September 6, 2026
ತಾಲೂಕು ಸುದ್ದಿ

ಯೋಗ ಗುರು ಕುಶಾಲಪ್ಪ ಗೌಡರಿಗೆ ಕೆಎನ್ ಶೆಟ್ಟಿ ಸಂಸ್ಮರಣಾ ಪ್ರಶಸ್ತಿ

ಬೆಳ್ತಂಗಡಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ದಿ. ಕೆ. ನಾರಾಯಣ ಶೆಟ್ಟಿಯವರ 9ನೇ ಪುಣ್ಯ ತಿಥಿಯ ಸ್ಮರಣಾರ್ಥ ದಿ. ಕೆ. ನಾರಾಯಣ ಶೆಟ್ಟಿ ಸಂಸ್ಮರಣಾ ಕಾರ್ಯಕ್ರಮ ವಿಠೋಬ ದೇವಸ್ಥಾನ ರಸ್ತೆಯ ಶ್ರೀ ಕೃಷ್ಣ ಮಂದಿರದಲ್ಲಿ ನಡೆಯಿತು.

ನಗರದ ನುರಿತ ಯೋಗ ಶಿಕ್ಷಕ, ಚಿಕಿತ್ಸಕ, ಆವಿಷ್ಕಾರ ಯೋಗ, ಮಂಗಳೂರು ಇದರ ಸಂಸ್ಥಾಪಕ ಹಾಗೂ ಯೋಗ ಕ್ಷೇತ್ರದಲ್ಲಿ ಹಲವು ಸಾಧನೆ ಮತ್ತು ಜಾಗತಿಕ ದಾಖಲೆ ನಿರ್ಮಿಸಿದ ಕುಶಾಲಪ್ಪ ಗೌಡರಿಗೆ ” ಶ್ರೀ ಕೆ. ನಾರಾಯಣ ಶೆಟ್ಟಿ ಸಂಸ್ಮರಣಾ ಪ್ರಶಸ್ತಿ – 2026″ ನೀಡಿ ಸನ್ಮಾನಿಸಲಾಯಿತು.

ಪ್ರತಿಷ್ಠಾನದ ಕಾರ್ಯದರ್ಶಿ ಧನಂಜಯ ಕೆ. ಯವರು ಯೋಗಾಭ್ಯಾಸ, ಯೋಗ ಪ್ರಚಾರ ಮತ್ತು ಪ್ರತಿಷ್ಠಾನವನ್ನು ಹುಟ್ಟು ಹಾಕಿ ಅದರ ಆರಂಭಿಕ ವರ್ಷಗಳಲ್ಲಿ ತನು – ಮನ – ಧನ – ಜನ ಜೋಡಿಸಿ ಸಂಸ್ಥೆಯನ್ನು ಮುನ್ನಡೆಸಿದ ದಿ. ಶೆಟ್ಟಿಯವರ ಮೇರು ವ್ಯಕ್ತಿತ್ವದ ಬಗ್ಗೆ ಮಾಹಿತಿ ನೀಡಿದರು.

ಪ್ರತಿಷ್ಠಾನದ ಅಧ್ಯಕ್ಷ ಏಕನಾಥ ಬಾಳಿಗಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಉಪಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಮತ್ತು ಪರಮೇಶ್ವರ ಪೂಜಾರಿ ಮತ್ತಿತರ ಪದಾಧಿಕಾರಿಗಳು ಮತ್ತು ಟ್ರಸ್ಟಿಗಳು, ಕೆ. ಎನ್. ಶೆಟ್ಟಿ ಸಂಸ್ಮರಣಾ ಸಮಿತಿಯ ಸಂಚಾಲಕಿ ಭಾರತಿ ಶೆಟ್ಟಿ ಹಾಗೂ ಗೌರವ ಸಂಚಾಲಕ ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಪ್ರಭಾ ಎನ್. ವಿ. ಸ್ವಾಗತಿಸಿದರು. ಪ್ರಕಾಶ್ ಕಾಮತ್ ವಂದಿಸಿದರು. ಪ್ರೇಮಾ ಕಾಮತ್ ಪ್ರಾರ್ಥನೆ ಮಾಡಿದರು. ಭಾರತಿ ಕಾರ್ಯಕ್ರಮ ನಿರೂಪಿಸಿದರು.

Related posts

” ವಿಂಶತಿ” ಸಂಭ್ರಮದ ಆಚರಣೆ: ಎಸ್.ಡಿ.ಎಂ. ಆಂಗ್ಲ ಮಾಧ್ಯಮ (ರಾಜ್ಯಪಠ್ಯಕ್ರಮ) ಶಾಲೆಯ ವಿದ್ಯಾರ್ಥಿಗಳಿಗೆ ಹಲವು ಬಹುಮಾನಗಳು

Suddi Udaya

ಧರ್ಮಸ್ಥಳ ಮಂಜೂಷಾ ವಸ್ತುಸಂಗ್ರಹಾಲಯದಲ್ಲಿ ಪ್ರಾಚೀನ ಭಾರತದ ನಾಣ್ಯಗಳ ಪ್ರದರ್ಶನಕ್ಕೆ ಚಾಲನೆ

Suddi Udaya

ಲಾಯಿಲ: ಡಿವೈಡರ್ ಗೆ ಬೈಕ್ ಡಿಕ್ಕಿ : ಬೈಕ್ ಸವಾರ ಗಂಭೀರ

Suddi Udaya

ಕಳಿಯ ಗ್ರಾ.ಪಂ. ನಿಂದ ಯಶಸ್ವಿ ಮಾದರಿ ಜನ ಸ್ನೇಹಿ ಆಧಾರ್ ಕ್ಯಾಂಪ್ & ಅಂಚೆ ಜನ ಸಂಪರ್ಕ ಅಭಿಯಾನ

Suddi Udaya

ಅ.3-11: ಧರ್ಮಸ್ಥಳದಲ್ಲಿ ನವರಾತ್ರಿ ವೈಭವ

Suddi Udaya

ಏಪ್ರಿಲ್ 1 ರಿಂದ ಮತ್ತೆ ಹೊಸ ಪಡಿತರ ಚೀಟಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

Suddi Udaya
error: Content is protected !!