September 6, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ತಾಲೂಕಿನ ಪರಿಶಿಷ್ಟ ಜಾತಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ: ಹರೀಶ್ ಪೂಂಜ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿ ಸಮುದಾಯದ ರಸ್ತೆ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಅನುದಾನವನ್ನು ಬಿಡುಗಡೆಗೊಳಿಸಿರುವುದಾಗಿ ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.

ಈ ಅನುದಾನದಡಿ ಕುಕ್ಕಳ ಗ್ರಾಮದ ಹಟ್ಟತ್ತೋಡಿಯಿಂದ ಕೆಂಪರಿಗೆಯವರೆಗೆ ರಸ್ತೆ– ರೂ.25.00 ಲಕ್ಷ, ಮಾಲಾಡಿ ಗ್ರಾಮದ ಪುರಿಯದಿಂದ ಕುರಿಯೋಡಿ ವರೆಗೆ ರಸ್ತೆ– ರೂ.25.00 ಲಕ್ಷ, ವೇಣೂರು ಗ್ರಾಮದ ಮೂಡ್ಲಾ ಕ್ರಾಸ್‌ನಿಂದ ನತ್ಯಟ್ಟವರೆಗೆ ರಸ್ತೆ – ರೂ.25.00 ಲಕ್ಷ, ನಾರಾವಿ ಗ್ರಾಮದ ದುಗಲಾಯಿ ಗುಡ್ಡೆ ರಸ್ತೆ – ರೂ.25.00 ಲಕ್ಷ, ಕಳೆಂಜ ಗ್ರಾಮದ ಬಂಡೇರಿಯಿಂದ ಬೇಂಗದಗಂಡಿವರೆಗೆ ರಸ್ತೆ – ರೂ.25.00 ಲಕ್ಷ, ನ್ಯಾಯತರ್ಪು ಗ್ರಾಮದ ಗೋವಿಂದೂರು ರಿಂದ ಕಣಿಯೂರು ಗ್ರಾಮದ ಕಾಪಿನಡ್ಕ -ಪೆರ್ದಡ್ಕ ರಸ್ತೆ – ರೂ.50.00 ಲಕ್ಷ, ಪಟ್ರಮೆ ಗ್ರಾಮದ ಮಣಿಯೇರು ರಸ್ತೆ – ರೂ.15.00 ಲಕ್ಷ, ಪಟ್ರಮೆ ಗ್ರಾಮದ ಓಟಕಜೆ ರಸ್ತೆ – ರೂ.10.00 ಲಕ್ಷ. ಅನುದಾನ ಬಿಡುಗಡೆಗೊಂಡಿದೆ.

ಈ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ ಸಮುದಾಯದ ಜನರಿಗೆ ಉತ್ತಮ ರಸ್ತೆ ಸೌಲಭ್ಯ ಲಭ್ಯವಾಗಲಿದ್ದು, ದೈನಂದಿನ ಸಂಚಾರ ಮತ್ತು ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅನುದಾನ ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರಕ್ಕೆ ಶಾಸಕ ಹರೀಶ್ ಪೂಂಜ ಅವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

Related posts

ಉಜಿರೆಯಲ್ಲಿ ರಕ್ತದಾನ ಶಿಬಿರ; 167 ಯೂನಿಟ್ ರಕ್ತ ಸಂಗ್ರಹ

Suddi Udaya

ವಾಣಿ ಆಂ.ಮಾ. ಶಾಲೆಯ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ರಾಜೇಶ್ ಶೆಟ್ಟಿ, ಉಪಾಧ್ಯಕ್ಷರಾಗಿ ರಾಧಿಕ ಕೆ. ಕಾಮತ್ ಆಯ್ಕೆ

Suddi Udaya

ಬೆಳಾಲು ಗ್ರಾ.ಪಂ. ವತಿಯಿಂದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮನೆ ಮನೆ ಜಾಥಾ ಅಭಿಯಾನ ಮತ್ತು ಸ್ವಚ್ಚತಾ ಕಾರ್ಯಕ್ರಮ

Suddi Udaya

ಓಡಿಲ್ನಾಳ ಸ ಉ. ಪ್ರಾ ಶಾಲೆಯ ಎಸ್‌ ಡಿ ಎಂ ಸಿ ರಚನೆ, ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಪುನರಾಯ್ಕೆ

Suddi Udaya

ಕಳೆಂಜ : ಶೌರ್ಯ ಸ್ವಯಂಸೇವಕ ಶೀನಪ್ಪ ನಾಯ್ಕ್ ರಿಗೆ ಸನ್ಮಾನ

Suddi Udaya

ಜು. 12: ಉಜಿರೆಯಲ್ಲಿ ಮೆಗಾ ‘ರೈನಾಥಾನ್–2026’

Suddi Udaya
error: Content is protected !!