September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಂಘ-ಸಂಸ್ಥೆಗಳು

ಪತಂಜಲಿ ಯೋಗ ಶಾಖೆಯಲ್ಲಿ ಶ್ರೀ ರಾಮ ನವಮಿ ಆಚರಣೆ

ಬೆಳ್ತಂಗಡಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ, ಕೇಂದ್ರ ಕಚೇರಿ ತುಮಕೂರು ಮಂಗಳೂರು ವಿಭಾಗ ಪುತ್ತೂರು ತಾಲೂಕು ಕಳಿಯ ಶಾಖೆಯಲ್ಲಿ ಶ್ರೀರಾಮ್ ರಾಮನವಮಿ ಆಚರಣೆ ಮಾಡಲಾಯಿತು.

ಗೇರುಕಟ್ಟೆ ಕ್ಷೀರ ಸಂಗಮ ಸಭಾಭವನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಶ್ರೀರಾಮ ಭಜನೆ, ಸ್ತೋತ್ರ ಪಾರಾಯಣವನ್ನು ಯೋಗ ಬಂಧುಗಳು ನಡೆಸಿಕೊಟ್ಟರು. ಭಾರತಿ ಎಂ. ಎಲ್, ಅರುಣಾ,ಪದ್ಮಲತಾ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.

ಹಿರಿಯ ಯೋಗ ಬಂಧು ದಿವಾಕರ ಆಚಾರ್ಯ ಗೇರುಕಟ್ಟೆ, ಶ್ರೀರಾಮಚಂದ್ರನ ಆದರ್ಶಗುಣಗಳ ಬಗ್ಗೆ ಬೌದ್ಧಿಕ ನೀಡಿ ಮರ್ಯಾದ ಪುರುಷೋತ್ತಮ ಶ್ರೀರಾಮಚಂದ್ರನ ಆದರ್ಶ ಗುಣಗಳ ಪಾಲನೆಯನ್ನು ಮಾಡುವುದರಿಂದ ಶಾಂತಿ ಮತ್ತು ನೆಮ್ಮದಿಯನ್ನು ಕಾಣಬಹುದೆಂದು ತಿಳಿಸಿದರು.

ಅಶೋಕ ಆಚಾರ್ಯ ಪ್ರಸಾದ ವ್ಯವಸ್ಥೆ ಮಾಡಿದ್ದರು. ವರದಿ ಪ್ರಮುಖ ಕೇಶವ ಪೂಜಾರಿ ಸ್ವಾಗತಿಸಿ ಸತೀಶ್ ಭಂಡಾರಿ ನಾಳ ವಂದಿಸಿದರು.

Related posts

ದಿಡುಪೆ ಜಲಪಾತ ವೀಕ್ಷಣೆಗೆ ಬಂದಿದ್ದವರನ್ನು ತಡೆದು ಜೀವಬೆದರಿಕೆ: ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಕೊಯ್ಯೂರು: ಶ್ರೀ ಕೃಷ್ಣ ಜನ್ಮಷ್ಟಮಿ ಸಮಿತಿ ಹಾಗೂ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಅಕ್ರಮ ಕಲ್ಲು ಕೋರೆ ವಿಷಯದಲ್ಲಿ ದಾಖಲಾದ ಎರಡು ಪ್ರಕರಣ: ರದ್ದುಗೊಳಿಸುವಂತೆ ಕೋರಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Suddi Udaya

ನಿಡ್ಲೆ: ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಓಡಿಲ್ನಾಳ ಮತ್ತು ಕುವೆಟ್ಟು ಗ್ರಾಮ ಸಮಿತಿಯ ತ್ರೈಮಾಸಿಕ ಸಭೆ ಹಾಗೂ ವನಮಹೋತ್ಸವ

Suddi Udaya

ಶಿಶಿಲ: ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya
error: Content is protected !!