September 6, 2026
ಚಿತ್ರ ವರದಿವರದಿಶಿಕ್ಷಣ ಸಂಸ್ಥೆ

ಆಳ್ವಾಸ್ ಪದವಿ ಕಾಲೇಜಿನಲ್ಲಿ ವಾರ್ಷಿಕ ಕಾರ್ಯಕ್ರಮ ‘ಇನಾಮು 2026’

ಮೂಡುಬಿದಿರೆ: ಆಳ್ವಾಸ್ ಪದವಿ ಕಾಲೇಜಿನ 22 ಫೋರಂಗಳ ವಾರ್ಷಿಕ ಕಾರ್ಯಕ್ರಮ ‘ಇನಾಮು 2026’  ಕೃಷಿಸಿರಿ ವೇದಿಕೆಯಲ್ಲಿ ಸಂಭ್ರಮದಿಂದ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಟ ಸ್ವರಾಜ್ ಶೆಟ್ಟಿ,  ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆಳ್ವಾಸ್‌ನಷ್ಟು ಪ್ರೋತ್ಸಾಹ ನೀಡುವ ಸಂಸ್ಥೆ ಬೇರೊಂದಿಲ್ಲ.  ಶಿಕ್ಷಣದೊಂದಿಗೆ ಮೌಲ್ಯಗಳನ್ನೂ ಬೆಳೆಸುವ ಮೂಲಕ, ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವ ಕಾರ್ಯವನ್ನು ಸಂಸ್ಥೆ ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದರು.

ಜೀವನದಲ್ಲಿ ಸೋಲುಗಳು ಸಹಜ. ಆದರೆ ಸೋಲಿಗೆ ಎದೆಗುಂದದೆ ಧೈರ್ಯದಿಂದ ಎದುರಿಸಬೇಕು. ಪ್ರತಿಯೊಂದು ಅನುಭವವೂ ಹೊಸ ಪಾಠ ಕಲಿಸುತ್ತದೆ. ಇಷ್ಟವಿಲ್ಲದ ವಿಷಯಗಳಲ್ಲಿ ತೊಡಗಿಕೊಳ್ಳಬೇಡಿ. ನಿಮ್ಮ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿ ಮುಂದುವರಿಯಿರಿ. ಸಾಧ್ಯವಾದರೆ ಇತರರನ್ನು ಪ್ರೀತಿಸಿ, ಯಾವುದೇ ಸಂದರ್ಭದಲ್ಲೂ ದ್ವೇಷಕ್ಕೆ ಅವಕಾಶ ಕೊಡಬೇಡಿ. ಸತ್ಯ, ಪ್ರಾಮಾಣಿಕತೆ, ಸಹಾನುಭೂತಿ ಮತ್ತು ದಯೆ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಜೀವನ ನಿರ್ಮಾಣ ಸಾಧ್ಯ,  ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.  

ಆಳ್ವಾಸ್ ಸಂಸ್ಥೆಯ ಸಾಧನೆಯಲ್ಲಿ ವಿದ್ಯಾರ್ಥಿಗಳ ಕೊಡುಗೆ ಅಪಾರ. ಆದ್ದರಿಂದ ನಿಮ್ಮ ಮೇಲೆ ಇರುವ ನಿರೀಕ್ಷೆಗಳು ಹೆಚ್ಚಾಗಿವೆ. ಅವುಗಳನ್ನು ಈಡೇರಿಸಲು ಶ್ರಮಿಸಿ ಎಂದು ಕರೆ ನೀಡಿದರು.
 
