದ ಮುಖ್ಯಸ್ಥ ರಕ್ಷಿತ್ ಅಜಿಲ, ಬಡೆಕ್ಕಾವು ಗುತ್ತು ಮನೆತನದವರು, ಅರ್ಚಕರು, ನಾವೂರು ಗುತ್ತು ಮನೆಯವರು, ಊರಿನ ಗುತ್ತು ಬರ್ಕೆಯವರು, ದೈವಗಳ ಪರಿಚಾರಕರು, ವಿಲಯದವರು ಪರವೂರಿನವರು ಮತ್ತು ನಾವೂರು ಗ್ರಾಮದ ಎಲ್ಲಾ ಗ್ರಾಮಸ್ಥರು ಉಪಸ್ಥಿತರಿದ್ದರು.

Related posts

ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ : ಅಂತರ್ ಕಾಲೇಜು ಮತ್ತು ರಾಜ್ಯ ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಚಾಲನೆ

Suddi Udaya

ಗೇರುಕಟ್ಟೆ ಪತಂಜಲಿ ಯೋಗ ಶಾಖೆಯಲ್ಲಿ ದೀಪಾವಳಿ ಆಚರಣೆ

Suddi Udaya

ಬೆಳ್ತಂಗಡಿ ಗ್ರಾಮೀಣ ಮಹಿಳಾ ಕಾಂಗ್ರೆಸ್ಸಿನ ಅಧ್ಯಕ್ಷರು ಹಾಗೂ ಸದಸ್ಯರ ವತಿಯಿಂದ ಸಹಾಯಹಸ್ತ

Suddi Udaya

ಕೋಟಿ ಚೆನ್ನಯ ಸೇವಾ ಸಂಘ ಕುಕ್ಕೇಡಿ- ನಿಟ್ಟಡೆ ವತಿಯಿಂದ ಗುರುನಮನ ಕಾರ್ಯಕ್ರಮ

Suddi Udaya

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ, ಉಜಿರೆ ಉದ್ಯಮಿ ಮೋಹನ್ ಕುಮಾರ್ ರವರಿಂದ ರಾಷ್ಟ್ರ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸುವ ಬಂದಾರು ಶಾಲೆ ವಿದ್ಯಾರ್ಥಿಗಳಿಗೆ ಶುಭಹಾರೈಕೆ: ಮುಂಡತ್ತೋಡಿ ಶಾಲಾ 51 ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿ ವಿತರಣೆ

Suddi Udaya

ಕಿರು ನಾಟಕ ಸ್ಪರ್ಧೆ: ಬೆಳ್ತಂಗಡಿ ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ

Suddi Udaya
error: Content is protected !!