33.8 C
ಪುತ್ತೂರು, ಬೆಳ್ತಂಗಡಿ
March 16, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

KCET, NEET ಹಾಗೂ JEE (Mains) ಪರೀಕ್ಷೆಗಳಿಗಾಗಿ ಮಾ.18ರಿಂದ ವಿದ್ವತ್‌ ಕಾಲೇಜಿನಲ್ಲಿ ಕ್ರ್ಯಾಶ್ ಕೋರ್ಸ್ ಆರಂಭ

ಬೆಳ್ತಂಗಡಿ: ಪರೀಕ್ಷೆಗಳಾದ KCET, NEET ಹಾಗೂ JEE (Mains) ಪರೀಕ್ಷೆಗಳಿಗಾಗಿ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗಾಗಿ ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ವತಿಯಿಂದ ಇದೇ ಮಾರ್ಚ್ 18, 2026 ರಿಂದ ವಿಶೇಷ ಕ್ರ್ಯಾಶ್ ಕೋರ್ಸ್ ಆರಂಭಿಸಲಾಗುತ್ತಿದೆ.

ಈ ಕ್ರ್ಯಾಶ್ ಕೋರ್ಸ್‌ನಲ್ಲಿ ಪ್ರತಿಯೊಂದು ಅಧ್ಯಾಯವನ್ನು ತಜ್ಞ ಉಪನ್ಯಾಸಕರು ಬೋಧಿಸುವುದರ ಜೊತೆಗೆ ಅಧ್ಯಯನಕ್ಕೆ ಅಗತ್ಯವಾದ ರೆಫರೆನ್ಸ್ ಮಾಡ್ಯೂಲ್‌ಗಳು ಹಾಗೂ ತರಗತಿ ಕಾರ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಪ್ರತಿದಿನ ಅಭ್ಯಾಸ ಪತ್ರಿಕೆಗಳೊಂದಿಗೆ ಅಧ್ಯಾಯವಾರು ಪರೀಕ್ಷೆಗಳನ್ನೂ ನಡೆಸಲಾಗುತ್ತದೆ. ಮೊದಲ 20 ದಿನಗಳಲ್ಲಿ ಮೂರು ದಿನಕ್ಕೊಮ್ಮೆ ಪರೀಕ್ಷೆ ನಡೆಸಲಾಗುತ್ತದೆ, ನಂತರ ಪ್ರತಿದಿನ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳ ತಯಾರಿಯನ್ನು ಮತ್ತಷ್ಟು ಪರಿಣಾಮಕಾರಿ ಯಾಗಿ ನಡೆಸುವುದು ಇದರ ಉದ್ದೇಶವಾಗಿದೆ.

ಕ್ರ್ಯಾಶ್ ಕೋರ್ಸ್ ತರಬೇತಿಯಲ್ಲಿ ಒಟ್ಟು 15 ಪ್ರಮುಖ ಪರೀಕ್ಷೆಗಳು, ಪರೀಕ್ಷೆಗೆ ಸಂಬಂಧಿಸಿದ ಶಾರ್ಟ್‌ಕಟ್ ವಿಧಾನಗಳು ಹಾಗೂ ತಜ್ಞರ ಮಾರ್ಗದರ್ಶನವನ್ನು ನೀಡಲಾಗುತ್ತದೆ. ಜೊತೆಗೆ KCET ಕೃಷಿ ಕೋಟಾಗೆ ಸಂಬಂಧಿಸಿದ ಪ್ರಾಯೋಗಿಕ ತರಬೇತಿಯನ್ನೂ ನೀಡಲಾಗುತ್ತದೆ.

ಕ್ರ್ಯಾಶ್ ಕೋರ್ಸ್ ಗೆ ಸೇರುವಲ್ಲಿ ಉತ್ಸುಕರಾಗಿದ್ದವರು ಹೆಚ್ಚಿನ ಮಾಹಿತಿಗಾಗಿ 7618718793, 7618718794, 7618718795 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕಾಲೇಜು ಆಡಳಿತ ಮಂಡಳಿ ಪ್ರಕಟಣೆಯಲ್ಲಿ‌ ತಿಳಿಸಿದೆ.

Related posts

ಬೆಳ್ತಂಗಡಿ ಟೀಚರ್ಸ್ ಬ್ಯಾಂಕ್ ನಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಬೆಳ್ತಂಗಡಿ: ಮುಗುಳಿ ವಸತಿ ನಿಲಯದ ಬಳಿ ಅಡಿಕೆ ತೋಟದಲ್ಲಿ ಚಿರತೆ ಪತ್ತೆ

Suddi Udaya

ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ರೂ. 233.13 ಕೋಟಿ ವ್ಯವಹಾರ, ಸದಸ್ಯರಿಗೆ ಶೇ. 15 ಡಿವಿಡೆಂಟ್

Suddi Udaya

ಭಾರೀ ಮಳೆಯ ಹಿನ್ನೆಲೆ: ಬೆಳ್ತಂಗಡಿ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಇಂದು ರಜೆ

Suddi Udaya

ಬಂದಾರು: ಪೆರ್ಲ ಬೈಪಾಡಿಯ ಕಾಡಂಡ ಬಳಿ ಗುಡ್ಡಕ್ಕೆ ಬೆಂಕಿ

Suddi Udaya

ಲಾಯಿಲ: ಕಾಶಿಬೆಟ್ಟು ಬಳಿ ಇಂಡಸ್ಟ್ರೀಯಲ್ ಎಸ್ಟೇಟ್ ಉದ್ದಿಮೆದಾರರಿಂದ ಪ್ರತಿಭಟನೆಯ ನಾಮಫಲಕ: ಶೀಘ್ರವೇ ಸಮಸ್ಯೆ ಪರಿಹರಿಸದಿದ್ದಲ್ಲಿ ಬಹಿರಂಗ ಪ್ರತಿಭಟನೆ

Suddi Udaya
error: Content is protected !!