36.7 C
ಪುತ್ತೂರು, ಬೆಳ್ತಂಗಡಿ
March 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿಸಂಘ-ಸಂಸ್ಥೆಗಳು

ಪುತ್ತೂರು ಅಧಿವಕ್ತಾ ಪರಿಷತ್, ದ.ಕ. ಜಿಲ್ಲೆ ಮತ್ತು ಮಹಿಳಾ ಬಂಧುತ್ವ ವೇದಿಕೆ ಸಹಯೋಗದೊಂದಿಗೆ ಮಹಿಳಾ ದಿನಾಚರಣೆ

ಪುತ್ತೂರು: ಪ್ರತಿಯೊಬ್ಬ ಮಹಿಳೆಯೂ ಸುನಿತಾ ವಿಲಿಯಂರಂತೆ ಬಾಹ್ಯಾಕಾಶಕ್ಕೆ ಹೋಗುವ ಸಾಮರ್ಥ್ಯವನ್ನು ಹೊಂದಿದ್ದಾಳೆ, ಆಕೆಗೆ ಅದಕ್ಕೆ ಪೂರಕ ವಾತಾವರಣ ಮತ್ತು ಶಿಕ್ಷಣ ದೊರಕಿದ್ದಾಗ ಇದು ಸಾಧ್ಯ, ಇದಕ್ಕೆ ಮಹಿಳೆಯರಿಗೆ ಸೂಕ್ತ ಬೆಂಬಲ ದೊರಕಬೇಕು ಎಂದು ಪುತ್ತೂರು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷೆ ಮತ್ತು ಪ್ರಧಾನ ಹಿರಿಯ ಸಿವಿಲ್ ನ್ಯಾಯಧೀಶೆ ಪ್ರಕೃತಿ ಕಲ್ಯಾಣಪುರ ಹೇಳಿದರು.

ಅವರು ಅಧಿವಕ್ತಾ ಪರಿಷತ್, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಹಿಳಾ ಬಂಧುತ್ವ ವೇದಿಕೆ, ಪುತ್ತೂರು ಇವರ ಸಹಯೋಗದೊಂದಿಗೆ ಪುತ್ತೂರಿನ ಒಕ್ಕಲಿಗ ಗೌಡ ಸೇವಾ ಸಂಘದ ಚುಂಚುಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ಅಧಿವಕ್ತಾ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಗೌರವಾಧ್ಯಕ್ಷೆ ಶ್ರೀಮತಿ ಪುಷ್ಪಾಲತಾ ಯು.ಕೆ ವಹಿಸಿ ಮಾತಾನಾಡಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಸಾರ‍್ಥ್ಯ ವನ್ನು ತೋರಿಸುತ್ತಿದ್ದಾರೆ ಮಹಿಳೆ ಒಬ್ಬಳು ಶಕ್ತಿಯಾಗಿ ಹೊರಹೊಮ್ಮಿದ್ದಾಳೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಂಳತಿಮೊಗೇರು ಮುಖ್ಯೋಪಾಧ್ಯಯಿನಿ ಸಂಧ್ಯಾರಾಣಿ ಮತ್ತು ಮಹಿಳಾ ಬಂಧುತ್ವ ವೇದಿಕೆಯ ಸಂಚಾಲಕಿ ಸುಮಂಗಲ ಶೆಣೈ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬನ್ನೂರು ಗ್ರಾಮ ಪಂಚಾಯತ್ ನ ಸ್ವಚ್ಚವಾಹಿನಿ ಇದರ ಗಿರಿಜಾ ಶಿವಪ್ಪ ನಾಯ್ಕ ಇವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಅಧಿವಕ್ತಾ ಪರಿಷತ್ ನ ಪುತ್ತೂರು ತಾಲೂಕು ಕಾರ್ಯದರ್ಶಿ ಪೂಜ ಬೆತ್ತಾಡಿ ಸ್ವಾಗತಿಸಿ, ವಿವೇಕಾನಂದ ಕಾನೂನು ಮಹಾ ವಿದ್ಯಾಲಯದ ವಿದ್ಯಾರ್ಥಿನಿ ವರ್ಷಾ ಪ್ರಾರ್ಥಿಸಿದರು., ನ್ಯಾಯವಾದಿ ಚಂದ್ರಾವತಿ ಟಿ ಅಂಚನ್ ವಂದಿಸಿದರು. ನ್ಯಾಯವಾದಿಗಳಾದ ಅರ್ಪಿತ ಪ್ರಶಾಂತ್ ಮತ್ತು ಫಮಿದಾ ಅಕ್ತರ್ ನಡೆಸಿಕೊಟ್ಟರು.

