26.5 C
ಪುತ್ತೂರು, ಬೆಳ್ತಂಗಡಿ
September 19, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿತಾಲೂಕು ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಶ್ರೀರಾಮ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ವಂಚನೆ ಪ್ರಕರಣ:ಸೊಸೈಟಿಯಲ್ಲಿ ಎರಡು ದಿನದ ಸಿಐಡಿ ಶೋಧ ಅಂತ್ಯ

ಬೆಳ್ತಂಗಡಿ : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ರಿ) ಯಲ್ಲಿ ಗ್ರಾಹಕರ ಠೇವಣಿ ಇಟ್ಟಿದ್ದ ಸುಮಾರು 30 ಕೋಟಿ ರೂಪಾಯಿ ಹಣವನ್ನು ವಂಚನೆ ಮಾಡಿದ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳು ಸೊಸೈಟಿಯಲ್ಲಿ ನಡೆಸಿದ ಎರಡು ದಿನದ ಶೋಧ ಕಾರ್ಯಾಚರಣೆ ಅಂತ್ಯ ಮಾಡಿ ದಾಖಲೆ ಪತ್ರಗಳನ್ನು ಮಹಜರು ಮಾಡಿ ವಶಪಡಿಸಿಕೊಂಡಿದ್ದಾರೆ.

ಬೆಳ್ತಂಗಡಿ ನಗರದ ರಾಮನಗರದ ವಿ.ಆರ್.ನಾಯಕ್ ಕಾಂಪೌಂಡ್ ನಲ್ಲಿರುವ ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ರಿ) ಗೆ ಬೆಂಗಳೂರಿನ ಸಿಐಡಿ ಅಧಿಕಾರಿಗಳ ತಂಡ ಮಾ.17 ರಂದು ಬೆಳಗ್ಗೆ 11 ಗಂಟೆಗೆ ಆಗಮಿಸಿ ರಾತ್ರಿ 7:45 ವರೆಗೆ ಶೋಧ ನಡೆಸಿ ಬಳಿಕ ಮಾ.18 ರಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶೋಧ ಕಾರ್ಯಾಚರಣೆ ನಡೆಸಿ ಸೊಸೈಟಿಯಲ್ಲಿ ಗ್ರಾಹಕರಿಗೆ ಮತ್ತು ಸೊಸೈಟಿಗೆ ಸಂಬಂಧಿಸಿದ ಪ್ರಮುಖ ದಾಖಲೆ ಪತ್ರಗಳು , ಕಂಪ್ಯೂಟರಿನ ಮೂರು ಹಾರ್ಡ್ ಡಿಸ್ಕ್, ಎಸ್‌.ಎಸ್.ಡಿ, ಒಂದು ಸಿಸಿಕ್ಯಾಮಾರದ ಡಿವಿಆರ್,ಸೊಸೈಟಿಯ ಭದ್ರತಾ ಠೇವಣಿ ಇರಿಸಿರುವ 27 ಲಕ್ಷದ ಚೆಕ್, 80 ಗ್ರಾಂ ಚಿನ್ನಾಭರಣಗಳು ಸೇರಿ ಹಲವು ವಸ್ತುಗಳನ್ನು ಸರಕಾರಿ ಪಂಚರುಗಳ ಸಮ್ಮುಖದಲ್ಲಿ ಮಹಜರು ಮಾಡಿ ವಶಪಡಿಸಿಕೊಂಡು ವಾಪಸ್ ತೆರಳಿದ್ದಾರೆ.

ಬೆಂಗಳೂರು ಡೆಪಾಸಿಟ್ ಫ್ರಾಂಡ್ ವಿಂಗ್ ಸಿಐಡಿ ಇನ್ಸ್‌ಪೆಕ್ಟರ್ ಹರೀಶ್, ಎಎಸ್ಐ ಶಂಕರ್, ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಿಬ್ಬಂದಿ ಕಿರಣ್, ಶಿವರಾಜ್, ಬೆಳ್ತಂಗಡಿ ಕಂದಾಯ ಇಲಾಖೆಯ ಎಸ್.ಡಿ.ಎ ಪ್ರಜ್ವಲ್, ಗ್ರಾಮ ಆಡಳಿತಾಧಿಕಾರಿ ಸತೀಶ್ , ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಇಲಾಖೆಯ ಸಿಡಿಒ ಎನ್.ಜೆ.ಗೋಪಾಲ್, ದೂರುದಾರ ದಯಾನಂದ್ ನಾಯಕ್, ಸಿಐಡಿ ವಾಹನ ಚಾಲಕ ಸುಂದರ್ ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

“ಉತ್ಕರ್ಷ” ಸಾಂಸ್ಕೃತಿಕ ಶೈಕ್ಷಣಿಕ ಸ್ಪರ್ಧೆ : ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಸಿ.ಬಿ.ಎಸ್.ಇ ಶಾಲೆಯ ವಿದ್ಯಾರ್ಥಿಗಳಿಗೆ ಓವರಲ್ ಚಾಂಪಿಯನ್ ಶಿಪ್

Suddi Udaya

ಉಜಿರೆ ಹಳೆಪೇಟೆ ಮಸೀದಿಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ

Suddi Udaya

ಜೀವಜಲಕ್ಕಾಗಿ ಕೆರೆಗಳ ಪುನಶ್ಚೇತನ : ಧರ್ಮಸ್ಥಳ ಯೋಜನೆಯಿಂದ ಒಂದೇ ವರ್ಷದಲ್ಲಿ ರಾಜ್ಯದ 160 ಕೆರೆಗಳಿಗೆ ಕಾಯಕಲ್ಪ

Suddi Udaya

ಸಚಿವ ಮಧು ಬಂಗಾರಪ್ಪರವರನ್ನು ಭೇಟಿ ಮಾಡಿದ ರಕ್ಷಿತ್ ಶಿವರಾಂ

Suddi Udaya

ಕುಣಿತ ಭಜನಾ ತರಬೇತುದಾರರಾದ ವಿ ಹರೀಶ್ ನೆರಿಯ ರವರಿಗೆ ಗೌರವದ ಸನ್ಮಾನ

Suddi Udaya

ಶಿರ್ತಾಡಿ: ಸಾಯಿ ಎಂಟರ್ಪ್ರೈಸಸ್ ನಲ್ಲಿ 4 ನೇ ಹಂತದ ಲಕ್ಕಿ ಸ್ಕೀಮ್: 15 ಸದಸ್ಯರನ್ನು ಸೇರಿಸಿದ ಸದಸ್ಯರಿಗೆ ಸ್ಕೀಮ್ ಕಾರ್ಡ್ ಉಚಿತ

Suddi Udaya
error: Content is protected !!