September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಾ.27: ಮುಳಿಯದಲ್ಲಿ ಡೈಮಂಡ್ ಫೆಸ್ಟ್-50,000ಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿಗೆ ಗ್ಯಾರಂಟಿ ಗಿಫ್ಟ್

ಪುತ್ತೂರು: ಪ್ರಸಿದ್ಧ ಆಭರಣ ಸಂಸ್ಥೆಯಾದ ಮುಳಿಯ ಗೋಲ್ಡ್ & ಡೈಮಂಡ್ಸ್ ತನ್ನ ಗ್ರಾಹಕರಿಗಾಗಿ “ಡೈಮಂಡ್ ಫೆಸ್ಟ್” ವಿಶೇಷ ಉತ್ಸವವನ್ನು ಮಾರ್ಚ್ 27ರಿಂದ ಆರಂಭಿಸುತ್ತಿದೆ. ‘ವೈಡೆಸ್ಟ್ ರೇಂಜ್, ಎಂಡ್‌ಲೆಸ್ ವಾವ್ಸ್!’ ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಈ ಉತ್ಸವವು ವಜ್ರಾಭರಣ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.

ಫೆಸ್ಟ್‌ನ ಅಂಗವಾಗಿ ಗ್ರಾಹಕರು ರೂ.50,000 ಹೆಚ್ಚಿನ ಖರೀದಿಗೆ ಖಚಿತ ಉಡುಗೊರೆಯನ್ನು ಪಡೆಯಬಹುದಾಗಿದೆ. ಜೊತೆಗೆ, ಲಕ್ಕಿ ಡ್ರಾ ಮೂಲಕ ಬಂಪರ್ ಬಹುಮಾನವಾಗಿ ಎಲೆಕ್ಟಿçಕ್ ಸ್ಕೂಟರ್ ಗೆಲ್ಲುವ ಅವಕಾಶವೂ ಇದೆ.ಈ ಉತ್ಸವದ ಸಂದರ್ಭದಲ್ಲಿ ಹೆಚ್ಚಿನ ವೆರೈಟಿಯ ವಜ್ರಾಭರಣಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ.

ವಜ್ರದ ಆಭರಣಗಳ ಮೇಲೆ ಶೇ.೯೫ ಎಕ್ಸ್ಚೇಂಜ್ ಮತ್ತು ಶೇ.೯೦ ಬೈಬ್ಯಾಕ್ ಸೌಲಭ್ಯವನ್ನು ಸಂಸ್ಥೆ ನೀಡುತ್ತಿದ್ದು, ಹಳೆಯ ಆಭರಣಗಳನ್ನು ಹೊಸದಾಗಿ ಪರಿವರ್ತಿಸಿಕೊಳ್ಳಲು ಇದು ಒಳ್ಳೆಯ ಅವಕಾಶ ಎಂದು ಸಂಸ್ಥೆ ತಿಳಿಸಿದೆ.
ಮದುವೆ ಹಾಗೂ ಹಬ್ಬಗಳ ಸೀಸನ್‌ಗಳನ್ನು ಗಮನದಲ್ಲಿಟ್ಟುಕೊಂಡು ವಿವಿಧ ವಿನ್ಯಾಸಗಳ ಹಾರಗಳು, ಕಿವಿಯೋಲೆಗಳು, ಉಂಗುರಗಳು ಸೇರಿದಂತೆ ಹಲವಾರು ನವನವೀನ ಆಭರಣಗಳು ಈ ಉತ್ಸವದಲ್ಲಿ ಜನಾಕರ್ಷಣೆಯಾಗಿದೆ.
ಅಮೂಲ್ಯ ಡೈಮಂಡ್ಸ್ ಮತ್ತು ಕಿಸ್ನ ಡೈಮಂಡ್ & ಗೋಲ್ಡ್ ಜ್ಯುವೆಲ್ಲರಿ ಬ್ರ್ಯಾಂಡ್‌ಗಳು ಜೊತೆಯಾಗಿ ನಡೆಸುತ್ತಿರುವ ಈ ಉತ್ಸವ ಗುಣಮಟ್ಟ ಮತ್ತು ವೈವಿಧ್ಯತೆಯಲ್ಲಿಯೂ ಗಮನ ಸೆಳೆಯುತ್ತಿದೆ. ಗ್ರಾಹಕರು ಸಮೀಪದ ಮುಳಿಯ ಶೋರೂಮ್‌ಗಳಿಗೆ ಭೇಟಿ ನೀಡಿ ಈ ವಿಶೇಷ ಆಫರ್‌ಗಳನ್ನು ತಮ್ಮದಾಗಿಸಿಕೊಳ್ಳಬಹುದು.