ಮಹಿಳೆಯರಿಗೆ ವಿವಿಧ ವಿಚಾರಗಳ ಕುರಿತಂತೆ ಮಹಿಳಾ ಬಂಧುತ್ವ ವೇದಿಕೆಯ ಜಿಲ್ಲಾಧ್ಯಕ್ಷೆ ಪ್ರೀಮಿ ಫೆರ್ನಾಂಡಿಸ್ ಅರಿವು ಮೂಡಿಸುವ ಮಾಹಿತಿ ನೀಡಿದರು ಮತ್ತು 2ನೇ ಅವಧಿಯಲ್ಲಿ ಅಧಿವಕ್ತಾ ಪರಿಷತ್ ನ ಮಂಗಳೂರು ತಾಲೂಕು ಅಧ್ಯಕ್ಷೆ ಆಶಾ ಪಿ ರೈ ಮಹಿಳೆ ದೃಷ್ಟಿ ಮತ್ತು ದಿಕ್ಕು ಎಂಬ ವಿಚಾರದ ಕುರಿತಾಗಿ ಮಾತನಾಡಿದರು.

ಸಮಾರೋಪ ಭಾಷಣವನ್ನು ಅಧಿವಕ್ತಾ ಪರಿಷತ್ ನ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ನಡೆಸಿಕೊಟ್ಟರು, ಜಿಲ್ಲಾ ಕಾರ್ಯದರ್ಶಿ ಜಯಪ್ರಕಾಶ್ ಭಂಡಾರಿ ವಂದಿಸಿದರು.

ಅಧಿವಕ್ತಾ ಪರಿಷತ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಡಿ.ಪಿ, ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಜಯಪ್ರಕಾಶ್ ಎನ್, ಕಾರ್ಯದರ್ಶಿ ದೀಪಕ್, ನ್ಯಾಯವಾದಿಗಳಾದ ಚಿದಾನಂದ ಬೈಲಾಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related posts

ಉರುವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆಯಲ್ಲಿ ಅದ್ವೈತ ರಥ ಯಾತ್ರೆಗೆ ಭವ್ಯ ಸ್ವಾಗತ

Suddi Udaya

ಕೊಕ್ಕಡ: ಮಜ್ದೂರ್ ಸಂಘದ ಕೊಕ್ಕಡ ವಲಯದ ನೂತನ ಕಛೇರಿಯ ಉದ್ಘಾಟನೆ

Suddi Udaya

ವೇಣೂರು ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದಿಂದ ಬಜಿರೆ ಶಾಲೆಯಲ್ಲಿ ಶ್ರಮದಾನ

Suddi Udaya

ಪೆರಾಡಿಯಲ್ಲಿ ‘ಸರಕಾರದ ನಡೆ ಕಾರ್ಯಕರ್ತರ ಕಡೆ’ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಪೂರ್ವಭಾವಿ ಸಭೆ

Suddi Udaya

ಉರುವಾಲು: ಉರುವಾಲುಪದವು ಶಿವಾಜಿನಗರದ ಶ್ರೀ ಮಹಮ್ಮಾಶ್ರೀ ದೇವಿಯ ಪ್ರತಿಷ್ಠಾ ಮಹೋತ್ಸವ – ಧಾರ್ಮಿಕ ಸಭೆ

Suddi Udaya

ಬಂದಾರು: ಮಹೇಶ್ ರವರ ತೋಟಕ್ಕೆ ನುಗ್ಗಿದ್ದ ಒಂಟಿಸಲಗ: ಅಪಾರ ಕೃಷಿ ಹಾನಿ

Suddi Udaya
error: Content is protected !!