September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಸಂಘ-ಸಂಸ್ಥೆಗಳು

ಶ್ರೀ ಕ್ಷೇ.ಧ.ಗ್ರಾ. ಯೋಜನೆಯಿಂದ ಕಾಯರ್ತಡ್ಕದ ಅಂಬಿಕಾ ರವರಿಗೆ ವಾತ್ಸಲ್ಯ ಮನೆ ಹಸ್ತಾಂತರ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿ)ಬೆಳ್ತಂಗಡಿ ತಾಲೂಕು ವತಿಯಿಂದ ಡಾ|| ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ, ಹೇಮಾವತಿ ವೀ ಹೆಗ್ಗಡೆಯವರ ಪ್ರೀತಿಯ ಕನಸಿನ ಕಾರ್ಯಕ್ರಮವಾದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಧರ್ಮಸ್ಥಳ ವಲಯದ ಕಳೆಂಜ ಎ ಕಾರ್ಯಕ್ಷೇತ್ರದ ಕಾಯರ್ತಡ್ಕ ಮಾಣಿಗೇರಿಯಲ್ಲಿ ಈಗಾಗಲೇ ಪ್ರತಿ ತಿಂಗಳು ಮಾಶಾಸನವನ್ನು ಪಡೆಯುತ್ತಿರುವ ವಾತ್ಸಲ್ಯ ಸದಸ್ಯೆ ಅಂಬಿಕಾರವರ ವಾತ್ಸಲ್ಯ ಮನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಯಶೋಧರ ಕೆ ಹಸ್ತಾಂತರಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆಯ ಮೂಲಕ ಮಾಶಾಸನ ನೀಡುತ್ತಿರುವ ಸದಸ್ಯರಿಗೆ ಕರೋನ ಸಂದರ್ಭದಲ್ಲಿ ಕಾರ್ಯಕರ್ತರ ಮೂಲಕ ಮಾಶಾಸನವನ್ನು ಮನೆಗೆ ತಲುಪಿಸಿದ ಸಂದರ್ಭ ಕಾರ್ಯಕರ್ತರು ತೆಗೆದ ಪೋಟೋದಲ್ಲಿ ಮನೆಯ ಪರಿಸ್ಥಿತಿಯನ್ನು ಗಮನಿಸಿದ ಮಾತೃಶ್ರೀ ಅಮ್ಮನವರು ಯಾವುದೇ ಒಬ್ಬ ವ್ಯಕ್ತಿಗೆ ಆಹಾರ ಹೇಗೆ ಮುಖ್ಯವೋ ಅದೇ ರೀತಿ ವಾಸಕ್ಕೊಂದು ಸೂರು ಕೂಡ ಮುಖ್ಯವಾಗಿರುತ್ತದೆ ಎಂಬ ಅವರ ಸಂಕಲ್ಪದಂತೆ ವಾತ್ಸಲ್ಯ ಮನೆ ನಿರ್ಮಿಸಿ ಕೊಡುವ ಯೋಜನೆಯನ್ನು ರೂಪಿಸಿ ವಾತ್ಸಲ್ಯ ಮನೆ ನಿರ್ಮಿಸಿ ಅವರ ಬದುಕಿಗೆ ಬೆಳಕನ್ನು ನೀಡಿದ್ದು ವಾಸಕ್ಕೆ ಯೋಗ್ಯವಾದ ಸೂರಿಲ್ಲದ ಅಂಬಿಕಾ ರವರ ಮನೆಯನ್ನು ಗುರುತಿಸಿ, ಇಂದು ಸುಂದರವಾದ ಮನೆಯನ್ನು ಯೋಜನೆಯ ವತಿಯಿಂದ ನಿರ್ಮಿಸಿಕೊಡಲಾಗಿದೆ. ಮನೆಯನ್ನು ಸಂತೋಷದಿoದ ಹಸ್ತಾಂತರಿಸಿ ಈ ಮನೆಯಲ್ಲಿ ಅಂಬಿಕಾರವರು ಉತ್ತಮ ರೀತಿಯಲ್ಲಿ ಬಾಳಿ ಬದುಕುವಂತೆ ಶುಭ ಹಾರೈಸಿದರು.

