32.3 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಯಕ್ಷಭಾರತಿಯಿಂದ ಯಕ್ಷಗಾನ “ಕರಂಡಕಾಸುರ ವಧೆ”

ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ವೇದಿಕೆ “ಕೃಷ್ಣಾನುಗ್ರಹ ಕಲ್ಯಾಣ ಮಂಟಪ”ದಲ್ಲಿ ಯಕ್ಷಭಾರತಿಯ 11ನೇ ವಾರ್ಷಿಕ ಸಮಾರಂಭದ ನಿಮಿತ್ತ ಖ್ಯಾತ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಪ್ರಸಂಗ “ಕರಂಡಕಾಸುರ ವಧೆ ” ಮಾ.7ರಂದು ಪ್ರದರ್ಶನಗೊಂಡಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಮಹೇಶ ಕನ್ಯಾಡಿ ಚೆಂಡೆ ಮದ್ದಳೆಯಲ್ಲಿ ಶಿತಿಕಂಠ ಭಟ್ ಉಜಿರೆ, ಶ್ರೇಯಸ್ ಪಾಳಂದೆ ಚಕ್ರತಾಳದಲ್ಲಿ ಕೌಸ್ತುಭ ಕನ್ಯಾಡಿ ಸಹಕರಿಸಿದರು.

ಮುಮ್ಮೇಳದಲ್ಲಿ ಕೃಷ್ಣನಾಗಿ ಪ್ರಶಾಂತ ಮುಂಡ್ಕೂರು, ಅರ್ಜುನನಾಗಿ ಹರಿಶ್ಚಂದ್ರ ಆಚಾರ್ಯ ಚಾರ್ಮಾಡಿ, ಜಗಳಗ್ರಂಥಿಯಾಗಿ ಶಶಿಕಿರಣ ಕಾವು, ಕಲುಷಗಾಮಿನಿಯಾಗಿ ಸುರೇಶ ಬಾಯಾರು, ಶುಕತುಂಡನಾಗಿ ಪ್ರಶಾಂತ್ ಪುತ್ತೂರು, ಹನುಮಂತನಾಗಿ ಚಂದ್ರಶೇಖರ ಧರ್ಮಸ್ಥಳ, ಕರಂಡಕಾಸುರನಾಗಿ ಶೀಶ ಮಣಿಲ ಪಾತ್ರ ನಿರ್ವಹಿಸಿದರು.

ಶ್ರೀಮಾತಾ ಆರ್ಟ್ಸ್ ನ ಗುರುಪ್ರಸಾದ್ ವೇಷ ಭೂಷಣದಲ್ಲಿ ಸಹಕರಿಸಿದರು. ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಸಮಿತಿಯ ವತಿಯಿಂದ ನೀಡುವ ಗೌರವವನ್ನು ಯಕ್ಷಭಾರತಿಯ ಸಂಚಾಲಕ ಮಹೇಶ ಕನ್ಯಾಡಿ ಸ್ವೀಕರಿಸಿದರು.

Related posts

ಪೆಟ್ರೋಲ್, ಡೀಸೆಲ್ ದರ ಮತ್ತೆ ಏರಿಕೆ

Suddi Udaya

ಎಲ್‌.ಸಿ.ಆರ್‌. ಇಂಡಿಯನ್ ಡಿಗ್ರಿ ಕಾಲೇಜಿನಲ್ಲಿ ಮಹಿಳಾ ದಿನಾಚರಣೆ

Suddi Udaya

ಬೆಳ್ತಂಗಡಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಶಿವಪ್ರಸಾದ್ ಕೊಕ್ಕಡ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ‘ತಾಲೂಕಿನ ಅತ್ಯುತ್ತಮ ಸಹಕಾರಿ ಸಂಘ ‘ಪ್ರಶಸ್ತಿ

Suddi Udaya

ಕೊಕ್ಕಡ: ಶ್ರೀನಿಧಿ ಜೀಪ್ ಮಾಲಕ ರಘುನಾಥ ನಾಯ್ಕ್ ನಿಧನ

Suddi Udaya

ಪಡಂಗಡಿ ಮಹಿಳಾ ಗ್ರಾಮಸಭೆ: ಮಹಿಳಾ ಸ್ವಚ್ಛತಾಗಾರರಿಗೆ ಗೌರವ ಸನ್ಮಾನ ಮತ್ತು ಸಮವಸ್ತ್ರ ವಿತರಣೆ

Suddi Udaya
error: Content is protected !!