ಪುತ್ತೂರು, ಬೆಳ್ತಂಗಡಿ, ಮಡಿಕೇರಿ ಹಾಗೂ ಗೋಣಿಕೊಪ್ಪ ಈ ನಾಲ್ಕು ಶಾಖೆಗಳಲ್ಲಿ ಡೈಮಂಡ್ ಫೆಸ್ಟ್ ನಡೆಯುತ್ತಿದೆ. ಉತ್ಸವದ ಕುರಿತು ಪ್ರತಿಕ್ರಿಯಿಸಿದ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಮಾತನಾಡಿ, “ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಆಭರಣಗಳನ್ನು ಸ್ಪರ್ಧಾತ್ಮಕ ಬೆಲೆಯಲ್ಲೇ ಒದಗಿಸುವುದು ನಮ್ಮ ಉದ್ದೇಶ. ಈ ಡೈಮಂಡ್ ಫೆಸ್ಟ್ ಮೂಲಕ ಹೆಚ್ಚಿನ ಜನರಿಗೆ ವಿಶೇಷ ಅನುಭವ ನೀಡಲು ನಾವು ಸಜ್ಜಾಗಿದ್ದೇವೆ,” ಎಂದು ತಿಳಿಸಿದ್ದಾರೆ.

Related posts

ಪಣಕಜೆ ಹೆದ್ದಾರಿಯಲ್ಲಿ ವಿದ್ಯುತ್ ವಯರ್ ಗೆ ಜೆಸಿಬಿ ತಾಗಿ ವಾಹನ ಸಂಚಾರ ಕ್ಕೆ ಆಡಚಣೆ

Suddi Udaya

ಎಸ್. ಡಿ. ಎಂ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿ ವೇದಿಕೆ ಸಿನರ್ಜಿ ಹಮ್ಮಿಕೊಂಡ “ಪ್ರೊಫೆಷನಲ್ ಸಮ್ಮರಿ” ಕಾರ್ಯಕ್ರಮ

Suddi Udaya

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ರವರಿಗೆ ಐಐಬಿ ಬೆಸ್ಟ್ ಬುಸಿನೆಸ್ ಲೀಡರ್‌ಶಿಪ್ ಅವಾರ್ಡ್ -2023 ಪ್ರಶಸ್ತಿ

Suddi Udaya

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತು ಹಾಕಿದ ಪ್ರಕರಣ: ಸ್ಥಳ ಮಹಜರಿಗೆ ಬಂದ ಎಸ್.ಐ.ಟಿ ತಂಡ

Suddi Udaya

ಬೆಳ್ತಂಗಡಿ ಚಿತ್ರಾಕೂಟ ನಾಗಬನದಲ್ಲಿ ನಾಗದೇವರಿಗೆ ಕ್ಷೀರಾಭಿಷೇಕ, ತಂಬಿಲ ಸೇವೆ

Suddi Udaya

ಹೊಸ ಬೆಳಕು ಒಕ್ಕೂಟ ಹಾಗೂ ಬೆಳ್ತಂಗಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಯೋಗದೊಂದಿಗೆ ಅಣಬೆ ಮತ್ತು ಮಲ್ಲಿಗೆ ಕೃಷಿ ತರಬೇತಿ

Suddi Udaya
error: Content is protected !!