September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಮಾ.27ರಿಂದ ಎ.1: ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದ ಜಾತ್ರೋತ್ಸವ

ನಡ: ಮಣ್ಣಿನ ಹರಕೆಯ ಪ್ರಖ್ಯಾತ ಕ್ಷೇತ್ರ ಶ್ರೀ ಸದಾಶಿವರುದ್ರ ದೇವಸ್ಥಾನ ಸುರ್ಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ವರ್ಷಾವಧಿ ಜಾತ್ರಾ ಮಹೋತ್ಸವವು ಮಾ.27ರಿಂದ ಎ.1ರವರೆಗೆ ಜರುಗಲಿದೆ ಎಂದು ಕ್ಷೇತ್ರ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ. ಸತೀಶ್ಚಂದ್ರ ಸುರ್ಯಗುತ್ತು ತಿಳಿಸಿದ್ದಾರೆ.

ಮಾ.27ರಂದು ಸುರ್ಯ ಶ್ರೀ ಸದಾಶಿವರುದ್ದ ದೇವರ ಸನ್ನಿಧಿಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಲಿದೆ. ಮಾ.28ರಂದು ಗಣಪತಿ ಹೋಮ, ಕಲಶಪೂಜೆ, ಕಲಶಾಭಿಷೇಕ ಮಹಾಪೂಜೆ, ರಾತ್ರಿ ರಂಗಪೂಜೆ ನಡೆಯಲಿದೆ. ಮಾ29ರಂದು ಸಂಜೆ ಸುರ್ಯಗುತ್ತು ಮನೆಯಿಂದ ದೈವಗಳ ಭಂಡಾರ ತರುವುದು, ಉತ್ಸವ ಹಾಗೂ ವಸಂತಕಟ್ಟೆ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು ನಟಿಸುವ ಹಾಸ್ಯಮಯ ನಾಟಕ ಪುದರ್ ದೀತಿಜಿ ಪ್ರದರ್ಶನಗೊಳ್ಳಲಿದೆ. ಮಾ.೩೦ರಂದು ಬೆಳಿಗ್ಗೆ ಸೊಡರ ಬಲಿ ಉತ್ಸವ, ರಾತ್ರಿ ಕೆರೆಕಟ್ಟೆ ಪೂಜೆ ನಡೆಯಲಿದೆ. ರಾತ್ರಿ ಅಭಿನಯ ಕಲಾವಿದರು ಉಡುಪಿ ಇವರಿಂದ ಶಾಂಭವಿ ಹಾಸ್ಯಮಯ ನಾಟಕ ಜರುಗಲಿದೆ.

ಮಾ.31ರಂದು ಬೆಳಿಗ್ಗೆ ದರ್ಶನ ಬಲಿ ಉತ್ಸವ, ಸಂಜೆ ಪುಷ್ಪರಥೋತ್ಸವ, ನೃತ್ಯಬಲಿ, ರಥಕಟ್ಟೆ ಪೂಜೆ, ಮಹಾಪೂಜೆ ಭೂತಬಲಿ ಶಯನೋತ್ಸವ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಸಂಗಮ ಕಲಾವಿದರು ಉಜಿರೆ ಇವರಿಂದ ಮಾಸ್ಟ್ರು ಮನಿಪುಜೆರ್ ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ. ಎ.1ರಂದು ಕವಾಟೋದ್ಧಾಟನೆ, ಕಲಶಾಭಿಷೇಕ, ಮಹಾಪೂಜೆ ಸಂಜೆ ಯಾತ್ರಾಹೋಮ, ಅವಭೃತ ಸ್ನಾನ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದ್ದಾರೆ.

Related posts

ಹೊಸಂಗಡಿ ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ತರಗತಿ ಉದ್ಘಾಟನೆ

Suddi Udaya

ಬಾರ್ಯ : ಸುಂದರ ನೂರಿತ್ತಾಯ ಹೃದಯಾಘಾತದಿಂದ ನಿಧನ

Suddi Udaya

ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ಮಚ್ಚಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಗೆ ಶುಚಿ ವಿತರಣೆ

Suddi Udaya

ಉಜಿರೆ: ಶ್ರೀ ಧ. ಮಂ. ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

Suddi Udaya

ಗಾಳಿ ಮಳೆಗೆ ಮನೆ ಹಾನಿ: ಚಾರ್ಮಾಡಿ ಮುಡಿಪು ಅರ್ಕನ ಮಸೀದಿಯ ಧರ್ಮಗುರುಸಮೀರ್ ಮುಸ್ಲಿಯರ್,ದಿನೇಶ್ ವಲಸಾರಿ ರವರಿಗೆ ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ನಿಂದ ಆರ್ಥಿಕ ನೆರವು

Suddi Udaya

ತಲೆಮರೆಸಿಕೊಂಡಿರುವ ವಿಠಲ್ ಗೌಡರ ಬಂಧನಕ್ಕಾಗಿ ಪೊಲೀಸರಿಂದ ಹುಡುಕಾಟ

Suddi Udaya
error: Content is protected !!