36.1 C
ಪುತ್ತೂರು, ಬೆಳ್ತಂಗಡಿ
March 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ನೆಲ್ಯಾಡಿ ಸೆಂಟ್ ಅಲ್ಫೋನ್ಸ ಎಸ್‌ಎಂವೈಎಂ ವತಿಯಿಂದ ಪಂಚಾಯತ್‌ಗೆ ಡಸ್ಟ್‌ಬಿನ್ ವಿತರಣೆ

ನೆಲ್ಯಾಡಿ: ನೆಲ್ಯಾಡಿಯ ಸೆಂಟ್ ಅಲ್ಫೋನ್ಸ ಪುಣ್ಯಕ್ಷೇತ್ರದ ಸೀರೋ ಮಲಬಾರ್ ಯೂತ್ ಮೂವ್ಮೆಂಟ್ (ಎಸ್‌ಎಂವೈಎಂ) ಉತ್ಸಾಹಿ ಯುವಕರ ಬಳಗವು ನೆಲ್ಯಾಡಿ ಪೇಟೆ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಿ, ನಂತರ ನೆಲ್ಯಾಡಿ ಗ್ರಾಮ ಪಂಚಾಯತ್‌ಗೆ ಐದು ಡಸ್ಟ್‌ಬಿನ್‌ಗಳನ್ನು ಹಸ್ತಾಂತರಿಸಲಾಯಿತು.

ಪಂಚಾಯತ್ ಆಡಳಿತ ಅಧಿಕಾರಿ ಜಯರಾಜ್ ಹಾಗೂ ಕಾರ್ಯದರ್ಶಿ ಭಾರತಿ ಅವರ ಸಮ್ಮುಖದಲ್ಲಿ ಪಂಚಾಯತ್ ಸಿಬ್ಬಂದಿ ಡಸ್ಟ್‌ಬಿನ್‌ಗಳನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಡಸ್ಟ್‌ಬಿನ್‌ಗಳನ್ನು ಸ್ವೀಕರಿಸುವ ಮೂಲಕ ಗ್ರಾಮ ನೈರ್ಮಲ್ಯ ಕಾಪಾಡುವ ಜವಾಬ್ದಾರಿ ಪಂಚಾಯತ್‌ಗೆ ಇನ್ನಷ್ಟು ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.

ಸ್ವಚ್ಛತಾ ಕಾರ್ಯಕ್ಕೆ ಸಂಘ ಸಂಸ್ಥೆಗಳ ಸಹಕಾರ ಅತ್ಯಂತ ಅಗತ್ಯವಾಗಿದ್ದು, ಪಂಚಾಯತ್ ಮುಖಾಂತರ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ “ಸ್ವಚ್ಛ ಭಾರತ” ಪರಿಕಲ್ಪನೆಯನ್ನು ಜೀವಂತವಾಗಿಡಬೇಕು ಎಂದು ಸೆಂಟ್ ಅಲ್ಫೋನ್ಸ ಚರ್ಚ್ ಧರ್ಮಗುರು ವಂದನೀಯ ಫಾ. ಶಾಜಿ ಮಾತ್ಯು ಹೇಳಿದರು.

ಈ ಕಾರ್ಯಕ್ರಮಕ್ಕೆ ಯುವ ಮುಂದಾಳುಗಳಾದ ತೋಮಸ್, ಅಬಿನ್, ಡಿನು, ನವೀನ್, ದಿಶಾ, ಸನೂಷ, ಅರ್ಚನಾ, ಅಲೀನಾ ಥೋಮಸ್, ಶಾನ್, ಜೈಸನ್ ಮತ್ತು ಜೋಯಲ್ ಅವರು ಸಾರಥ್ಯ ವಹಿಸಿದರು.

ಕಾರ್ಯಕ್ರಮಕ್ಕೆ ಸಿರಿಯನ್ ಕ್ಯಾಥೋಲಿಕ್ ಸಹಕಾರಿ ಬ್ಯಾಂಕ್ ನೆಲ್ಯಾಡಿ, ಜಿನೋಯ್ (ರಿಯಾ ರಬ್ಬರ್ಸ್), ಸೀಗಲ್ ಟ್ರೇಡರ್ಸ್, ಈಪನ್ ವರ್ಗೀಸ್, ಓ.ಜಿ. ನೈನಾನ್, ಜೆನಿ (ರಾಜಸ್ಥಾನ್ ಮಾರ್ಬಲ್ಸ್), ಸೆಂಟ್ ಅಲ್ಫೋನ್ಸ ಕ್ರೆಡಿಟ್ ಯೂನಿಯನ್, ಜೇಮ್ಸ್ (ಜೀಸಸ್ ಟಯರ್ಸ್), ಸಿ.ಸಿ.ಎಂ.ಎಲ್ ಸೆಂಟ್ ಅಲ್ಫೋನ್ಸ ಚರ್ಚ್, ಜೋಸೆಫ್ ಎಂಬ್ರಾಂಡಿವಯಲಿಲ್, ಪೌಲ್ ಡಿಸೋಜ ಹಾಗೂ ಲೇಸರ್ ಕಾರ್ ವಾಶ್ ಇವರು ಆರ್ಥಿಕ ಸಹಾಯ ನೀಡಿ ಸಹಕರಿಸಿದರು. ಚರ್ಚ್ ನ ಪಾಲನ ಸಮಿತಿ ಯ ರಾಜೇಶ್, ಜೋನ್ಸನ್, ಜೋಯ್, ರೆಜಿ ಸುಜಾ ಜೇಮ್ಸ್, ಸಣ್ಣಿ, ಶಿಬು ಮೊದಲಾದವರು ಭಾಗವಹಿಸಿದರು.

Related posts

ಆಪರೇಷನ್ ಸಿಂದೂರ: ಪೆರಾಲ್ದರಕಟ್ಟೆ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ

Suddi Udaya

ಎಕ್ಸೆಲ್ ನಲ್ಲಿ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ರಾಜ್ಯೋತ್ಸವ ಆಚರಣೆ ಎಕ್ಸೆಲ್ ವಿದ್ಯಾಸಂಸ್ಥೆ ಸದಾ ಕನ್ನಡದ ಸೇವೆಗೆ ಸಿದ್ಧ: ಸುಮಂತ್ ಕುಮಾರ್ ಜೈನ್

Suddi Udaya

ಶುಚಿ-ರುಚಿಯಾದ ಊಟೋಪಚಾರಗಳಿಗೆ ಹೆಸರುವಾಸಿಯಾದ ಶ್ರೀದೇವಿ ಹೋಟೆಲ್ ಬೆಳ್ತಂಗಡಿಯಲ್ಲಿ ಶುಭಾರಂಭ

Suddi Udaya

ಸಿಯೋನ್ ಆಶ್ರಮದಲ್ಲಿ ಓಣಂ ಹಬ್ಬ ಆಚರಣೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ದೇವದಾಸ್ ಶೆಟ್ಟಿ, ಕಾರ್ಯದರ್ಶಿ ಕಿರಣ್‌ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಅಮಿತಾನಂದ ಹೆಗ್ಡೆ

Suddi Udaya

ಉಜಿರೆ ಎಸ್.ಕೆ.ಡಿ.ಆರ್.ಡಿ.ಪಿ ಕಾರ್ಯಕ್ಷೇತ್ರದ ಒಕ್ಕೂಟದಿಂದ ಸುಜ್ಞಾನ ನಿಧಿ ವಿದ್ಯಾರ್ಥಿವೇತನದ ಅನುದಾನ ಪತ್ರ ಹಸ್ತಾಂತರ

Suddi Udaya
error: Content is protected !!