25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟದಲ್ಲಿ ವರ್ಷಾವಧಿ ಜಾತ್ರೋತ್ಸವ: ರಥೋತ್ಸವ- ಇಂದು ಕೊಡಮಣಿತ್ತಾಯ ದೈವದ ನೇಮೋತ್ಸವ

ಬೆಳ್ತಂಗಡಿ: ಕರಾವಳಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಪೆರಿಂಜೆಯ ಶ್ರೀ ಕ್ಷೇತ್ರ ಪಡ್ಡ್ಯಾರಬೆಟ್ಟ ಶ್ರೀ ಕೊಡಮಣಿತ್ತಾಯ ದೈವದ ಮೂಲಸ್ಥಾನದಲ್ಲಿ ವರ್ಷಾವಧಿ ಜಾತ್ರೆ ಮಾ.14 ರಂದು ಮೊದಲುಗೊಂಡು ಮಾ.19ರ ವರೆಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ವಿಜೃಂಭಣೆಯಿಂದ ನಡೆಯುತ್ತಿದೆ.

ತುಳುನಾಡಿನ ಆಚಾರ-ವಿಚಾರ ಅತ್ಯಂತ ಶ್ರೀಮಂತವಾಗಿದೆ ಆಗಾಗಿ ಶ್ರೀ ಕ್ಷೇತ್ರ ಪಡ್ಯಾರಬೆಟ್ಟದಲ್ಲಿ ನಡೆಯುವ ವರ್ಷಾವಧಿ ಜಾತ್ರೆಗೆ ನಾಡಿನ ವಿವಿಧ ಕಡೆಗಳಿಂದ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ದೈವದ ಗಂಧಪ್ರಸಾದ ಸ್ವೀಕರಿಸಿದರು. ಭಕ್ತರು ತಮ್ಮ ಸಂಕಷ್ಟ ನಿವರಾಣೆಗೆ, ಅಭಿಷ್ಟೇಗಳ ಪ್ರಾಪ್ತಿಗಾಗಿ ದೈವದ ಮುಂದೆ ಪ್ರಾರ್ಥಿಸಿದರು. ಮಲ್ಲಿಗೆ, ಸೀಯಾಳ ಸಹಿತ ಇನ್ನಿತರ ವಸ್ತುಗಳನ್ನು ಭಕ್ತರು ತಮ್ಮ ಹರಕೆ ರೂಪದಲ್ಲಿ ಪೆರಿಂಜಮಾರ ದೈವ ಕೊಡಮಣಿತ್ತಾಯಕ್ಕೆ ಅರ್ಪಿಸಿದರು. ಮಾ.೧೭ರಂದು ವರ್ಷಾವಧಿ ಜಾತ್ರೋತ್ಸವ ಅಂಗವಾಗಿ ಮಧ್ಯಾಹ್ನ ರಥದಲ್ಲಿ ಮಹಾಪೂಜೆ, ರಥೋತ್ಸವ, ಹೂವಿನ ಪೂಜೆ ಮಧ್ಯಾಹ್ನದಿಂದ ಸಂಜೆ ತನಕ ಮಹಾ ಅನ್ನಸಂತರ್ಪಣೆ, ರಾತ್ರಿ ಕೊಡಮಣಿತ್ತಾಯ ದೈವದ ನೇಮೋತ್ಸವ ವಿಜೃಂಭಣೆಯಿAದ ಜರುಗಲಿದೆ.

ಶ್ರೀ ಕ್ಷೇತ್ರ ಪಡ್ಯಾರಬೆಟ್ಟದ ಅನುವಂಶೀಯ ಆಡಳಿತದಾರ ಎ.ಜೀವಂಧರ ಕುಮಾರ್ ಯಾನೆ ಕಂಚಿಪೂವಣಿ ಪಡ್ಡ್ಯೋಡಿಗುತ್ತು, ವಿಕಾಸ್ ಜೈನ್, ವಿಶ್ವಾಸ್ ಜೈನ್ ಸಹಿತ ಮತ್ತಿತರರು ಉಪಸ್ಥಿತರಿದ್ದರು.

Related posts

ಕಪುಚಿನ್ ಕೃಷಿಕಾ ಸೇವಾ ಕೇಂದ್ರ ಮತ್ತು ವಿಮುಕ್ತಿ ಸ್ವ ಸಹಾಯ ಸಂಘಗಳ ವತಿಯಿಂದ ವಿದ್ಯಾಸ್ನೇಹಿ ಬಡ್ಡಿರಹಿತ ಶಿಕ್ಷಣ ಸಾಲ ವಿತರಣೆ

Suddi Udaya

ಜಿ.ಎಸ್.ಟಿ ನೋಟಿಸ್ ಹಿಂಪಡೆದ ರಾಜ್ಯ ಸರ್ಕಾರ: ಕಾಂಗ್ರೆಸ್ ಸರ್ಕಾರದ ತುಘಲಕ್ ನೀತಿ ಬಟಾ ಬಯಲು – ಹರೀಶ್ ಪೂಂಜ

Suddi Udaya

ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಬೆಳ್ತಂಗಡಿ ವಲಯ 25ನೇ ವರ್ಷದ ರಜತ ಸಂಭ್ರಮದ ಲೋಗೋ ಬಿಡುಗಡೆ

Suddi Udaya

ಮಾ.12: ಮಡಂತ್ಯಾರು ಪ್ರಗತಿ ಎಂಟರ್‌ಪ್ರೈಸಸ್‌ ಹೊಸ ಸೇರ್ಪಡೆ ಕ್ರಿಯಾಂಝ ಬ್ರಾಂಡಿನ ಅತ್ಯಾಧುನಿಕ ಟೈಲ್ಸ್ ಶೋರೂಂ ಉದ್ಘಾಟನೆ

Suddi Udaya

ಬದನಾಜೆ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟೀಯ ಸುರಕ್ಷತಾ ಸಪ್ತಾಹ ಆಚರಣೆ

Suddi Udaya

ಮಾ.14-19 ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ

Suddi Udaya
error: Content is protected !!