25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅವಶ್ಯವಿರುವ ರಸ್ತೆ ಮತ್ತು ಸೇತುವೆ ರಚನೆ ಕಾಮಗಾರಿ ಅನುದಾನಕ್ಕೆ ಲೋಕೋಪಯೋಗಿ ಸಚಿವರಿಗೆ ಮನವಿ

ಬೆಳ್ತಂಗಡಿ. ತಾಲೂಕಿನ ನಾರಾವಿ-ಪಾಣಾಲು-ಮಾವಿನಕಟ್ಟೆ ಜಿಲ್ಲಾ ಮುಖ್ಯ ರಸ್ತೆ ಕಿ.ಮೀ 0.80 ರಿಂದ 9.10ರವರೆಗೆ ಅಭಿವೃದ್ಧಿ, ಬದ್ಯಾರು ಸವಣಾಲು ಜಿಲ್ಲಾ ಮುಖ್ಯ ರಸ್ತೆ ಕಿ.ಮೀ 3.00 ರಿಂದ 6.80ರವರೆಗೆ ಅಭಿವೃದ್ಧಿ. ದಿಡುಪೆ-ಸಂಸೆ ರಸ್ತೆ ಕಿ.ಮೀ 0.00 ರಿಂದ 9. 00 ರವರೆಗೆ ರಸ್ತೆ ಕಾಂಕ್ರಿಟೀಕರಣ ಅಭಿವೃದ್ಧಿ. ಚಾರ್ಮಾಡಿ ಗ್ರಾಮದ ಕುಂಡೊಟ್ಟು ಎಂಬಲ್ಲಿ ಕಾಲುಸಂಕ ರಚನೆ ತೋಟತ್ತಾಡಿ ಗ್ರಾಮದ ದಡ್ಡು ಎಂಬಲ್ಲಿ ಸೇತುವೆ ರಚನೆ ಕಾಮಗಾರಿ, ಬೆಳ್ತಂಗಡಿ ನಗರದಲ್ಲಿ ಲೋ.ಇ ಸಿಬ್ಬಂದಿಗಳ ವಸತಿಗೃಹ ನಿರ್ಮಾಣಕ್ಕೆ. ಅನುದಾನ ಒದಗಿಸುವಂತೆ ಮತ್ತು ತಾಲೂಕಿನ ಶಿಶಿಲ ಗ್ರಾಮದ ಶಿಶಿಲೇಶ್ವರ ದೇವಸ್ಥಾನದ ಬಳಿ ಕಪಿಲ ನದಿಗೆ ಸೇತುವೆ ನಿರ್ಮಾಣ ಕಾಮಗಾರಿಗೆ ಸನ್ಮಾನ್ಯ ಮುಖ್ಯಮಂತ್ರಿಯವರ ಟಿಪ್ಪಣಿ ಮೇರೆಗೆ 275.00ಲಕ್ಷಗಳ ಅನುದಾನ(ಲೆ.ಶೀ.5054-03-101-0-02-132 ಪ್ರಮೂಖ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ) ಬಿಡುಗಡೆಗೆ ಆದೇಶವಾಗಿದ್ದು . ಆದರೆ ಸದ್ರಿ ಸೇತುವೆ ನಿರ್ಮಾಣ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ಅಂದಾಜು ಮೊತ್ತದಂತೆ ಈ ಕಾಮಗಾರಿಗೆ 499.36 ಲಕ್ಷಗಳ ಅನುದಾನ ಬೇಕಾಗಿದ್ದು. ಹಾಗಾಗಿ ಈ ಕಾಮಗಾರಿಗೆ ಹೆಚ್ಚುವರಿ ಅನುದಾನ ಬಿಡುಗಡೆಗೆ ಮತ್ತು ಅತಿ ಅವಶ್ಯವಿರುವ ಉಪ್ಪಿನಂಗಡಿ – ಗುರುವಾಯನಕೆರೆ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡುವಂತೆ ಲೋಕೋಪಯೋಗಿ ಸಚಿವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮನವಿಯನ್ನು ನೀಡಿದರು. ಮನವಿಗೆ ಸಚಿವರು ಪೂರಕವಾಗಿ ಸ್ಪಂದಿಸಿದರು.

Related posts

ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಶಾಂತ್ ಪ್ರತಿನಿಧಿಸಿದ ತಂಡ ರಾಷ್ಟ್ರಮಟ್ಟದಲ್ಲಿ ಪ್ರಥಮ

Suddi Udaya

ಕೊಲ್ಲಿ: ಸೂರ್ಯ – ಚಂದ್ರ ಜೋಡುಕರೆ ಕಂಬಳ ಸಮಿತಿಗೆ ಡಾ. ಹೆಗ್ಗಡೆಯವರು ಮಂಜೂರು ಮಾಡಿದ 2 ಲಕ್ಷದ ಚೆಕ್ ಹಸ್ತಾಂತರ

Suddi Udaya

ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ: ಪಾದಯಾತ್ರಿಗಳಿಗೆ ಸ್ವಾಗತ ಕಾರ್ಯಾಲಯ ಉದ್ಘಾಟನೆ

Suddi Udaya

ಉಜಿರೆ : ಕಾರು ಹಾಗೂ ಸ್ಕೂಟರ್ ನಡುವೆ ಅಪಘಾತ: ಸ್ಕೂಟರ್ ನಲ್ಲಿದ್ದ ಮಹಿಳೆಗೆ ಗಂಭೀರ ಗಾಯ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ಆಶ್ರಯದಲ್ಲಿ ಇಕೋಫ್ರೆಶ್ ಎಂಟರ್‌ ಪ್ರೈಸಸ್ ಬೆಳ್ತಂಗಡಿ-ಪುತ್ತೂರು ಇದರ ಸಹಯೋಗದೊಂದಿಗೆ ರೈತರಿಗಾಗಿ ಕೃಷಿ ಉಪಕರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟನೆ

Suddi Udaya

ಕೊಕ್ಕಡ ಜೇಸಿಐ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸಂತೋಷ ಕುಮಾರ್ ಜೈನ್, ಕಾರ್ಯದರ್ಶಿ ಅಕ್ಷತ್ ರೈ

Suddi Udaya
error: Content is protected !!