25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಿಕ್ಷಣ ಸಂಸ್ಥೆ

ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ನೃತ್ಯ ಹಾಗೂ ಸಂಗೀತ ಸಮಾರೋಪ

ಧರ್ಮಸ್ಥಳ: ಶ್ರೀ .ಧ .ಮ .ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಸಕ್ತ ವರ್ಷದ ಭರತನಾಟ್ಯ ಹಾಗೂ ಸಂಗೀತ ತರಗತಿಗಳ ಸಮಾರೋಪ ಸಮಾರಂಭ ನೆರವೇರಿತು.

ಮುಖ್ಯ ಅತಿಥಿ ಸಂಗೀತ ಶಿಕ್ಷಕಿ ಕು. ಸುಪ್ರೀತಾ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಅವರು ಮಕ್ಕಳಿಗೆ ಯಾವತ್ತೂ ಶಿಸ್ತು ಎಲ್ಲಾ ಕ್ಷೇತ್ರಗಳಲ್ಲೂ ಬಹಳ ಮುಖ್ಯ ವಾಗಿದೆ. ವಿದ್ಯೆಯ ಜೊತೆಗೆ ಸಹಪಠ್ಯ ಚಟುವಟಿಕೆ ಯಲ್ಲಿ ಹೆಚ್ಚು ಭಾಗವಹಿಸಿ ತೃಪ್ತಿ ಯನ್ನು ಪಡೆದುಕೊಳ್ಳಬೇಕು ಎಂದು ಹಿತವಚನವನ್ನು ನೀಡಿದರು.

ಶಾಲಾ ನೃತ್ಯ ತರಬೇತಿ ಗುರುಗಳಾದ ವಿದೂಷಿ ವಿದ್ಯಾ ಠೋಸರ್ ಮಕ್ಕಳಿಗೆ ಶುಭಾಶಯ ಕೋರಿದರು. ಅಭಿನವ ಭಾರತ ಗುರುಕುಲ ಎಸ್ ವ್ಯಾಸಾ ಯುನಿವರ್ಸಿಟಿ ಜುಲೈನಲ್ಲಿ ಆಯೋಜಿಸಿದ್ದ ಭರತನಾಟ್ಯ ಆರಂಭ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿನಿಯರಾದ ಮಾನ್ವಿ, ಯುಕ್ತಿ, ತನ್ವಿ, ಸಂಚಯಾ,ಅಧ್ವಿಕಾ ಇವರಿಗೆ ಕಾರ್ಯಕ್ರಮದಲ್ಲಿ ಅಂಕ ಪಟ್ಟಿ ವಿತರಣೆ ಮಾಡಿ ಅಭಿನಂದನೆ ಸಲ್ಲಿಸಲಾಯಿತು.

ಸಂಗೀತ ತರಬೇತಿ ನೀಡಿದ ಗುರು ಸುಗುಣ ವಿ. ಕೆ. ಆಚಾರ್ಯ ರವರು ಮಕ್ಕಳಿಗೆ ಶುಭಾಶಯ ಕೋರಿ ಪೋಷಕರ ಪಾತ್ರವನ್ನು ವಿವರಿಸಿದರು. ಮುಖ್ಯಶಿಕ್ಷಕಿ ಪರಿಮಳ ಎಂ ವಿ ರವರು ಮಾರ್ಗದರ್ಶನ ನೀಡಿದರು.

ವೇದಿಕೆಯಲ್ಲಿ ನೃತ್ಯ ಹಾಗೂ ಸಂಗೀತ ಉಸ್ತುವಾರಿ ಶಿಕ್ಷಕಿ ಅಮೃತ ವಿ ಶೆಟ್ಟಿ ವಿಧ್ಯಾರ್ಥಿಗಳಿಗೆ ಅಭಿನಯದ ಮಹತ್ವವಿವರಿಸಿದರು. ಕು. ಅಧ್ವಿಕಾ ಹಾಗೂ ಕು. ಅದಿತಿ ಕಾರ್ಯಕ್ರಮ ನಿರೂಪಿಸಿ, ಕು. ಸಾಕ್ಷಿ ಸ್ವಾಗತಿಸಿ ,ಕು. ರಿಷಿಕಾ ವಂದಿಸಿದರು. ಕು. ಪೂರ್ಣಶ್ರೀ ಅತಿಥಿಗಳ ಪರಿಚಯ ಮಾಡಿದರು.

Related posts

ಅಯೋಧ್ಯೆ ನಗರದ ಶ್ರೀ ರಾಮ ಪ್ರತಿಷ್ಠಾ ಕಾರ್ಯಕ್ರಮದ ಅಂಗವಾಗಿ ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಫಲ್ಗುಣಿ ಮಹಿಳಾ ಮಂಡಳಿ ವತಿಯಿಂದ ರಾಮತಾರಕ ಮಂತ್ರ ಪಠಣ ಹಾಗೂ ಹರಿಕಥಾ ಸತ್ಸಂಗ

Suddi Udaya

ಲಾಯಿಲ ಕನ್ನಾಜೆ ನಿವಾಸಿ ಸೇಸಪ್ಪ ಸಪಲ್ಯ ನಿಧನ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾ ಗಾಂಧಿಯವರ ಪುಣ್ಯ ಸ್ಮರಣೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಜನ್ಮ ದಿನಾಚರಣೆ

Suddi Udaya

ತಿಮರೋಡಿ ಗಡಿಪಾರು ಆದೇಶ ಪ್ರಕರಣ: ಹೈಕೋರ್ಟ್ ನಲ್ಲಿ ಅ.13 ಕ್ಕೆ ವಿಚಾರಣೆ ಮುಂದೂಡಿಕೆ

Suddi Udaya

ಉಜಿರೆ ಶ್ರೀ ಧ.ಮಂ.ಅ. ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕ ಸುರೇಶ್ ಕೆ. ಸೇವಾ ನಿವೃತ್ತಿ

Suddi Udaya

ಬೆಳ್ತಂಗಡಿ : ದಕ್ಷ ಅಧಿಕಾರಿ,ಅಬಕಾರಿ ನಿರೀಕ್ಷಕರಾದ ಸೌಮ್ಯಲತಾರವರಿಗೆ ಪದೋನ್ನತಿ: ಮಂಗಳೂರು ಉಪವಿಭಾಗದ ಉಪ ಅಧೀಕ್ಷಕರಾಗಿ ವರ್ಗಾವಣೆ

Suddi Udaya
error: Content is protected !!