September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜು

ಕೊಯ್ಯೂರು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಸ್ಮಾರ್ಟ್ ಟಿ. ವಿ. ಉದ್ಘಾಟನೆ ಮತ್ತು ಪೋಷಕರ ಮಹಾಸಭೆ

ಕೊಯ್ಯೂರು: ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ರಾಜ್ಯಸಭಾ ಸದಸ್ಯ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಸುಮಾರು 2 ಲಕ್ಷ ಅನುದಾನದಲ್ಲಿ ಒದಗಿಸಲ್ಪಟ್ಟ ಸ್ಮಾರ್ಟ್ ಟಿ. ವಿ. ಶೈಕ್ಷಣಿಕ ಪರಿಕರಗಳ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ನಡೆಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಲಾಯಿಲ ವಿಭಾಗದ ಮೇಲ್ವಿಚಾರಕ ಸುಶಾಂತ್ ಕಾರ್ಯಕ್ರಮ ಉದ್ಘಾಟಿಸಿ, “ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಮೂಡಿಸಿಕೊಳ್ಳಬೇಕು. ತಂತ್ರಜ್ಞಾನ ಆಧಾರಿತ ಇಂತಹ ವ್ಯವಸ್ಥೆಗಳ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದು ಕೊಳ್ಳಬೇಕು ” ಎಂದು ಕರೆನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಜಗನ್ನಾಥ ವಹಿಸಿದ್ದರು.

ವೇದಿಕೆಯಲ್ಲಿ ಎಸ್ ಕೆ ಡಿ ಆರ್ ಡಿ ಪಿ ಸೇವಾ ಪ್ರತಿನಿಧಿ ಲೀಲಾ, ಅಮ್ಮಂದಿರ ಸಮಿತಿ ಉಪಾಧ್ಯಕ್ಷೆ ಮೋಹಿನಿ , ಎಸ್ ಡಿ ಎಂ ಸಿ ಹಿರಿಯ ಸದಸ್ಯ ಸಂಜೀವ ಮಲೆಕುಡಿಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಇಕೋ ಕ್ಲಬ್ ಹಾಗೂ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಮುಖ್ಯ ಶಿಕ್ಷಕಿ ವಸಂತಿ ಕೆ ಎನ್. ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿ ಶಿಕ್ಷಣ ವ್ಯವಸ್ಥೆಯಲ್ಲಿ ಡಿಜಿಟಲೀಕರಣ ಮತ್ತು ಪರೀಕ್ಷಾ ತಯಾರಿ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಾಹಿತಿ ನೀಡಿದರು.ಜಿ. ಪಿ. ಟಿ. ಶಿಕ್ಷಕಿ ಬಿ. ಸುಶ್ಮಿತಾ ರಾವ್ ಕಾರ್ಯಕ್ರಮ ನಿರ್ವಹಿಸಿದರು.ಜಿ. ಪಿ. ಟಿ. ಶಿಕ್ಷಕಿ ಶ್ರೀಮತಿ ದೇವಿ ಬಾಯಿ ಡಿ. ವಂದಿಸಿದರು. ಸಹಶಿಕ್ಷಕಿಯರಾದ ವಿಜಯಶ್ರೀ, ವೇದಾವತಿ ಮತ್ತು ಅಕ್ಷರ ದಾಸೋಹ ಸಿಬ್ಬಂದಿಗಳು ಮತ್ತು ಎಸ್ ಡಿ ಎಂ ಸಿ. ಸದಸ್ಯರು ಸಹಕರಿಸಿದರು.

Related posts

ಭಾರತೀಯ ಶಿಕ್ಷಣ ಪ್ರಶಸ್ತಿ ಪುರಸ್ಕೃತ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರನ್ನು ಅಭಿನಂದಿಸಿದ ಗುರುವಾಯನಕೆರೆ ವರ್ತಕರು

Suddi Udaya

ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆಗೆ ಬೆಳ್ತಂಗಡಿ ಜೈನ ಸಮಾಜದ ಸಂಘಟನೆಗಳಿಂದ ಖಂಡನೆ: ಸಮಗ್ರ ತನಿಖೆಗೆ ಒತ್ತಾಯಿಸಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗೆ ಮನವಿ

Suddi Udaya

ಬೆಳ್ತಂಗಡಿ: ಡಯಾಲಿಸಿಸ್ ಕೇಂದ್ರದ ಕೊರತೆಗಳಿಗೆ ಮುಕ್ತಿ : ಆರೋಗ್ಯ ಸಚಿವರು, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮತ್ತು ರೋಟರಿ ಸಂಸ್ಥೆಯವರಿಗೆ ಬಂಗೇರರವರಿಂದ ಅಭಿನಂದನೆ

Suddi Udaya

ಜ.3 -4: ನಲಿಕೆ ಸಮಾಜ ಬಾಂಧವರ 5 ಓವರ್‌ಗಳ 7 ಜನರ ಹೊನಲು ಬೆಳಕಿನ ಸೂಪರ್ ಸಿಕ್ಸ್ ಅಂಡರ್ ಆರ್ಮ್ ಕ್ರಿಕೆಟ್‌ ಪಂದ್ಯಾಟ : ಮಾರಿಗುಡಿ ಫ್ರೆಂಡ್ಸ್ ಟ್ರೋಫಿ – 2026

Suddi Udaya

ಮಲವಂತಿಗೆ: ಲಕ್ಷ್ಮಣ ಪೂಜಾರಿ ನಿಧನ

Suddi Udaya

ಬಂಟ್ವಾಳದಲ್ಲಿ ಸಮರ ಸೌಗಂಧಿಕೆ ತಾಳಮದ್ದಳೆ

Suddi Udaya
error: Content is protected !!