36.7 C
ಪುತ್ತೂರು, ಬೆಳ್ತಂಗಡಿ
March 16, 2026
Uncategorized

ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಮಂಜುನಾಥ್ ರವರಿಗೆ ಮೇಲಂತಬೆಟ್ಟು ಭಗವತಿ ಕ್ಷೇತ್ರದಲ್ಲಿ ಗೌರವಾರ್ಪಣೆ

ಮೇಲಂತಬೆಟ್ಟು: ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ಮಾ.14ರಂದು ನಡೆದ ಸಂಕ್ರಾಂತಿ ಪೂಜೆ ಹಾಗೂ ವಿಶೇಷ ರಂಗಪೂಜೆಯ ಸಂದರ್ಭದಲ್ಲಿ ಕಿರಿಯ ವಯಸ್ಸಿನಲ್ಲಿಯೇ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಮೇಲಂತಬೆಟ್ಟು ಗ್ರಾಮದ ಮಾಪಲಾಡಿ ನಿವಾಸಿ ಮಂಜುನಾಥ್ ಶಿವಲಿಂಗಪ್ಪ ಜಿ. ಇವರನ್ನು ಕ್ಷೇತ್ರದ ವತಿಯಿಂದ ಧರ್ಮದರ್ಶಿ ಯೋಗೀಶ್ ಪೂಜಾರಿ ಅವರು ಗೌರವಿಸಿದರು.
ನ್ಯಾಯವಾದಿ ಭಗೀರಥ ಜಿ. ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಾನಂದ ಅಂಕಾಜೆ ಲಾಯಿಲ ಅವರು ಮಾತನಾಡಿ, ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ಮಂಜುನಾಥ್ ಅವರ ಸಾಧನೆಗಳನ್ನು ತಿಳಿಸಿದರು. ಮಾಪಲಾಡಿ ಸುರೇಶ್ ಶೆಟ್ಟಿ ಮಾಪಲಾಡಿಯವರು ಇವರಿಗೆ ಅವಕಾಶವನ್ನು ನಿರ್ಮಿಸಿಕೊಟ್ಟಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಭಗವತಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದಲ್ಲಿ ಮಂಜುನಾಥ್ ಅವರು ತೊಡಗಿಸಿಕೊಂಡಿದ್ದು, ದೇವಿಯ ಅನುಗ್ರಹ ಇವರ ಈ ಸಾಧನೆಗೆ ಕಾರಣವಾಗಿದೆ ಎಂದು ಅಭಿಪ್ರಾಯ ಪಟ್ಟರು.

2022ರಲ್ಲಿ ನಡೆದ ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಗಳು ನಡೆಯುತ್ತಿರುವ ಸಂದರ್ಭದಲ್ಲಿ ರಾತ್ರಿ ನಡೆಯುತ್ತಿದ್ದ ಶ್ರಮದಾನದಲ್ಲಿ ಮಂಜುನಾಥ್ ಅವರು ಸಕ್ರೀಯವಾಗಿ ಭಾಗವಹಿಸಿ ದೇವಿಯ ಸೇವೆಯನ್ನು ಮಾಡಿದ್ದರು. ದೇವಿಯ ಅನುಗ್ರಹದಿಂದ ಅವರು ಪ್ರಥಮ ಹಂತದಲ್ಲೇ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಪರೀಕ್ಷೆ ಬರೆದು ಪಾಸಾಗಿದ್ದಾರೆ ಎಂಬ ನಂಬಿಕೆ ಭಕ್ತ ಸಮೂಹದಲ್ಲಿದೆ. ಇವರ ತಾಯಿ ನಿಂಗವ್ವ ಮಾಪಲಾಡಿ ಸುರೇಶ್ ಶೆಟ್ಟಿ ಭ್ರಾಮರಿ ಇವರ ಮನೆಯಲ್ಲಿ ತೋಟದ ಕೆಲಸ ಮಾಡಿಕೊಂಡು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದರು. ಮಂಜುನಾಥ್ ಇವರ ಸಾಧನೆಯನ್ನು ಗುರುತಿಸಿ ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸುರೇಶ್ ಶೆಟ್ಟಿ ಭ್ರಾಮರಿ ಮಾಪಲಾಡಿ, ರಮೇಶ್ ಬಂಗೇರ ಅಂಕಾಜೆ ಲಾಯಿಲ, ಲಕ್ಷ್ಮಣ ಶಾಂತಿ, ಯಶವಂತ ಶಾಂತಿ, ಮಂಜುನಾಥ್ ಅವರ ತಾಯಿ ನಿಂಗವ್ವ, ಶೀನ ಮೇಲಂತಬೆಟ್ಟು ಉಪಸ್ಥಿತರಿದ್ದರು. ಕ್ಷೇತ್ರದಲ್ಲಿ ಸಂಕ್ರಾಂತಿ ಪೂಜೆ ಹಾಗೂ ವಿಶೇಷ ರಂಗಪೂಜೆ ಲಕ್ಷ್ಣಣ ಶಾಂತಿ ಅವರ ನೇತೃತ್ವದಲ್ಲಿ ನಡೆಯಿತು.

Related posts

ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷರಾಗಿ ಹೇಮಾವತಿ, ಉಪಾಧ್ಯಕ್ಷರಾಗಿ ಪ್ರಿಯಾ ಆಯ್ಕೆ

Suddi Udaya

ಬೆಳ್ತಂಗಡಿಯ ಜಗದೀಶ್ ಕುಲಾಲ್ ರವರಿಗೆ ಕುಂಬಾರರ ಸೇವಾ ಸಂಘದಿಂದ ಕ್ರೀಡಾ ರತ್ನ ಪ್ರಶಸ್ತಿ

Suddi Udaya

ನಾಲ್ಕೂರು: ನಿಟ್ಟಡ್ಕ, ಪುಣ್ಕೆದೊಟ್ಟು, ಪರಿಸರದಲ್ಲಿ ಹೆಚ್ಚಿದ ಚಿರತೆ ಕಾಟ, ಭಯಭೀತರಾದ ಗ್ರಾಮಸ್ಥರು

Suddi Udaya

ನ .29: ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ವಾಹನಗಳ ಹರಾಜು

Suddi Udaya

ಲೋಕಸಭಾ ಚುನಾವಣೆ: ಭಾರತೀಯ ಜನತಾ ಪಾರ್ಟಿ‌ ಬೆಳ್ತಂಗಡಿ ಮಂಡಲ ಇದರ ನೇತೃತ್ವದಲ್ಲಿ ಬೃಹತ್ ರೋಡ್ ಶೋ:ಬಿಜೆಪಿ ರಾಜ್ಯ ಅಧ್ಯಕ್ಷರು ಹಾಗೂ ಶಿಕಾರಿಪುರ ಶಾಸಕ ಬಿ.ವೈ. ವಿಜಯೇಂದ್ರ ಹಾಗೂ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮತ ಯಾಚನೆ

Suddi Udaya

ಆಪರೇಷನ್ ಸಿಂದೂರ ಯಶಸ್ವಿ ಕಾರ್ಯಚರಣೆ : ಬಿಜೆಪಿ ಗರ್ಡಾಡಿ ಶಕ್ತಿ ಕೇಂದ್ರ ವತಿಯಿಂದ ದೇವರಿಗೆ ವಿಶೇಷ ಪೂಜೆ

Suddi Udaya
error: Content is protected !!