September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಿಕ್ಷಣ ಸಂಸ್ಥೆ

ಎಸ್‌ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೌಶಲ್ಯ ತರಬೇತಿ ಕಾರ್ಯಾಗಾರ

ಉಜಿರೆ: ಉಜಿರೆಯ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿಗಾಗಿ ನಾಲ್ಕು ದಿನಗಳ “ಕೌಶಲ್ಯ ತರಬೇತಿ” (Soft skills) ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವು ಮಾರ್ಚ್ 23ರಿಂದ 26ರವರೆಗೆ ನಡೆಯಿತು.

ಕಾಲೇಜಿನ ಪ್ಲೇಸ್‌ಮೆಂಟ್ ಸೆಲ್ ವತಿಯಿಂದ ಆಯೋಜಿಸಲಾದ ಈ ಕಾರ್ಯಾಗಾರದಲ್ಲಿ ಬೆಂಗಳೂರಿನ ಡಿಲೈಟ್ ಸಂಸ್ಥೆಯ ಕಸ್ಟಮರ್ ಸಕ್ಸಸ್ ಲೀಡ್ ಅಧಿಕಾರಿ‌ ಕು. ಧನ್ಯಾ ಬಂಗೇರ ಅವರು ತರಬೇತಿ ನೀಡಿದರು.

ಈ ಕಾರ್ಯಾಗಾರದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್, ಸಿವಿಲ್ ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ಹಾಗೂ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗಗಳ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಭಾಗವಹಿಸಿದರು.

ಕಾರ್ಯಾಗಾರದಲ್ಲಿ ನಾಯಕತ್ವ ಗುಣಗಳು, ತಂಡದಲ್ಲಿ ಕೆಲಸ ಮಾಡುವ ವಿಧಾನ, ಸಂದರ್ಶನವನ್ನು ಹೇಗೆ ಎದುರಿಸಬೇಕು, ಸಂವಹನ ಕೌಶಲ್ಯಗಳು, ಗುಂಪು ಚರ್ಚೆಯಲ್ಲಿ ಹೇಗೆ ಮಾತನಾಡಬೇಕು ಎಂಬಂತಹ ವಿಷಯಗಳ ಕುರಿತು ಪ್ರಾಯೋಗಿಕ ಹಾಗೂ ಸಂವಹನಾತ್ಮಕ ತರಬೇತಿಯನ್ನು ನೀಡಲಾಯಿತು.

ವಿದ್ಯಾರ್ಥಿಗಳು ತಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಭವಿಷ್ಯದ ಉದ್ಯೋಗಾವಕಾಶಗಳಿಗೆ ಸಜ್ಜಾಗುವಂತೆ ನೆರವಾಗಲು ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

Related posts

ಕಾಡಾನೆಗಳ ಓಡಾಟ: ಮಲವಂತಿಗೆ ಗ್ರಾಮ ಪಂಚಾಯತ್ ನಿಂದ ಎಚ್ಚರಿಕೆ

Suddi Udaya

ಮಚ್ಚಿನ : ಸರ್ಕಾರಿ ಪ್ರೌಢಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಸೆ.11: ಬೆಳ್ತಂಗಡಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Suddi Udaya

ಒಲಂಪಿಯಾಡ್ ಪರೀಕ್ಷೆ ಪ್ರಥಮ ರ‍್ಯಾಂಕ್ ಬಂದ ವಿದ್ಯಾರ್ಥಿಗೆ ಸ್ಕಾಲರ್ಶಿಪ್

Suddi Udaya

ಬೆಳ್ತಂಗಡಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ, ವಾಣಿ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಮತ್ತು ವಾಣಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಶಾಸಕ ಹರೀಶ್ ಪೂಂಜರಿಗೆ ಅಭಿನಂದನೆ

Suddi Udaya

ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ: ವಾಣಿ ಆಂ.ಮಾ. ಪ್ರೌಢಶಾಲೆಯ ವಿದ್ಯಾರ್ಥಿ ಕು|ಧೃತಿ ಸಿ. ಗೌಡರಿಗೆ ಪ್ರಶಸ್ತಿ

Suddi Udaya
error: Content is protected !!