25 C
ಪುತ್ತೂರು, ಬೆಳ್ತಂಗಡಿ
September 27, 2026
ಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ: ಎಸ್.ಡಿ.ಎಂ. ಬಿ.ಎಡ್. ಕಾಲೇಜಿನಲ್ಲಿ ಯೋಗ, ರಂಗ ತರಬೇತಿ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ

ಉಜಿರೆ: ದೇಹಕ್ಕೆ ಮತ್ತು ಮನಸ್ಸಿಗೆ ಆರೋಗ್ಯ ಕೊಡುವ ಸಾಧನವೇ ಯೋಗ. ಯೋಗ ಮಾಡಲು ಯೋಗ ಬೇಕು. ಮಾನಸಿಕ ಹಾಗೂ ದೈಹಿಕ ಸ್ವಸ್ಥತೆ ಶಿಕ್ಷಕರಿಗೆ ಮುಖ್ಯ. ಉತ್ತಮ ಶಿಕ್ಷಕರಾಗಲು ಯೋಗದ ತಿಳುವಳಿಕೆ ಅಗತ್ಯವಿದೆ ಎಂದು ಉಜಿರೆಯ ಪ್ರಕೃತಿ ಮತ್ತು ಯೋಗ ವಿಜ್ಞಾನ ವಿದ್ಯಾಲಯದ ಡೀನ್ ಡಾ. ಶಿವಪ್ರಸಾದ್ ಕೆ. ಇವರು ಎಸ್.ಡಿ.ಎಮ್. ಬಿ.ಎಡ್ ಕಾಲೇಜಿನಲ್ಲಿ ನಡೆದ ಯೋಗ, ರಂಗ ತರಬೇತಿ ಹಾಗೂ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲಿಸಿ ಮಾತನಾಡಿದರು.

ಎಸ್. ಡಿ. ಎಂ. ಬಿ.ಎಡ್. ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂತೋಷ್ ಆಲ್ಬರ್ಟ್ ಸಲ್ಡಾನ್ಹ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ಯೋಗ ಮತ್ತು ಕಲೆಯನ್ನು ಸಮರ್ಪಕವಾಗಿ ತನ್ನ ಜೀವನದಲ್ಲಿ ಅಳವಡಿಸಿಕೊಂಡಾಗ ಶಿಕ್ಷಕನು ಪರಿಪೂರ್ಣನಾಗುತ್ತಾನೆ ” ಎಂದು ಹೇಳಿದರು. ಹಾಗೆಯೇ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿ ಶಿಕ್ಷಕನಾದವನು ತಾರತಮ್ಯವನ್ನು ಮಾಡದೇ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಉತ್ತೇಜಿಸುವ ಕಾರ್ಯವನ್ನು ಮಾಡಬೇಕು. ವಿದ್ಯಾರ್ಥಿ ಸಂಘದ ಸದಸ್ಯರು ತಮ್ಮ ಅಧಿಕಾರವನ್ನು ಸಂವಿಧಾನದ ಆಶಯಗಳಿಗೆ ಪೂರಕವಾಗುವಂತೆ ಬಳಸಬೇಕು ಎಂದು ಹೇಳಿದರು. ವೇದಿಕೆಯಲ್ಲಿ ವಿದ್ಯಾರ್ಥಿ ಸಂಘದ ನಾಯಕಿ ಶ್ರವಣ ಮಹಾಪುರುಷ ಮತ್ತು ಉಪನಾಯಕಿ ಧನುಶ್ರೀ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಲ್ಲಾ ಉಪನ್ಯಾಸಕ ವರ್ಗದವರು, ಪ್ರಥಮ ಮತ್ತು ದ್ವಿತೀಯ ಬಿ.ಇಡಿ. ಯ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಾದ ಪೂಜಾಶ್ರೀ ಸ್ವಾಗತಿಸಿ, ವಿಜೇತ ಅತಿಥಿ ಪರಿಚಯಿಸಿ, ಪ್ರಿಯಾ ವಂದಿಸಿ, ಲೀಜಾ ಮತ್ತು ನಿಖಿತ ಕಾರ್ಯಕ್ರಮ ನಿರೂಪಿಸಿದರು.

Related posts

ನಿಡ್ಲೆ: ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಶ್ರೀ ಗುರುದೇವ ಪ್ರ.ದ. ಕಾಲೇಜಿನಲ್ಲಿ ಬಿ.ಕಾ೦ ವಿದ್ಯಾರ್ಥಿಗಳಿಗೆ ಪ್ರಾಡಕ್ಟ್ ಲಾಂಚ್ ಸ್ಪರ್ಧೆ

Suddi Udaya

ಗುಂಡೂರಿ ಸ.ಕಿ.ಪ್ರಾ. ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಕೊಯ್ಯೂರು ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವಯೋಗ ದಿನಾಚರಣೆ

Suddi Udaya

ಬೆಳ್ತಂಗಡಿ: ಶ್ರೀ ಗುರುದೇವ ಪ್ರ.ದರ್ಜೆ ಕಾಲೇಜಿನ ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

Suddi Udaya

ಅರಸಿನಮಕ್ಕಿ ಶ್ರೀ ಗೋಪಾಲಕೃಷ್ಣ ಅ.ಹಿ.ಪ್ರಾ. ಶಾಲಾ ಸಂಸತ್ತು ಚುನಾವಣೆ

Suddi Udaya
error: Content is protected !!