September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ: ಶ್ರೀ ಸತ್ಯನಾರಾಯಣ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ (ರಿ), ಗುರುವಾಯನಕೆರೆ ಇದರ ವತಿಯಿಂದ ಏ.26ರಂದು ನಡೆಯಲಿರುವ ಶ್ರೀ ಸತ್ಯನಾರಾಯಣ ಪೂಜೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಮಾ.18ರಂದು
ನಡುಬೊಟ್ಟು ರೌದ್ರನಾಥೇಶ್ವರ ದೇವಸ್ಥಾನದಲ್ಲಿ ಭಕ್ತಿಭಾವ ಪೂರ್ಣವಾಗಿ ಬಿಡುಗಡೆಗೊಳಿಸಲಾಯಿತು.

ದೇವಸ್ಥಾನದ ಧರ್ಮದರ್ಶಿ ಡಾ. ರವಿ ಎನ್ ಅವರ ದಿವ್ಯ ಹಸ್ತದಿಂದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ವಿಶ್ವನಾಥ್ ಎನ್, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಗಣೇಶ್ ಮೂಲ್ಯ ಅನಿಲಡೆ, ತಾಲೂಕು ಮೂಲ್ಯರ ಯಾನೆ ಕುಂಬಾರರ ಸಂಘದ ಅಧ್ಯಕ್ಷರಾದ ಸೋಮಯ್ಯ ಮೂಲ್ಯ ಹನೈನಡೆ, ಶಾಂಭವಿ ಹನೈನಡೆ, ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ. ಎನ್, ಕೋಶಾಧಿಕಾರಿ ದಿನೇಶ್ ಮಾಲಾಡಿ, ಜೊತೆ ಕಾರ್ಯದರ್ಶಿ ಸಂದೇಶ್ ಕುಮಾರ್ ಸೇರಿದಂತೆ ತಾರನಾಥ ಹನೈನಡೆ, ದಿನೇಶ್ ಕೊಂಡೆಮಾರು, ಉಜ್ವಲ್, ಆನಂದ ಮೂಲ್ಯ, ಕೃಷ್ಣಪ್ಪ ಮೂಲ್ಯ ಬರ್ನ ಹಾಗೂ ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಸಂಘದ ವತಿಯಿಂದ ಆಯೋಜಿಸಲಾಗುತ್ತಿರುವ ಈ ಪೂಜೆ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘದ ಅಧ್ಯಕ್ಷರು ಮನವಿ ಮಾಡಿದ್ದಾರೆ.

Related posts

ಬೆಳಾಲು : ಕಾನನದಲ್ಲಿ ಸಿಕ್ಕ ಮಗುವಿನ ಪೋಷಕರ ಪತ್ತೆಗೆ ಮನವಿ

Suddi Udaya

ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ವಿಶೇಷ ಕಾಯ೯ಕಾರಿಣಿ ಸಭೆ

Suddi Udaya

ಕೊಕ್ಕಡ: ಕೆಸರ್ದ ಕಂಡೊಡು ಒಂಜಿ ದಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಪೌರಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲು: ಹದಿನೈದು ದಿನಗಳ ಗಡುವು

Suddi Udaya

ಉಜಿರೆ ಎಸ್ ಡಿ ಎಮ್ ಕಾಲೇಜಿನಲ್ಲಿ “ಇತಿಹಾಸ ನಿರ್ಮಿಸಿದ ಇತಿಹಾಸಕಾರ” ಡಾ. ಪಾದೂರು ಗುರುರಾಜ್ ಭಟ್ ರವರ ಶತಮಾನದ ಸಂಸ್ಮರಣೆ

Suddi Udaya

ಧರ್ಮಸ್ಥಳ ಗ್ರಾಮ ಪಂಚಾಯತ್ ನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

Suddi Udaya
error: Content is protected !!