September 6, 2026
ಅಭಿನಂದನೆಬೆಳ್ತಂಗಡಿವರದಿ

ಎಕ್ಸೆಲ್ ಪಿಯು ಕಾಲೇಜಿನ ವಿದ್ಯಾರ್ಥಿಗಳ ಅದ್ಭುತ ಸಾಧನೆ: ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ – 2ನೇ ಹಂತದ ಫಲಿತಾಂಶ ಅಮೋಘ ದಾಖಲೆ: ವಿದ್ಯಾರ್ಥಿಗಳ ಪರಿಶ್ರಮ,ಶಿಕ್ಷಕರ ಮಾರ್ಗದರ್ಶನ,ಪೋಷಕರ ಬೆಂಬಲದಿಂದ ಈ ಸಾಧನೆ: ಸುಮಂತ್ ಕುಮಾರ್ ಜೈನ್

ಗುರುವಾಯನಕೆರೆ: ಗುಣಮಟ್ಟದ ಶಿಕ್ಷಣಕ್ಕೆ ಖ್ಯಾತಿ ಪಡೆದ ಶಿಕ್ಷಣ ಸಂಸ್ಥೆಯಾದ ಎಕ್ಸೆಲ್ ಪಿಯು ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಮತ್ತೊಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮತ್ತೆ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.

ಸೈನ್ಸ್ ಒಲಿಂಪಿಯಾಡ್ ಫೌಂಡೇಶನ್ (SOF) ನಡೆಸಿದ 2ನೇ ಹಂತದ ಪರೀಕ್ಷೆಯ ಫಲಿತಾಂಶದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. ನ್ಯಾಷನಲ್ ಸೈನ್ಸ್ ಒಲಿಂಪಿಯಾಡ್ (NSO): ಈ ವಿಭಾಗದಲ್ಲಿ ಶ್ರೀವತ್ಸ್ ಆರ್ ಜೋಶಿ – ಝೋನಲ್ ರಾಂಕ್ 4, ಅಂತರಾಷ್ಟ್ರೀಯ ರಾಂಕ್ 166,ಸಿ.ಎ. ವೇದಾಂತ್ – ಝೋನಲ್ ರಾಂಕ್ 5, ಅಂತರಾಷ್ಟ್ರೀಯ ರಾಂಕ್ 173ಎಂಬ ಶ್ರೇಷ್ಠ ಸಾಧನೆ ಮಾಡಿ ಕಾಲೇಜಿನ ಗೌರವವನ್ನು ಹೆಚ್ಚಿಸಿದ್ದಾರೆ.ಇಂಟರ್ನ್ಯಾಷನಲ್ ಮ್ಯಾಥಮ್ಯಾಟಿಕ್ಸ್ ಒಲಿಂಪಿಯಾಡ್ (IMO):ವಿಜಯಲಕ್ಷ್ಮಿ ಎಸ್ ಮಡವಾಳ – ಝೋನಲ್ ರಾಂಕ್ 7, ಅಂತರಾಷ್ಟ್ರೀಯ ರಾಂಕ್ 463,ವರ್ಷಿಣಿ ಟಿ – ಝೋನಲ್ ರ್ರಾಂಕ್ 11, ಅಂತರಾಷ್ಟ್ರೀಯ ರ್ಯಾಂಕ್ 534,ತಮ್ಮ ಸಾಧನೆಯ ಮೂಲಕ ಗಣಿತ ಕ್ಷೇತ್ರದಲ್ಲಿಯೂ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಈ ವಿದ್ಯಾರ್ಥಿಗಳು.

ಇಂಟರ್ನ್ಯಾಷನಲ್ ಇಂಗ್ಲಿಷ್ ಒಲಿಂಪಿಯಾಡ್ (IEO):ವೇದಿಕಾ ಹೆಚ್ – ಝೋನಲ್ ರಾಂಕ್ 33, ಅಂತರಾಷ್ಟ್ರೀಯ ರಾಂಕ್ 920,ತನಿಶ್ಕಾ ಆರ್ – ಝೋನಲ್ ರಾಂಕ್ 33, ಅಂತರಾಷ್ಟ್ರೀಯ ರಾಂಕ್ 994 ಫಲಿತಾಂಶ ಗಳಿಸಿದ್ದಾರೆ.ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಮತ್ತು ಪೋಷಕರ ಬೆಂಬಲ ಈ ಸಾಧನೆಗೆ ಮುಖ್ಯ ಕಾರಣವೆಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು ತಿಳಿಸಿದ್ದಾರೆ. ವಿದ್ಯಾರ್ಥಿಗಳ ನಿರಂತರ ಅಭ್ಯಾಸ, ಸ್ಪರ್ಧಾತ್ಮಕ ಮನೋಭಾವ ಮತ್ತು ಗುಣಮಟ್ಟದ ಬೋಧನೆ ಈ ಯಶಸ್ಸಿಗೆ ಕಾರಣವಾಗಿವೆ.ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ವಿಜೇತರನ್ನು ಅಭಿನಂದಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ನೀಡಿದ್ದಾರೆ.

ಇದರ ಜೊತೆಗೆ, 2026-27ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ವಿಜ್ಞಾನ (PCMB, PCMC) ಹಾಗೂ ವಾಣಿಜ್ಯ (EBAC, EBAS) ವಿಭಾಗಗಳಲ್ಲಿ ಪ್ರವೇಶಕ್ಕೆ ಅವಕಾಶವಿದೆ ಎಂದು ಕಾಲೇಜು ಪ್ರಕಟಿಸಿದೆ. NEET, JEE, CET, NATA, NDA ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡಲಾಗುತ್ತದೆ.ಒಟ್ಟಿನಲ್ಲಿ, ಎಕ್ಸೆಲ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಸಾಧಿಸಿದ ಈ ಸಾಧನೆ ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ಮೈಲಿಗಲ್ಲಾಗಿದ್ದು, ಎಲ್ಲಾ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದೆ

Related posts

ಉಜಿರೆ : ಶ್ರೀ ಧ. ಮಂ. ಆಂ.ಮಾ. (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ‘ಆಟಿಡೊಂಜಿ ದಿನ’ ಕಾರ್ಯಕ್ರಮ

Suddi Udaya

ವಾಲಿಬಾಲ್ ಕ್ರೀಡಾಕೂಟ: ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

Suddi Udaya

ಮುಂಡಾಜೆ ಸಿ ಎ ಬ್ಯಾಂಕ್ ನಿಂದ ಎನ್ ಎಸ್ ಗೋಖಲೆ ಸ್ಮರಣಾರ್ಥ ವಿದ್ಯಾನಿಧಿ ವಿತರಣೆ

Suddi Udaya

ಜೆಸಿಐ ವಲಯ-15ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನದಲ್ಲಿ ಜೆಸಿ ಜಯೇಶ್ ಬರೆಟ್ಟೊ ರವರಿಗೆ ಪ್ರತಿಷ್ಠಿತ “ಸಾಧನಾಶ್ರೀ ಪುರಸ್ಕಾರ”

Suddi Udaya

ನಾಳೆ(ಜೂ.11): ವಿದ್ಯುತ್ ನಿಲುಗಡೆ

Suddi Udaya

ಮಿತ್ತಬಾಗಿಲು ಕೂಡಬೆಟ್ಟು ಶ್ರೀ ಸದಾಶಿವ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಉತ್ಸವ: ವಿಶೇಷ ಪೂಜೆ

Suddi Udaya
error: Content is protected !!