September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯಕ್ಷೇತ್ರದಲ್ಲಿ ನೂತನ ವಿಕಾರ್ ಜೆನರಲ್‌ಗೆ ಸನ್ಮಾನ

ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೂತನ ವಿಕಾರ್ ಜೆನರಲ್ ಆಗಿ ನೇಮಕಗೊಂಡ ರೆ. ಫಾ. ಡಾ. ಮಾಣಿ ವೆಳುತ್ತೇಡತ್ತ್ ಪರಂಭಿಲ್ ಅವರಿಗೆ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ನಾಗರಿಕರ ಪರವಾಗಿ ಗೌರವ ಸಮರ್ಪಿಸಿ ಸನ್ಮಾನಿಸಲಾಯಿತು.

ಮೂಲತಃ ಉದನೆ ಗ್ರಾಮಕ್ಕೆ ಸೇರಿದ ಫಾ. ಮಾಣಿ ವೆಳುತ್ತೇಡತ್ತ್ ಪರಂಭಿಲ್ ಅವರು ರೋಮ್‌ನ ಪ್ರಸಿದ್ಧ ಡೆಮಿಷಿಯಾನೋ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ತಮ್ಮ ಗುರುಸೇವೆಯನ್ನು ಅವರು ಕುಂದಾಪುರ ತಾಲೂಕಿನ ಜಡ್ಕಲ್ ಮತ್ತು ಮುದೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಗಾಡಿ, ಉಜಿರೆ, ಧರ್ಮಸ್ಥಳ, ಕುಟ್ರಪಾಡಿ, ಕಂಕನಾಡಿ ಹಾಗೂ ಕೊಡಗು ಜಿಲ್ಲೆಯ ಹೊಸಕೋಟೆ ಮೊದಲಾದ ಚರ್ಚುಗಳಲ್ಲಿ ಸಮರ್ಪಕವಾಗಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ಧರ್ಮಗುರು ವಂದನೀಯ ಫಾ. ಶಾಜಿ ಮಾತ್ಯು ಅವರು, “ಸಕ್ರಿಯ ಸೇವಾಭಾವ ಮತ್ತು ಆಡಳಿತ ಸಾಮರ್ಥ್ಯ ಹೊಂದಿರುವ ಫಾ. ಮಾಣಿ ವೆಳುತ್ತೇಡತ್ತ್ ಪರಂಭಿಲ್ ಅವರ ಪದೋನ್ನತಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆಯನ್ನು ನೀಡಲಿದೆ” ಎಂದು ಅಭಿಪ್ರಾಯಪಟ್ಟರು.
ಪಾಲನಾ ಸಮಿತಿಯ ಸದಸ್ಯರಾದ ಜೋನ್ಸನ್, ರಾಜೇಶ್, ರೆಜಿ ಜೋಯ್ ಹಾಗೂ ಸಿಸ್ಟರ್ ಲಿಸ್ ಮಾತ್ಯು ಅವರು ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದರು. ಕಾರ್ಯಕ್ರಮವನ್ನು ಸುರೇಶ್ ನಿರ್ವಹಿಸಿದರು.

Related posts

ಬೆಳ್ತಂಗಡಿ ತಾ.ಪಂ. ನಲ್ಲಿ ಫೀಲ್ಡ್ ಟೆಸ್ಟ್ ಕಿಟ್ ತರಬೇತಿ

Suddi Udaya

ಹುಣ್ಸೆಕಟ್ಟೆ: ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ 26ನೇ ಸಾಮೂಹಿಕ ಸತ್ಯನಾರಾಯಣ ಪೂಜೆ

Suddi Udaya

ಶಿಶು ವೈದ್ಯೆ ಡಾ.ಶಿಲ್ಪಾ ಹೆಗ್ಡೆ ನೇತೃತ್ವದ ಮಕ್ಕಳ ಸ್ನೇಹಿ‌ ಕಲರವ ಸೆಂಟರ್ ಬೆಳ್ತಂಗಡಿಯಲ್ಲಿ ಪ್ರಾರಂಭ

Suddi Udaya

ವಕೀಲರ ಸಂಘದಿಂದ ದಕ್ಷಿಣ ಕನ್ನಡ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರ ಭೇಟಿ

Suddi Udaya

ಕೊಜಪ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ನೂತನ ಬಿಇಒ: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ವತಿಯಿಂದ ಅಭಿನಂದನೆ

Suddi Udaya
error: Content is protected !!