36.1 C
ಪುತ್ತೂರು, ಬೆಳ್ತಂಗಡಿ
March 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿರಾಜಕೀಯ

ಬಿಪಿಎಲ್ ಕಾರ್ಡ್ ಪಡೆಯಲು ಆದಾಯ ಮಿತಿ ಏರಿಸಿ: ಎಂಎಲ್‌ಸಿ ಪ್ರತಾಪಸಿಂಹ ನಾಯಕ್

ಬೆಳ್ತಂಗಡಿ: ಬಿಪಿಎಲ್ ಪಡಿತರ ಚೀಟಿ ವಿತರಿಸಲು ಈಗಲೂ ವಾರ್ಷಿಕ 1.20 ಲಕ್ಷ ರೂ. ಆದಾಯವನ್ನು ಮಾನದಂಡವಾಗಿ ಅನುಸರಿಸುತ್ತಿರುವುದು ಸರಿಯಲ್ಲ. ಬಿಪಿಎಲ್ ಕಾರ್ಡ್ ಪಡೆಯಲು ಈಗಲೂ 9 ವರ್ಷಗಳ ಹಳೆಯ ಮಾನದಂಡವನ್ನೇ ಬಳಸಲಾಗುತ್ತಿದೆ. ಆದ್ದರಿಂದ, ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆದಾಯ ಮಿತಿಯನ್ನು 1.20 ಲಕ್ಷದಿಂದ ಕನಿಷ್ಠ 3 ಲಕ್ಷ ರೂ. ಗೆ ಏರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸಭಾಪತಿ ಬಸವರಾಜ ಹೊರಟ್ಟಿ ಅವರಲ್ಲಿ ಆಗ್ರಹಿಸಿದ್ದಾರೆ.

ಅವರು ವಿಧಾನಪರಿಷತ್ ನಲ್ಲಿ ಸೋಮವಾರ ಶೂನ್ಯವೇಳೆಯಲ್ಲಿ ವಿಚಾರವನ್ನು ಪ್ರಸ್ತಾವಿಸಿದರು.
ಬಿ.ಪಿ.ಎಲ್. ನ.ಮಾನದಂಡವನ್ನು ಬದಲಿಸುವ ತುರ್ತು ಅಗತ್ಯವಿದ್ದು, ನಿಜವಾದ ಫಲಾನುಭವಿಗಳಿಗೆ ಸವಲತ್ತು ತಲುಪಬೇಕಿದೆ. ಯಾವುದೇ ಯೋಜನೆಗಳ ಮಾನದಂಡವಾಗಲಿ ಕಾಲಕಾಲಕ್ಕೆ ಅವನ್ನು ಪರಾಮರ್ಶಿಸಿ, ಸೂಕ್ತ ಮಾರ್ಪಾಟು ಮಾಡುವುದು ಅತ್ಯಗತ್ಯ. ಬಿಪಿಎಲ್ ಕಾರ್ಡ್ ವಿಷಯದಲ್ಲಿ ಸಾಕಷ್ಟು ಗೊಂದಲಗಳಿದ್ದು, ಸೂಕ್ತ ನಿಯಮಗಳನ್ನು ರೂಪಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ಜೀವನ ವೆಚ್ಚ ಸತತವಾಗಿ ಹೆಚ್ಚುತ್ತಲೇ ಸಾಗಿದೆ. ಈಗಿನ ಬೆಲೆ ಏರಿಕೆಯ ಕಾಲದಲ್ಲಿ ವಾರ್ಷಿಕ 1.20 ಲಕ್ಷ ರೂ. ಆದಾಯ ಎನ್ನುವುದು ತೀರಾ ಕಡಿಮೆ. ಸಾಮಾನ್ಯ ಕೂಲಿ ಕಾರ್ಮಿಕರ ದಿನದ ಕೂಲಿ 500-600 ರೂ. ಇದ್ದರೂ ಅವರ ವಾರ್ಷಿಕ ಆದಾಯ ಈ ಮಿತಿಯನ್ನು ಮೀರುತ್ತದೆ. ಇದರಿಂದ ನಿಜವಾದ ಬಡವರಿಗೂ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ. ಹಾಗಾಗಿಯೇ. ಬಿಪಿಎಲ್ ಕಾರ್ಡ್ ಪಡೆಯಲು ಇರುವ ಆದಾಯ ಮಿತಿಯನ್ನು 1.20 ಲಕ್ಷದಿಂದ ಕನಿಷ್ಠ 3 ಲಕ್ಷ ರೂ. ಗೆ ಏರಿಸಬೇಕು ಎಂಬ ಆಗ್ರಹ ಸೂಕ್ತವಾಗಿದೆ.

