25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಿಕ್ಷಣ ಸಂಸ್ಥೆ

ಉಜಿರೆ ಎಸ್‌ಡಿಎಂ ನ್ಯಾಚುರೋಪತಿ ಕಾಲೇಜಿನ ಉಪಪ್ರಚಾರ್ಯೆ ಡಾ. ಸುಜಾತಾ ಕೆ.ಜೆ. ಅವರಿಗೆ ಗೌರವಾರ್ಪಣೆ

ಬೆಳ್ತಂಗಡಿ: 2026 ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಕರ್ನಾಟಕದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (RGUHS), ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕ್ಷೇತ್ರಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಳಿಗಾಗಿ ಡಾ. ಸುಜಾತಾ ಕೆ.ಜೆ. ಅವರನ್ನು ಗೌರವಿಸಲಾಯಿತು.

ಡಾ. ಸುಜಾತಾ ಕೆ.ಜೆ. ಅವರು ಪ್ರಕೃತಿ ಚಿಕಿತ್ಸಾ ಮತ್ತು ಯೋಗ ಕ್ಷೇತ್ರದಲ್ಲಿ ಪ್ರಸಿದ್ಧ ಶಿಕ್ಷಣ ತಜ್ಞೆ , ವೈದ್ಯರು ಮತ್ತು
ಸಂಶೋಧಕರಾಗಿದ್ದು, ಮೂರು ದಶಕಗಳಿಗಿಂತ ಹೆಚ್ಚು ಕಾಲದ ಬೋಧನೆ ಮತ್ತು ವೈದ್ಯಕೀಯ ಅನುಭವವನ್ನು ಹೊಂದಿದ್ದಾರೆ.
ಯೋಗದಲ್ಲಿ Ph.D  ಪದವಿ ಮತ್ತು ಸ್ನಾತಕೋತ್ತರ ವಿಶೇಷತೆಯನ್ನು ಹೊಂದಿರುವ ಅವರು, ಶಿಕ್ಷಣ, ಸಂಶೋಧನೆ ಮತ್ತು ಸಂಸ್ಥಾ ನಾಯಕರಾಗಿ ಸಮಗ್ರ ಆರೋಗ್ಯ ಸೇವೆಯನ್ನು ಉತ್ತೇಜಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಅವರು ಪ್ರಸ್ತುತ  SDMCNYS  ಉಜಿರೆ ಸಂಸ್ಥೆಯಲ್ಲಿ ಉಪ ಪ್ರಾಚಾರ್ಯೆ, ಡೀನ್, ಹೈಡ್ರೋಥೆರಪಿ ವಿಭಾಗದ
ಪ್ರಾಧ್ಯಾ ಪಕಿ ಮತ್ತು ಮುಖ್ಯಸ್ಥೆ, ಹಾಗೂ PG ಸಂಯೋ ಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು RGUHS ನ ಬೋರ್ಡ್ ಆಫ್ ಸ್ಟಡೀಸ್ (BOS) ಸದಸ್ಯೆಯಾಗಿಯೂ, ಭಾರತ ಸರ್ಕಾರದ ನ್ಯಾ ಕ್ (NAAC) ಸದಸ್ಯೆಯಾಗಿಯೂ ಸಹ ಸೇವೆ ಸಲ್ಲಿಸುತ್ತಿದ್ದಾರೆ.

ಸಕ್ರೀಯ ಸಂಶೋಧಕರಾದ ಡಾ. ಸುಜಾತಾ ಅವರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಜರ್ನಲ್ ಗಳಲ್ಲಿ 70ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, ವಿಶ್ವದ ವಿವಿಧ ಸಮ್ಮೇಳನಗಳಲ್ಲಿ ತಮ್ಮ ಸಂಶೋಧನಾ ಕೆಲಸವನ್ನು ಪ್ರಸ್ತುತಪಡಿಸಿ, ಸಾಕ್ಷ್ಯಾಧಾರಿತ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಚಿಕಿತ್ಸೆಗೆ ನೀಡಿದ ಕೊಡುಗೆಗಾಗಿ ಪ್ರಶಂಸೆಗಳನ್ನು ಗಳಿಸಿದ್ದಾರೆ.
ಪ್ರತಿಷ್ಠಿತ ಶೈಕ್ಷಣಿಕ ನಾಯಕಿ, ಪರೀಕ್ಷಕಿ, Ph.D  ಮಾರ್ಗದರ್ಶಕಿ ಮತ್ತು ಭಾಷಣಕಾರರಾಗಿ, ಅವರು ಪಠ್ಯಕ್ರಮ ಅಭಿವೃದ್ಧಿ, ಸಂಶೋಧನಾ ಮಾರ್ಗದರ್ಶನ ಮತ್ತು ಸಾರ್ವಜನಿಕ ಆರೋಗ್ಯ ಜಾಗೃತಿ ಕಾರ್ಯ ಕ್ರಮಗಳಲ್ಲಿ ಶಿಬಿರಗಳು ಮತ್ತು Out reach ಕಾರ್ಯಕ್ರಮಗಳ (ಅರಿವು ಮೂಡಿಸುವ ಕಾರ್ಯ ಕ್ರಮ) ಮೂಲಕ ಮಹತ್ವದ ಕೊಡುಗೆ ನೀಡಿದ್ದಾರೆ.

ಸಮಗ್ರ ಚಿಕಿತ್ಸಾ ವಿಧಾನ, ಶಿಕ್ಷಣ ಮತ್ತು ಸಂಶೋ ಧನೆಯ ಮೇಲಿನ ಅವರ ಸಮರ್ಪ ಣೆ, ಇಂದಿಗೂ ಸಮಗ್ರ ವೈ ದ್ಯಕೀಯ ಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಪ್ರೇರೇಪಿಸುತ್ತಲೇ ಇದೆ.

Related posts

ಉಜಿರೆ ಎಸ್.ಡಿ.ಎಂ ಪಾಲಿಟೆಕ್ನಿಕ್ ನಲ್ಲಿ ಓಣಂ ಆಚರಣೆ

Suddi Udaya

ಉಜಿರೆ: ರುಡ್ ಸೆಟ್ ಸಮೀಪ ರಸ್ತೆಗೆ ಬಿದ್ದ ಮರ: ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ತೆರವು ಕಾರ್ಯ

Suddi Udaya

ಲೋಕಸಭಾ ಚುನಾವಣೆ : ನಾಳೆ ಚುನಾವಣಾ ಆಯೋಗದಿಂದ ವೇಳಾಪಟ್ಟಿ ಪ್ರಕಟ

Suddi Udaya

ಕಾಯರ್ತಡ್ಕ ಪ್ರೌಢಶಾಲೆಗೆ ಶೌಚಾಲಯ ಹಸ್ತಾಂತರ

Suddi Udaya

ರವಿ ಕಕ್ಕೆಪದವು ರವರಿಗೆ ತೆರೆಮರೆಯ ನಾಯಕ ಪುರಸ್ಕಾರ

Suddi Udaya

ನಾಳ: ಶಿಥಿಲ ಗೊಂಡ ಅಂಗನವಾಡಿ ಕೇಂದ್ರಕ್ಕೆ ತಡೆ ಬೇಲಿ ಹಾಗೂ ನೂತನ ಕಟ್ಟಡ ರಚನೆಗೆ ಪೋಷಕರ ಆಗ್ರಹ

Suddi Udaya
error: Content is protected !!