ಜನಜಾಗೃತಿ ವಲಯಾಧ್ಯಕ್ಷರಾದ ರಾಜೇಶ್ ಎಂ.ಕೆ. ಯವರು ಹೇಮಾವತಿ ವೀ. ಹೆಗ್ಗಡೆಯವರು ವಾತ್ಸಲ್ಯ ಕಾರ್ಯಕ್ರಮದ ಮೂಲಕ ನಿರ್ಗತಿಕರ ಪಾಲಿಗೆ ನೆರವಾಗುತ್ತಿದ್ದು ಈ ಕಾರ್ಯಕ್ರಮ ನಮ್ಮ ಗ್ರಾಮದ ಸದಸ್ಯರಿಗೆ ದೊರೆತಿರುವುದಕ್ಕಾಗಿ ಸಂತಸ ವ್ಯಕ್ತಪಡಿಸಿದರು. ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮದ ಮೂಲಕ ಅದೆಷ್ಟೋ ನಿರ್ಗತಿಕರು ಬದುಕಿಗೆ ನೆಲೆಯನ್ನು ಕಂಡುಕೊಂಡಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಂಜುನಾಥ್ ಎಚ್, ಪಂಚಾಯತ್ ಸದಸ್ಯ ಹರೀಶ್ ಗೌಡ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಮೋದ ನಾಯರ್, ಬಜರಂಗದಳ ಜಿಲ್ಲಾ ಸಂಚಾಲಕ ಗಣೇಶ್ ಮೀಯರು, ಬಜರಂಗದಳ ತಾಲೂಕು ಸಂಚಾಲಕ ಅಶೋಕ್, ಒಕ್ಕೂಟದ ಅಧ್ಯಕ್ಷ ಧರ್ಣಪ್ಪ ಕುಂಬಾರ, ವಿಪತ್ತು ನಿರ್ವಹಣಾ ತಂಡದ ಸದಸ್ಯರು ಸೇವಾ ಪ್ರತಿನಿಧಿಗಳಾದ ಜನಾರ್ಧನ್. ಹರಿಣಾಕ್ಷಿ, ಚೈತ್ರ, ಗೀತಾ, ಸ್ಥಳೀಯ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು

ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ರವೀಂದ್ರ ಬಿ ಸ್ವಾಗತಿಸಿ, ಜ್ಞಾನವಿಕಾಸ ಕಾರ್ಯಕ್ರಮದ ಸಮನ್ವಯಾಧಿಕಾರಿ ಮಧುರಾ ವಸಂತ್ ವಂದಿಸಿದರು.

Related posts

ಕಬಡ್ಡಿ ಪಂದ್ಯಾಟ: ಉರುವಾಲು ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ: ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿನಿ ನಿತ್ಯಶ್ರೀ. ವಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಲಾಯಿಲ ಶ್ರೀ ಕ್ಷೇತ್ರ ಪಿಲಿಪಂಜರದಲ್ಲಿ ಸಾನಿಧ್ಯ ದೈವಗಳ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವ

Suddi Udaya

ಮೈರೋಳ್ತಡ್ಕ ಸ.ಉ. ಶಾಲೆಗೆ ಅಂಡೆಕೇರಿ ಬದ್ರಿಯಾ ಜುಮಾ ಮಸೀದಿ ವತಿಯಿಂದ ಶುದ್ಧ ನೀರಿನ ಘಟಕ ಕೊಡುಗೆ

Suddi Udaya

ಗೇರುಕಟ್ಟೆ ಶ್ರೀ ಕೃಷ್ಣ ಭಜನಾ ಮಂದಿರಕ್ಕೆ ಪರಿಷತ್ ರಾಜ್ಯಾಧ್ಯಕ್ಷರು ಮತ್ತು ತಾಲೂಕು ಪದಾಧಿಕಾರಿಗಳು ಭೇಟಿ

Suddi Udaya

ತೆಕ್ಕಾರು ಪ್ರಾ.ಕೃ.ಪ. ಸಹಕಾರಿ ಸಂಘಕ್ಕೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸಾಧನಾ ಪ್ರಶಸ್ತಿ

Suddi Udaya
error: Content is protected !!