August 2, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಾರಾವಿ ಸೂರ್ಯನಾರಾಯಣ ದೇವಸ್ಥಾನಕ್ಕೆ ದೇಣಿಗೆ ಹಸ್ತಾಂತರ

ನಾರಾವಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಗುರುವಾಯನಕೆರೆ ನಾರಾವಿ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಾರಾವಿ ಸೂರ್ಯನಾರಾಯಣ ದೇವಸ್ಥಾನದ ನೂತನ ಸಭಾಭವನಕ್ಕೆ ರೂ.2 ಲಕ್ಷ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಕ್ಷೇತ್ರದಿಂದ ಹೊರೆಕಾಣಿಕೆಯಾಗಿ ವಸ್ತು ರೂಪದಲ್ಲಿ 30 ಕ್ವಿಂಟಾಲ್ ಅಕ್ಕಿ ಮತ್ತು 1 ಲೋಡ್ ತರಕಾರಿ ಕ್ಷೇತ್ರದ ವತಿಯಿಂದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ರೂ.2 ಲಕ್ಷ ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿ ಅಶೋಕ್ ಬಿ ಸರ್ ಇವರು ನಾರಾವಿ ಸೂರ್ಯ ನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ರವೀಂದ್ರ ಪೂಜಾರಿಯವರಿಗೆ ಹಸ್ತಾಂತರಿಸಿದರು.

ಕ್ಷೇತ್ರದಿಂದ ರೂ.4ಲಕ್ಷ ಸಹಾಯಧನ ಸೂರ್ಯನಾರಾಯಣ ದೇವಸ್ಥಾನಕ್ಕೆ ಧರ್ಮಾಧಿಕಾರಿ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ನೀಡಿರುತ್ತಾರೆ.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನಯ್ ಹೆಗ್ಡೆ , ತಾಲೂಕು ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ಬಂಗೇರ, ನಾರಾವಿ ವಲಯದ ವಲಯಾಧ್ಯಕ್ಷ ಶೇಖರ್ ಹೆಗ್ಡೆ, ಕಾರ್ಕಳ ತಾಲೂಕು ಜನಜಾಗೃತಿ ಸದಸ್ಯ ನಾರಾಯಣ ಪೂಜಾರಿ, ದೇವಸ್ಥಾನದ ಆಡಳಿತ ಕಮಿಟಿಯ ಸದಸ್ಯರಾದ ಜಗದೀಶ್ ಹೆಗ್ಡೆ, ಮತ್ತು ಲಕ್ಷ್ಮಣ ಬಂಗೇರ , ನಾರಾವಿ ವಲಯದ ಮೇಲ್ವಿಚಾರಕಿ ವಿಶಾಲ ಕೆ, ಸದಸ್ಯರಾದ ವಸಂತ ಪೂಜಾರಿ, ಸೇವಪ್ರತಿನಿಧಿಗಳಾದ ರೇಷ್ಮಾ, ಹರಿಣಾಕ್ಷಿ, ಶಶಿಕಲಾ ದೇವಸ್ಥಾನ ಸಿಬ್ಬಂದಿ ಪ್ರಸಾದ್ ದೇವಸ್ಥಾನ ಅರ್ಚಕ ವೃಂದ ಉಪಸ್ಥಿತರಿದ್ದರು.

Related posts

ಹೊಸಂಗಡಿ: ಪುಚ್ರ‍್ಲೆಕ್ಕಿ ಮನೆಯ ಶೋಭಾ ನಿಧನ

Suddi Udaya

ವೇಣೂರು ಸರ್ಕಾರಿ ಪ್ರೌಢ ಶಾಲಾ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ

Suddi Udaya

ಪಣಕಜೆ:ಆಸರೆ ಜ್ಞಾನ ವಿಕಾಸ ಕೇಂದ್ರದ ಮಾಸಿಕ ಸಭೆ: ಆರೋಗ್ಯ ತಪಾಸಣೆ, ಪರಿಸರದಲ್ಲಿ ಸ್ವಚ್ಚತೆ ಕಾಪಾಡುವುದರ ಬಗ್ಗೆ ಮಾಹಿತಿ

Suddi Udaya

ಸುದ್ದಿ ಉದಯ ವಾರಪತ್ರಿಕೆಯು ನವರಾತ್ರಿ ಹಬ್ಬದ ಪ್ರಯುಕ್ತ ಆಯೋಜಿಸಿದ “ಹೇ ಶಾರದೆ” ಫೋಟೊ ಸ್ಪರ್ಧೆಯ ಫಲಿತಾಂಶ ಪ್ರಕಟ

Suddi Udaya

ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ದಯಾ ವಿಶೇಷ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ

Suddi Udaya

ಸೇವಾಭಾರತಿ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀಮತಿ ವಸಂತಿ ಗೌಡ ಇವರಿಂದ ದೇಣಿಗೆ

Suddi Udaya
error: Content is protected !!