33.8 C
ಪುತ್ತೂರು, ಬೆಳ್ತಂಗಡಿ
March 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮೇಲಂತಬೆಟ್ಟು: ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ-ಸಿರಿಕುಮಾರ ದರ್ಶನ ಮತ್ತು ದೈವಗಳ ನೇಮೋತ್ಸವ

ಮೇಲಂತಬೆಟ್ಟು: ಬದಿನಡೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ಮಡಂತ್ಯಾರು ವೇ.ಮೂ. ಶ್ರೀ ಗೋಪಾಲಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಶ್ರೀ ನಾಗಬ್ರಹ್ಮ ದೇವರ ವರ್ಷಾವಧಿ ಜಾತ್ರಾ ಮಹೋತ್ಸವವು ಮಾ.16ರಂದು ನಡೆಯಿತು.

ಮಾ.16ರಂದು ಬೆಳಿಗ್ಗೆ ನಿತ್ಯಪೂಜೆ, ಪ್ರಾರ್ಥನೆ, ಗೊನೆ ಮುಹೂರ್ತ ಉಗ್ರಾಣ ಮುಹೂರ್ತ, ತೋರಣ ಮುಹೂರ್ತ, ಶ್ರೀ ದೇವರಿಗೆ ಪುಣ್ಯಾಹ, ಗಣಹೋಮ, ಪಂಚಾಮೃತ ಅಭಿಷೇಕ, ಪವಮಾನ ಕಲಶಾಭಿಷೇಕ, ಪಂಚವಿಂಷತಿ ಕಲಶಾಭಿಷೇಕ, ದೈವಗಳಿಗೆ ಕಲಶಾಭಿಷೇಕ, ಪಂಚಪರ್ವ, ತುಲಾಭಾರ ಸೇವೆ, ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಸಾಮೂಹಿಕ ಆಶ್ಲೇಷಾ ಬಲಿ ಸೇವೆ, ವಟು ಆರಾಧನೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಸಂಜೆ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ, ಮಂಜುಶ್ರೀ ನಗರ ಮೇಲಂತಬೆಟ್ಟು ಮತ್ತು ಮೇಲಂತಬೆಟ್ಟು ಗ್ರಾಮದಾ ಮಹಿಳೆಯರಿಂದ ಭಜನಾ ಸೇವೆ, ಮಹಾರಂಗಪೂಜೆ, ದೈವಗಳಿಗೆ ಪರ್ವ ಸೇವೆ, ಹೂವಿನ ಪೂಜೆ, ರಾತ್ರಿ ಸಿರಿಕುಮಾರ ದರ್ಶನ ಮತ್ತು ಸಿರಿಕುಮಾರ ದೇವರ ಭೇಟಿ, ದೈವಗಳ ಭಂಡಾರ ಇಳಿಯುವುದು. ಶ್ರೀ ನಾಗಬ್ರಹ್ಮ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಕೊಡಮಣಿತ್ತಾಯ, ಮಲವ ಹಾಗೂ ವಾರಾಹಿ ದೈವಗಳ ನರ್ತನ ಸೇವೆ. ದೇವಸ್ಥಾನದಿಂದ ನಲ್ಕೆತ್ಯಾರು ಕಟ್ಟೆಯ ವರೆಗೆ ಚೆಂಡೆ, ಕೊಂಬು ವಾಲಗ, ವಾದ್ಯಗಳೊಂದಿಗೆ ದೇವರು ಹಾಗೂ ದೈವಗಳು ವಿಜೃಂಭಣೆಯ ಮೆರವಣಿಗೆ ನಡೆಯಲಿರುವುದು ಮತ್ತು ಕೊಡಮಣಿತ್ತಾಯ ದೈವಸ್ಥಾನದಲ್ಲಿ ದೇವರ ಮತ್ತು ದೈ ಭೇಟಿ ನಡೆಯಲಿದೆ.

ಮಾ.17ರಂದು ಬೆಳಿಗ್ಗೆ ಸಂಪ್ರೋಕ್ಷಣೆ ನಡೆಯಲಿದೆ.

Related posts

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗೆ ಷೂ ಎಸೆದ ಪ್ರಕರಣ ತನಿಖೆ ನಡೆಸಿ ಆರೋಪಿಯ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸಿ: ರಕ್ಷಿತ್ ಶಿವರಾಂ

Suddi Udaya

ಜಿಲ್ಲೆಯ ಜನ ಕಾಂಗ್ರೆಸ್‌ನ ಅಭಿವೃದ್ಧಿಯ ರಾಜಕಾರಣಕ್ಕೆ ಬೆಂಬಲ: ಹರೀಶ್ ಕುಮಾರ್

Suddi Udaya

ಉಜಿರೆ ಎಸ್‌ಡಿಎಮ್ ಆಂಗ್ಲಮಾಧ್ಯಮ ರಾಜ್ಯ ಪಠ್ಯಕ್ರಮ ಶಾಲೆಯ ವಿದ್ಯಾರ್ಥಿಗಳಿಗೆ ಅಂತರ್ ಶಾಲಾ ಮಟ್ಟದಲ್ಲಿ ಬಹುಮಾನ

Suddi Udaya

ಸ್ಕೂಟರ್-ಟಿಪ್ಪರ್ ನಡುವೆ ಅಪಘಾತ: ಕೂಟದಕಲ್ಲು ನಿವಾಸಿ ಸುಧಾಕರ್ ರವರಿಗೆ ಗಾಯ

Suddi Udaya

ಮುಂಡಾಜೆ ಸಿ ಎ ಬ್ಯಾಂಕ್ ನಿಂದ ಎನ್ ಎಸ್ ಗೋಖಲೆ ಸ್ಮರಣಾರ್ಥ ವಿದ್ಯಾನಿಧಿ ವಿತರಣೆ

Suddi Udaya

ನಾರಾವಿ ಸಂತ ಅಂತೋಣಿ ಪ.ಪೂ ಕಾಲೇಜು ಶೇ.98 ಫಲಿತಾಂಶ

Suddi Udaya
error: Content is protected !!