September 19, 2026
Uncategorized

ಮದ್ದಡ್ಕತಾಯಿ ಶ್ರೀ ರಕ್ತೇಶ್ವರಿ ಮತ್ತು ಪಿಲಿಚಾಮುಂಡಿ ದೈವಸ್ಥಾನದ‌ಲ್ಲಿ ದೈವಗಳ ಪ್ರತಿಷ್ಠೆ ಹಾಗೂ ನೇಮೋತ್ಸವ

ಕುವೆಟ್ಟು: ಜೀರ್ಣೋದ್ಧಾರಗೊಂಡ ಮದ್ದಡ್ಕತಾಯಿ ಶ್ರೀ ರಕ್ತೇಶ್ವರಿ ಮತ್ತು ಪಿಲಿಚಾಮುಂಡಿ ದೈವಸ್ಥಾದ‌ಲ್ಲಿ ದೈವಗಳ ಪ್ರತಿಷ್ಠಾ ಕಾರ್ಯಕ್ರಮ‌ ಹಾಗೂ ನೇಮೋತ್ಸವ ಮಾ 12 ರoದು ತoತ್ರಿಗಳಾದ ಬಾಲಕ್ರಷ್ಣ‌ ಪಾoಗಣ್ಣಾಯ ರವರ ನೇತೃತ್ವದಲ್ಲಿ ಅಸ್ರಣ್ಣರು ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಎಂ ರಘುರಾಮ್ ಭಟ್ ಮಠ ಹಾಗೂ ಅಸ್ರಣ್ಣರು ಶ್ರೀನಿವಾಸ ಅಮ್ಮುಣ್ಣಾಯರವರ ಉಪಸ್ಥಿತಿಯಲ್ಲಿ ಜರಗಿತು.

ಬೆಳಿಗ್ಗೆ ಲಕ್ಷ್ಮಿನರಸಿಂಹ ಮಠದಿಂದ ಭಂಡಾರದ ಮೆರವಣಿಗೆ ಬಂದು ವೈದಿಕ ವಿಧಾನಗಳೊಂದಿಗೆ ಪ್ರತಿಷ್ಠೆ ಹಾಗೂ ಸಾನಿಧ್ಯ ಕಲಶ ಮಹೋತ್ಸವ ಕಾರ್ಯಕ್ರಮ ಜರಗಿತು.

ದೈವಸ್ಥಾನದ ಆಡಳಿತ ಮೊಕ್ತೇಸರ ಮೋಹನ್ ಕೆರ್ಮ್ಮುಣ್ಣಾಯ ಮೈರಾರು, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷೆ ಸುಜಿತಾ ವಿ ಬಂಗೇರ, ದೈವಸ್ಥಾನಕ್ಕೆ ಹೆಚ್ಚುವರಿ ಜಾಗ ದಾನವಾಗಿ ನೀಡಿದ ಮುಗೆರೋಡಿ ಕನ್ಸ್ಟ್ರಕ್ಷನ್ ಇದರ ಮಾಲಕರಾದ ಸುಧಾಕರ ಶೆಟ್ಟಿ ಮಂಗಳೂರು, ರಮೇಶ್ ಬಂಗೇರ. ಪ್ರಭಾಕರ ಬಂಗೇರ, ಶಾರದ ಕೃಷ್ಣ ಕೇದೆ ಹೊಸಮನೆ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಕೆ ವಿಜಯ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಸುದೀಪ್ ಶೆಟ್ಟಿ, ಕೋಶಾಧಿಕಾರಿ ರಾಜ್ ಪ್ರಕಾಶ್ ಶೆಟ್ಟಿ, ದೈವಸ್ಥಾನದ ಸೇವಾ ಟ್ರಸ್ಟ್ ನ ಕೋಶಾಧಿಕಾರಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಅರ್ಚಕ ವೃಂದ ಹಾಗೂ ಸಮಿತಿಯ ಪದಾಧಿಕಾರಿಗಳು, ದೈವಸ್ಥಾನದ ಸೇವಾ ಟ್ರಸ್ಟಿನ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು

Related posts

ದ.ಕ. ಜಿಲ್ಲೆಯ ಎಲ್ಲಾ ಶಾಲಾ ಆವರಣದಲ್ಲಿ ಧಾರ್ಮಿಕ ಆಚರಣೆಗೆ ಬ್ರೇಕ್: ರಾಜ್ಯ ಸರ್ಕಾರ ಹಿಂದೂ ವಿರೋಧಿ ನಿಲುವನ್ನು ಮತ್ತೆ ವ್ಯಕ್ತ ಪಡಿಸಿದೆ: ಹರೀಶ್ ಪೂಂಜ

Suddi Udaya

ಬಳಂಜ ಕೃಷಿಕ ಅಣ್ಣಿ ಪೂಜಾರಿ ನಿಧನ

Suddi Udaya

ಮುಂಡಾಜೆ: ತಾಲೂಕು ಮಟ್ಟದ ಕೇರಂ ಪಂದ್ಯಾಟ: ವಿಜೇತರಿಗೆ ಬಹುಮಾನ

Suddi Udaya

ನಿಡ್ಲೆ: ಪಿಲಿಕಜೆ ನಿವಾಸಿ ಸುಗುಣ ನಿಧನ

Suddi Udaya

ಪುಕ್ಕಟೆ ಪ್ರಚಾರಕ್ಕಾಗಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ತನ್ನದೆಂದು ಬಿಂಬಿಸುವ ಬೆಳ್ತಂಗಡಿ ಕಾಂಗ್ರೆಸಿಗರು – ಗಣೇಶ್ ಗೌಡ ನಾವೂರು

Suddi Udaya

ಮಡಂತ್ಯಾರು: ಯಂಗ್ ಟೈಗರ್ಸ್ ಅಲೆಕ್ಕಿ ಫ್ರೆಂಡ್ಸ್ ಇದರ 9ನೇ ವರ್ಷದ ವಾರ್ಷಿಕೋತ್ಸವ

Suddi Udaya
error: Content is protected !!