ತಮ್ಮ ಆರಂಭಿಕ ದಿನಗಳನ್ನು ಹಂಚಿಕೊAಡ ಅವರು, ನಾನು ನಟಿಸಿದ್ದ ಹಲವು ಸಿನಿಮಾಗಳು ವಿವಿಧ ಕಾರಣಗಳಿಂದ ಮಧ್ಯದಲ್ಲೇ ನಿಂತು ಹೋಗುತ್ತಿದವು. ಆಗ ಜನರು ನಾನು ನಟಿಸುವ ಯಾವ ಸಿನಿಮಾವು ಸಂಪೂರ್ಣಗೊಳ್ಳದು, ಬಿಡುಗಡೆಯಾಗಲಾರದು ಎಂದು ಲೇವಡಿ ಮಾಡುತ್ತಿದ್ದರು. ಆದರೆ ಇಂದು, ನನ್ನ ಸಿನಿಮಾಗಳು ದೊಡ್ಡ ಚಿತ್ರಮಂದಿರಗಳಲ್ಲಿ ಒಂದೇ ಸಮಯದಲ್ಲಿ ಮೂರು-ಮೂರು ಸ್ಕ್ರೀನ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ.  ಬಾಲ್ಯದಲ್ಲಿ ಟಿವಿಯ ಹಿಂದೆ ಹೋಗಿ ಒಳಗೆ ಹೇಗೆ ಹೋಗಬಹುದು ಎಂದು ಕುತೂಹಲದಿಂದ ಹುಡುಕುತ್ತಿದ್ದ ದಿನಗಳಿಂದ, ಇಂದು ಟಿವಿಯಲ್ಲಿ ಕಾಣಿಸಿಕೊಳ್ಳುವ ಮಟ್ಟಕ್ಕೆ ಬೆಳದಿರುವುದು ಕೇವಲ ಬದಲಾವಣೆ ಅಲ್ಲ, ಅದು ಕನಸು, ಪರಿಶ್ರಮ ಮತ್ತು ಹೋರಾಟದ ಫಲ ಎಂದರು.
 ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಅಧ್ಯಕ್ಷತೆವಹಿಸಿ ಮಾತನಾಡಿದರು. ಅಂತರ್ ಫೋರಂ ಸ್ಪರ್ಧೆಗಳಲ್ಲಿ ಎನ್‌ಎಸ್‌ಎಸ್ ಫೋರಂ ಸಮಗ್ರ ಚಾಂಪಿಯನ್ಸ್ ಪ್ರಶಸ್ತಿ ಪಡೆದರೆ, ತುಳು ಫೋರಂ ಮೊದಲ ರನ್ರ‍್ಸ್ ಅಪ್ ಹಾಗೂ ವಾಣಿಜ್ಯ ಫೋರಂ ಎರಡನೇ ರನ್ರ‍್ಸ್ ಅಪ್ ಪ್ರಶಸ್ತಿ ಪಡೆದುಕೊಂಡವು.

ಪ್ರಾಂಶುಪಾಲ ಡಾ ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಪರೀಕ್ಷಾಂಗ ಕುಲಸಚಿವ ಡಾ ನಾರಾಯಣ ಶೆಟ್ಟಿ, ಕುಲಸಚಿವ ಡಾ ಟಿಕೆ ರವೀಂದ್ರನ್,  ಕರ‍್ಯಕ್ರಮದ ಮುಖ್ಯ ಸಂಯೋಜಕ ಡಾ ಯೋಗೀಶ್ ಕೈರೋಡಿ,  ಸಂಯೋಜಕ ಮನು ಡಿಎಲ್,  ವಿದ್ಯಾರ್ಥಿ ಸಂಯೋಜಕ ನಿರ್ಮಲ್ ಪೈ ಇದ್ದರು. ಶ್ರಾವ್ಯ ಶೆಟ್ಟಿ ನಿರೂಪಣೆ, ರಶ್ಮಿ ಡಿಸಿ ಸ್ವಾಗತಿಸಿ,  ಸಾಗರ್ ವಂದಿಸಿದರು. 

Related posts

ಕಾರಿಂಜ ಮಧ್ವ ಬಳಿ ಕಾರು ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ, ಬೆಳ್ತಂಗಡಿಯ ಯುವಕ ಸ್ಥಳದಲ್ಲೆ ಸಾವು

Suddi Udaya

ಬೆಳ್ತಂಗಡಿ ಶಾಂತಿಶ್ರೀ ಜೈನ ಮಹಿಳಾ ಸಮಾಜದಿಂದ ವಿಶ್ವ ಮಹಿಳಾ ದಿನಾಚರಣೆ

Suddi Udaya

ಮದ್ದಡ್ಕ ಪಡ್ಡೆಲು ನಿವಾಸಿ ಶೀಲಾವತಿ ನಿಧನ

Suddi Udaya

ವಾಲ್ಮೀಕಿ ನಿಗಮ ಹಗರಣ: ಸಚಿವ ನಾಗೇಂದ್ರ ರಾಜೀನಾಮೆ ಆಗ್ರಹಿಸಿ ಬೆಳ್ತಂಗಡಿ ಬಿಜೆಪಿ ಧರಣಿ

Suddi Udaya

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನೋತ್ಸವದ ಪ್ರಯುಕ್ತ ಚಿತ್ತಾರ – ಚಿಣ್ಣರ ಚಿತ್ರೋತ್ಸವ’ ಚಿತ್ರಕಲೆ ಸ್ಪರ್ಧೆ

Suddi Udaya

ಲಾಯಿಲ: ಪುತ್ರಬೈಲುನಲ್ಲಿ ನೂತನ ಗ್ರಂಥಾಲಯ ಉದ್ಘಾಟನೆ

Suddi Udaya
error: Content is protected !!