ಕೊಯ್ಯೂರು: ಮಂಗಳೂರು ಎಂ ಆರ್ ಪಿ ಎಲ್ ಕಂಪನಿಯ ಸಿಎಸ್ಆರ್ ನಿಧಿಯಿಂದ ಮಂಜೂರುಗೊಂಡ ಅನುದಾನದಲ್ಲಿ ಕಾಲೇಜು ತರಗತಿ ಕೊಠಡಿಗಳ ಕಾಮಗಾರಿ ಪ್ರಯುಕ್ತ ಶಿಲಾನ್ಯಾಸ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜರವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ದಾಮೋದರ ಗೌಡ ಬೆರ್ಕೆ, ಸದಸ್ಯ ದಿವ ಕೊಕ್ಕಡ, ತಾ.ಪಂ. ಮಾಜಿ ಉಪಾಧ್ಯಕ್ಷೆ ಗೀತಾ ರಾಮಣ್ಣ ಗೌಡ, ಗ್ರಾಮ ಪಂಚಾಯತ್ ಮಾಜಿ ಸದಸ್ಯರುಗಳಾದ ಲೋಕೇಶ್ ಗೌಡ ಪಾಂಬೇಲು, ಹೇಮಾವತಿ, ಉದ್ಯಮಿ ಸಿದ್ದಿಕ್ ಮಲೆಬೆಟ್ಟು, ನಿಕಟ ಪೂರ್ವ ಪ್ರಾಂಶುಪಾಲ ಬಾಲಕೃಷ್ಣ ಬೇರಿಕೆ, ಕಂಟ್ರಾಕ್ಟರ್ ಸಿನಾನ್ -ಸಮದ್ ಪುತ್ತೂರು, ಉದ್ಯಮಿ ಅರುಣ್ ಕನ್ಯಾಡಿ ಗಣ್ಯರಾದ ಒಬಯ್ಯ ನಾಯ್ಕ, ಶೇಖರ್ ಕೋರ್ಯಾರು, ಸಲೀo ಎರುಕಡಪು, ಸಂಸ್ಥೆಯ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.ಪ್ರಾಂಶುಪಾಲ ಮೋಹನ ಗೌಡ ಸ್ವಾಗತಿಸಿ, ವಂದಿಸಿದರು.