ಅಲ್ಲದೆ ಇತ್ತೀಚೆಗೆ ಸರ್ಕಾರವು ಐಟಿ ಪಾವತಿದಾರರು, ಸರ್ಕಾರಿ ನೌಕರರು ಮತ್ತು 7.5 ಎಕರೆಗಿಂತ ಹೆಚ್ಚು ಜಮೀನು ಇರುವವರ ಕಾರ್ಡ್‌ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಿದೆ. ಆದರೆ ಈ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷಗಳಿಂದಾಗಿ ಬಡವರ ಕಾರ್ಡ್‌ಗಳು ಸಹ ಅಕಾರಣವಾಗಿ ರದ್ದಾಗುತ್ತಿವೆ ಎಂಬ ಆರೋಪವಿದ್ದು, ಬಡವರಿಗೆ ಅನ್ಯಾಯವಾಗದಂತೆ ಪಾರದರ್ಶಕ ಪ್ರಕ್ರಿಯೆ ನಡೆಸಬೇಕು. ಸರ್ಕಾರ ಈಗಾಗಲೇ 12 ಲಕ್ಷಕ್ಕೂ ಹೆಚ್ಚು ಕಾರ್ಡ್‌ಗಳನ್ನು ‘ಅನರ್ಹ’ ಎಂದು ಗುರುತಿಸಿದೆ. ಈ ಪೈಕಿ ಈಗಾಗಲೇ ಲಕ್ಷಾಂತರ ಕಾರ್ಡ್‌ಗಳನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿದೆ ಅಥವಾ ರದ್ದುಗೊಳಿಸಲಾಗಿದೆ. ಹೊಸ ಬಿಪಿಎಲ್ ಕಾರ್ಡ್‌ಗಾಗಿ 3.22 ಲಕ್ಷಕ್ಕೂ ಅಧಿಕ ಅರ್ಜಿಗಳು ವಿಲೇವಾರಿಗೆ ಇನ್ನೂ ಬಾಕಿ ಇವೆ.

ಆದುದರಿಂದ, ಬಿಪಿಎಲ್ ಕಾರ್ಡ್ ಪಡೆಯಲು ಇರುವ ಮಾನದಂಡಗಳನ್ನು ಕೂಡಲೇ ಪರಾಮರ್ಶಿಸಿ, ಪ್ರಸ್ತುತ ಇರುವ ಆದಾಯ ಮಿತಿಯನ್ನು ವಾಸ್ತವ ನೆಲೆಗಟ್ಟಿನ ಆಧಾರದಲ್ಲಿ ಗಣನೀಯವಾಗಿ ಏರಿಸುವುದು, ಬಡವರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗದಂತೆ ಪಾರದರ್ಶಕ ಪ್ರಕ್ರಿಯೆ ನಡೆಸುವುದು ಹಾಗೂ ಹೊಸ ಬಿಪಿಎಲ್ ಕಾರ್ಡ್‌ಗಾಗಿ ಬಾಕಿ ಇರುವ 3.22 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅಗತ್ಯ ಹಾಗೂ ಸೂಕ್ತ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

Related posts

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣ: 13ನೇ ಗುರುತಿನ ಸ್ಥಳದಲ್ಲಿ ಜಿಪಿಆರ್ ಯಂತ್ರ ಬಳಸಿ ಪರಿಶೀಲನೆಗೆ ಮುಂದಾದ ಎಸ್.ಐ.ಟಿ

Suddi Udaya

ಇಳಂತಿಲ ಗ್ರಾ. ಪಂ. ನ ಪ್ರಭಾರ ಅಧ್ಯಕ್ಷರಾಗಿ ಸವಿತಾ ಹೆಚ್. ಅಧಿಕಾರ ಸ್ವೀಕಾರ

Suddi Udaya

ಕೊಕ್ಕಡ: ಮುಂಡೂರುಪಳಿಕೆ ಯುವಶಕ್ತಿ ಫ್ರೆಂಡ್ಸ್ ವತಿಯಿಂದ ಕೆಸರ್ ದ ಕಂಡೊಡು ಒಂಜಿ‌ದಿನ

Suddi Udaya

ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್, ಪದವಿ ಪೂರ್ವ ಹಾಗೂ ಪ್ರೌಢಶಾಲಾ ವಿಭಾಗದ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಕೆನರಾ ಬ್ಯಾಂಕ್ ವತಿಯಿಂದ ನಿಡ್ಲೆ ಸರ್ಕಾರಿ ಪ್ರೌಢ ಶಾಲಾ ಮಕ್ಕಳಿಗೆ ಗಾಂಧಿ ಜಯಂತಿ ಪ್ರಯುಕ್ತ ಗಾಂಧೀಜಿಯವರ ಚಿತ್ರವನ್ನು ಬಿಡಿಸುವ ಸ್ಪರ್ಧೆ

Suddi Udaya

ಬೆಳ್ತಂಗಡಿ: ಮಿಷ್ ಮಷ್ ಫ್ಯಾನ್ಸಿಯಲ್ಲಿ ಲಕ್ಕಿ ಡ್ರಾ: ರೂ.499 ರ ಹೆಚ್ಚಿನ ಖರೀದಿಗೆ ಲಕ್ಕಿ ಕೂಪನ್

Suddi Udaya
error: Content is protected !!