27.1 C
ಪುತ್ತೂರು, ಬೆಳ್ತಂಗಡಿ
September 27, 2026
ಧಾರ್ಮಿಕಪ್ರಮುಖ ಸುದ್ದಿ

ಬೆಳ್ತಂಗಡಿ ಪಟ್ಟಣದಲ್ಲಿ ಸರ್ವಿಸ್ ರಸ್ತೆ ರದ್ದುಪಡಿಸಲು ಲೋಕೋಪಯೋಗಿ ಇಲಾಖೆಯ ಸಚಿವರಿಗೆ ವರ್ತಕರ ಸಂಘದಿಂದ ಮನವಿ

ಬೆಳ್ತಂಗಡಿ: ವರ್ತಕರ ಸಂಘದಿಂದ ಬೆಳ್ತಂಗಡಿ ಪಟ್ಟಣದಲ್ಲಿ ಸರ್ವಿಸ್ ರಸ್ತೆಯಿಂದ ವರ್ತಕರಿಗೆ ಹಾಗೂ ಸಾರ್ವಜನಿಕರಿಗೆ ಅನಾನುಕೂಲತೆ ಬಗ್ಗೆ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕೆ ಹೊಲಿಯವರನ್ನು ಭೇಟಿ ಮಾಡಿ ತಮ್ಮ ಕಲವಳಗಳನ್ನೂ ವ್ಯಕ್ತಪಡಿಸಿದರು.

ಈಗಾಗಲೇ ಸರ್ವಿಸ್ ರಸ್ತೆ ಸಂಪೂರ್ಣಗೊಂಡ ಸ್ಥಳಗಳಲ್ಲಿ ಹಲವಾರು ಅಂಗಡಿಗಳು ಬಂದ್ ಆಗಿವೆ, ಆಫಘಾತಗಳು ಹಾಗೂ ಟ್ರಾಫಿಕ್ ಜಾಮ್ ಜಾಸ್ತಿಯಾಗುತ್ತಿವೆ. ವಾಹನಗಳನ್ನು ಪಕ್ಕಕ್ಕೆ ಸರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಪಟ್ಟಣ ವ್ಯಾಪ್ತಿಯಲ್ಲಿ ವಾಸಿಸುವ ವ್ಯಾಪಾರ ಸಮುದಾಯ ಹಾಗೂ ಸಾರ್ವಜನಿಕರ ಯೋಗ ಕ್ಷೇಮ ಕಾಪಾಡುವ ಸಲುವಾಗಿ ಸೇವಾ ರಸ್ತೆಯನ್ನು ತ್ಯಜಿಸಿ ಏಕ ರಸ್ತೆಯ ಬದಲಿಗೆ ಡ್ಯೂಯೆಲ್ ರಸ್ತೆಯನ್ನು ಆಗಳಗೊಳಿಸಬೇಕಾಗಿ ಚರಂಡಿಯನ್ನು ರಸ್ತೆ ಮಧ್ಯದಿಂದ ರಸ್ತೆಬದಿಗೆ ಹಾಕಲು ವಿನಂತಿಸಿದ್ದಾರೆ.

ಸಚಿವರು ಈ ಬಗ್ಗೆ ಪರಿಶೀಲಿಸಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಇದಕ್ಕೆ ಅಗತ್ಯವಿರುವುದನ್ನು ಮಾಡುತ್ತೇನೆ ಎಂದು ಭರವಸೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷರಾದ ರೋನಾಲ್ಡ್ ಲೋಬೊ, ಉಪಾಧ್ಯಕ್ಷ ಶಶಿಧರ್ ಪೈ, ಸದಸ್ಯರಾದ ವಿಲ್ಸನ್ ಗೊನ್ಸಲ್ವಿಸ್, ಶೀತಲ್ ಜೈನ್, ಜೂಡ್ ಲೋಬೊ, ಜೈಸನ್ ಡಿಸೋಜಾ, ಎಂ.ಎಚ್. ಅಬೂಬಕ್ಕರ್, ಶರ್ಮಿಳಾ ಮೋರಸ್, ಲಿಡ್ವಿನ್ ಟೆಲ್ಲಿಸ್, ವಿವೈನ್ ಡಿಸೋಜಾ, ಲಕ್ಷ್ಮಣ್ ಶೆಟ್ಟಿ ಹಾಗೂ ವಾಲ್ಟರ್ ಗೋವಿಯಸ್ ಉಪಸ್ಥಿತರಿದ್ದರು.

Related posts

ಕೊಕ್ಕಡ ಗ್ರಾ.ಪಂ. ನಲ್ಲಿ ಶಿಕ್ಷಣ ಸಂವಹನ ಕಾರ್ಯಕ್ರಮ

Suddi Udaya

ಉಜಿರೆ: ಯಕ್ಷಗಾನ ನಾಟ್ಯ ತರಬೇತಿಯ ಉದ್ಘಾಟನೆ

Suddi Udaya

ಮುಂಡಾಜೆ: ವಿದ್ಯುತ್ ಲೈನ್ ಮೇಲೆ ಬಿದ್ದ ಮರ: ಗುಡ್ಡಕ್ಕೆ ಬೆಂಕಿ

Suddi Udaya

ಮೇ 3: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 53 ನೇ ವರ್ಷದ ಉಚಿತ ಸಾಮೂಹಿಕ ವಿವಾಹ: ಅರ್ಜಿ ಆಹ್ವಾನ

Suddi Udaya

ಕುಣಿತಾ ಭಜನೆಯೊಂದಿಗೆ ಹುಟ್ಟು ಹಬ್ಬ ಆಚರಣೆ

Suddi Udaya

ನಿಡ್ಲೆ: ಭಾರತೀಯ ಮಜ್ದೂರ್ ಸಂಘ, ಕರ್ನಾಟಕ ರಾಜ್ಯ ಅಭ್ಯಾಸವರ್ಗದ ಉದ್ಘಾಟನಾ ಕಾರ್ಯಕ್ರಮ

Suddi Udaya
error: Content is protected !!