September 6, 2026
ಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ ಎಸ್.ಡಿ.ಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನೆ

ಉಜಿರೆ: “ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತರುವ ವೇದಿಕೆ ಬೇಸಿಗೆ ಶಿಬಿರ” ಎಂದು ಉಜಿರೆ ರುಡ್‌ಸೆಟ್ ಸಂಸ್ಥೆಯ ಹಿರಿಯ ಸಿಬ್ಬಂದಿ ಅಬ್ರಹಂ ಜೇಮ್ಸ್ ಹೇಳಿದರು.

ಇವರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ಮಾ.31 ರಿಂದ ಏ.2 ರವರೆಗೆ ನಡೆಯಲಿರುವ ಬೇಸಿಗೆ ಶಿಬಿರದ ಉದ್ಘಾಟಕರಾಗಿ ಆಗಮಿಸಿ ಕಾರ್ಯಕ್ರಮವನ್ನು ವಿಶೇಷ ರೀತಿಯಲ್ಲಿ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿ ಕನ್ನಡ ಸಂಘವು ಬಿಡುಗಡೆಗೊಳಿಸಿದ ‘ಉದ್ಘೋಷ’ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಬೇಸಿಗೆ ಶಿಬಿರದಲ್ಲಿ ವಿದ್ಯಾರ್ಥಿಗಳು ಕರಕುಶಲ ವಸ್ತುಗಳ ತಯಾರಿ, ನಾಟಕ ಪೂರ್ವರಂಗ ತಯಾರಿ, ಚಿತ್ರಕಲೆ, ಕೃತಕ ಬುದ್ಧಿಮತ್ತೆ (AI), ಕ್ರೀಡೆ, ಅಡುಗೆ, ಸಾಮರ್ಥ್ಯ ವೃದ್ಧಿ ಮುಂತಾದ ಅನೇಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲರಾದ ಮನಮೋಹನ್ ನಾಯಕ್ ಕೆ.ಜಿ. ವಹಿಸಿ ಅಧ್ಯಕ್ಷೀಯ ನುಡಿಗಳನ್ನಾಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ಶೋಭಿತ ನಿರೂಪಿಸಿ, ಶಿಕ್ಷಕಿ ಶಶಿಕಲಾ ಸ್ವಾಗತಿಸಿ, ಶಿಕ್ಷಕಿ ಸುವಿನ ವಂದಿಸಿದರು.

Related posts

ಬೆಳ್ತಂಗಡಿ ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲಾ ವಿದ್ಯಾರ್ಥಿಗಳಿಗೆ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆಯಿಂದ ಉಚಿತ ಕಲಿಕಾ ಸಾಮಗ್ರಿಗಳ ವಿತರಣೆ

Suddi Udaya

ಪೆರಿಂಜೆ: ಪೇಪರ್ ಪೆನ್ ತಯಾರಿ ಕಾರ್ಯಾಗಾರ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ

Suddi Udaya

ಎಸ್.ಎಸ್.ಎಲ್.ಸಿ ಮರುಮೌಲ್ಯಮಾಪನ: ನಾವೂರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ಅದ್ಭುತ ಸಾಧನೆ

Suddi Udaya

ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಾಣಿ ಕಾಲೇಜಿನ ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆ

Suddi Udaya

ಡ್ರಾಯಿಂಗ್ ಗ್ರೇಡ್ ಪರೀಕ್ಷೆ: ಎಕ್ಸೆಲ್ ಟೆಕ್ನೊ ಸ್ಕೂಲ್ ವೇಣೂರಿಗೆ ಶೇ.100 ಫಲಿತಾಂಶ:ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಸಂಸ್ಥೆಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಬಿ

Suddi Udaya

ರಾಜ್ಯಮಟ್ಟದ ಶ್ರೀ ಭಗವದ್ಗೀತಾ ಸ್ಪರ್ಧೆ: ಉಜಿರೆಯ ಎಸ್ ಡಿಎಂ ಪ.ಪೂ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ ಬಹುಮಾನ

Suddi Udaya
error: Content is protected !!