September 17, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ವಿಶ್ವಕರ್ಮ ಜಯಂತಿ

ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಬ್ಬಗಳ ಹಾಗೂ ಮಹಾಪುರುಷರ ಜಯಂತಿ  ಆಚರಣಾ ಸಮಿತಿ ಆಶ್ರಯದಲ್ಲಿ ವಿಶ್ವಕರ್ಮ ಜಯಂತಿ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ ನಡೆಯಿತು.

ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರಕುಶಲತೆಗೆ ಸಲ್ಲಿಸುವ ಗೌರವ ವಿಶ್ವಕರ್ಮ ಜಯಂತಿ. ಅಭೂತಪೂ‌ರ್ವ ವಾಸ್ತು ಶಿಲ್ಪಾ,  ಶಿಲ್ಪಾಕಲೆ, ಸ್ಮಾರಕ, ದೇವಸ್ಥಾನಗಳು ಕೆತ್ತನೆ ಜಗತ್ತಿನ ಪ್ರವಾಸಿಗರನ್ನು ಬರಸೆಳೆದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ವಿಶ್ವಕರ್ಮರ ಕೊಡುಗೆ ಅಪಾರ.  ವಿಶ್ವಕರ್ಮ ಸಮಾಜದ ನೈಪುಣ್ಯತೆಯನ್ನು ಸಂಶೋಧನೆ ನಡೆಸುವ ಕಾರ್ಯವನ್ನು ಸರಕಾರ ಮಾಡಬೇಕು.

ಉಜಿರೆ ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿರಾಟ್ ಪದ್ಮನಾಭ ಪ್ರಧಾನ ಭಾಷಣ ಮಾಡಿ ಕೌಶಲ್ಯಜ್ಞಾನದ ಪರಿಕಲ್ಪನೆಯನ್ನು ಪೂರ್ವದಲ್ಲಿ ಸಮಾಜಕ್ಕೆ ವಿಶ್ವಕರ್ಮರು ನೀಡಿದ್ದಾರೆ. ದೇಶಿಯ ಜ್ಞಾನಧಾರಿತ ಕೌಶಲ್ಯ, ತಾಂತ್ರಿಕ ಅಧ್ಯಯನದ ಕೇಂದ್ರಗಳನ್ನು ಸ್ಥಾಪಿಸಿ ಯುವ ಪೀಳಿಗೆಗೆ ದಾರಿ ದೀಪವಾಗಲಿದೆ ಎಂದರು.

ಬೆಳ್ತಂಗಡಿ ವಿಶ್ವಕರ್ಮಭ್ಯುದಯ ಸಭಾ ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಾಯಕೋಡಿ ಮಾತನಾಡಿ ವಾಸ್ತುಶಿಲ್ಪಾ ಕಲೆಗಳು ಜೀವಂತವಾಗಿ ಉಳಿಯಲು ಪ್ರತೀ ತಾಲೂಕಿನಲ್ಲಿ ಅಧ್ಯಯನ ಕೇಂದ್ರ ಹಾಗೂ ಕಲೆಗಳ ಮಾರಟಾ ಕೇಂದ್ರ ನಿರ್ಮಾಣವಾಗಬೇಕು ಎಂದು ಒತ್ತಾಯಿಸಿದರು.

ತಹಶೀಲ್ದಾರ್ ಎಸ್. ಎನ್. ನರಗುಂದ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ರಾಜೇಶ್ ಕೆ. ಸಹಿತ ತಾಲೂಕು ಮಟ್ಟದ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಕಂದಾಯ ಇಲಾಖೆಯ ವಿಷಯ ನಿರ್ವಹಕಿ ಹೇಮಾ ಕಾರ್ಯಕ್ರಮ ನಿರ್ವಹಿಸಿದರು.

Related posts

ಬೆಳಾಲು ಶ್ರೀ ಧ.ಮಂ.ಪ್ರೌ. ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಲಗೋರಿ ಪಂದ್ಯಾಟ

Suddi Udaya

ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಸಾಮೂಹಿಕ ಯೋಗ ಶಿವ ನಮಸ್ಕಾರ

Suddi Udaya

ಬೆಳ್ತಂಗಡಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ

Suddi Udaya

ಬೆಳ್ತಂಗಡಿ ಮುಗೇರ ಹಿತಚಿಂತನ ವೇದಿಕೆಯ ವತಿಯಿಂದ ಧನಸಹಾಯ ಹಸ್ತಾಂತರ

Suddi Udaya

ಸೆ.13- 15:- ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ – ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಸಾಮೂಹಿಕ ಗೌರಿ ಪೂಜೆ ಮತ್ತು ಶ್ರೀ ಗಣೇಶೋತ್ಸವ

Suddi Udaya

ಅಕ್ರಮ ಮರಳು ದಾಸ್ತಾನು ಅಡ್ಡೆ ಪತ್ತೆಹಚ್ಚಿದ ವೇಣೂರು ಪೊಲೀಸರು

Suddi Udaya
error: Content is protected !!